Asianet Suvarna News Asianet Suvarna News

ಚೀನಾ ಗಡಿಗಳನ್ನು ಬಲಪಡಿಸಲು 2000 Drone ಖರೀದಿಸಲಿದೆ ಮೋದಿ ಸರ್ಕಾರ

ಈ ಡ್ರೋನ್‌ಗಳು ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸುತ್ತದೆ ಮತ್ತು ಬಲವನ್ನು ಹಲವು ಪಟ್ಟುಗಳಷ್ಟು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. 

india is buying over 2000 drones there is a himalayan advantage to gain ash
Author
First Published Oct 26, 2022, 10:31 AM IST

ಪೂರ್ವ ಲಡಾಖ್‌ನಲ್ಲಿ (Ladakh) ಭಾರತ (India) ಮತ್ತು ಚೀನಾದ (China) ಸಶಸ್ತ್ರ ಪಡೆಗಳಿಂದ (Armed Forces) ಎಲ್ಲಾ ಘರ್ಷಣೆಯ ಬಿಂದುಗಳಲ್ಲಿ ಸೈನಿಕರನ್ನು ಹಿಂಪಡೆಯಲಾಗುತ್ತಿದೆ. ಈ ಹಿನ್ನೆಲೆ ರಿಮೋಟ್‌ ಮೂಲಕ ನಿರ್ವಹಿಸುವ ಪೈಲಟ್ ವೈಮಾನಿಕ ವಾಹನಗಳು (Remotely Piloted Aerial Vehicles) (RPAV) ಸೇರಿದಂತೆ ಸಂಪೂರ್ಣ ಬಿಡಿಭಾಗಗಳೊಂದಿಗೆ 2000 ಡ್ರೋನ್‌ಗಳನ್ನು ಖರೀದಿಸಲು ಒಂದು ವಾರದೊಳಗೆ ಪ್ರಸ್ತಾವನೆಗಾಗಿ ಕೇಂದ್ರ ಸರ್ಕಾರವು ಪ್ರಯತ್ನ ನಡೆಸುತ್ತಿದೆ. ಒಂದು ವಾರದ ಅವಧಿಯಲ್ಲಿ ಒಟ್ಟು ಐದು ಬಾರಿ ಪ್ರಸ್ತಾವನೆಗಾಗಿ ಮನವಿ ಮಾಡಿದ್ದು (Requests for Proposal) (RFP), ಈ ಎಲ್ಲಾ ಕಣ್ಗಾವಲು ಡ್ರೋನ್‌ಗಳು ಮತ್ತು RPAVಗಳನ್ನು ಚೀನಾದೊಂದಿಗೆ ಉತ್ತರದ ಗಡಿಗಳಲ್ಲಿ ನಿಯೋಜಿಸಲು ತುರ್ತು ಖರೀದಿಯ ಅಡಿಯಲ್ಲಿ ತ್ವರಿತ-ಪಥದ ಕಾರ್ಯವಿಧಾನದ ಮೂಲಕ ಖರೀದಿಸಲಾಗುತ್ತಿದೆ.

ಭಾರತವು ತನ್ನ ಉತ್ತರದ ಗಡಿಗಳನ್ನು ಭದ್ರಪಡಿಸಿಕೊಳ್ಳಲು 2000 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಸಂಗ್ರಹಿಸುವ ಅಗತ್ಯದ ಬಗ್ಗೆ ಏಷ್ಯಾನೆಟ್‌ ನ್ಯೂಸ್‌ ಇಂಗ್ಲೀಷ್‌ ಜತೆಗೆ ಮಾತನಾಡಿದ ತಜ್ಞರು, ಈ ಡ್ರೋನ್‌ಗಳು ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸುತ್ತದೆ ಮತ್ತು ಬಲವನ್ನು ಹಲವು ಪಟ್ಟುಗಳಷ್ಟು ಹೆಚ್ಚಿಸುತ್ತದೆ ಎಂದಿದ್ದಾರೆ. ಯುದ್ಧದ ಭವಿಷ್ಯವು ತಂತ್ರಜ್ಞಾನ-ಚಾಲಿತವಾಗಿದೆ ಮತ್ತು ಆದ್ದರಿಂದ, ಡ್ರೋನ್ ತರಹದ ವ್ಯವಸ್ಥೆಗಳನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.  

ಇದನ್ನು ಓದಿ: ನಾವು ಗಡಿ ಕಾಯ್ತಿದ್ದೇವೆ; ನೀವು ಚಿಂತೆ ಮಾಡದೆ ದೀಪಾವಳಿ ಆಚರಿಸಿ: Indian Army

ಇನ್ನು, ಈ ಬಗ್ಗೆ ಭಾರತೀಯ ಸೇನೆಯ ಮಾಜಿ ಅಧಿಕಾರಿ ಮತ್ತು ರಕ್ಷಣಾ ತಜ್ಞ ಲೆಫ್ಟಿನೆಂಟ್ ಜನರಲ್ (ನಿವೃತ್ತ) ವಿ.ಕೆ ಚತುರ್ವೇದಿ ಏಷ್ಯಾನೆಟ್ ನ್ಯೂಸ್ ಇಂಗ್ಲೀಷ್‌ನೊಂದಿಗೆ ಮಾತನಾಡಿದ್ದು, "ಡ್ರೋನ್‌ಗಳು ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಕಣ್ಗಾವಲು ಅಥವಾ ಗುಪ್ತಚರ-ಸಂಗ್ರಹಣೆ ಉದ್ದೇಶಗಳಿಗಾಗಿ ಬಹಳ ಮುಖ್ಯವಾಗಿವೆ. ಅವು ಬಹಳಷ್ಟು ಕೆಲಸ ಮತ್ತು ಕಾರ್ಯಗಳನ್ನು ಮಾಡಬಹುದು. ಇದು ಯುದ್ಧದ ಭವಿಷ್ಯವಾಗಿದೆ. ಆಕ್ರಮಣಕಾರಿ (ಪಿನ್-ಪಾಯಿಂಟ್ ಗುರಿ) ಮತ್ತು ಕಣ್ಗಾವಲು ಇಡಲು ಡ್ರೋನ್‌ಗಳು ಅತ್ಯಂತ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತವೆ" ಎಂದೂ ಹೇಳಿದರು.

"ಈ ಡ್ರೋನ್‌ಗಳನ್ನು ಕಣ್ಗಾವಲು ಉದ್ದೇಶಗಳಿಗಾಗಿ ಉತ್ತರದ ಗಡಿಗಳಲ್ಲಿ ಎಲ್‌ಎಸಿ ಉದ್ದಕ್ಕೂ ನಿಯೋಜಿಸಲಾಗುವುದು. ಈ ಮೂಲಕ ನಿರ್ಮಾಣ, ಗಡಿ ಮೂಲಸೌಕರ್ಯ ಅಭಿವೃದ್ಧಿ, ಸಜ್ಜುಗೊಳಿಸುವಿಕೆ ಮುಂತಾದ ಶತ್ರು ಚಟುವಟಿಕೆಗಳ ಮೇಲೆ ನಿಗಾ ಇಡಬಹುದು’’ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಸೇನೆಗೆ ಭಾರಿ ಸಂಖ್ಯೆಯ Electric Vehicles ಖರೀದಿ

ವಿಶೇಷ ಪಡೆಗಳಿಗೆ RPAV ಗಳು
ಅಕ್ಟೋಬರ್ 25 ರಂದು, ಭಾರತೀಯ ಸೇನೆಯ ಪ್ಯಾರಾಚೂಟ್ (ವಿಶೇಷ ಪಡೆಗಳು) ಬೆಟಾಲಿಯನ್‌ಗಳೊಂದಿಗೆ ನಿಯೋಜಿಸಲು 750 RPAV ಗಳಿಗೆ ಸರ್ಕಾರವು ಪ್ರಸ್ತಾವನೆಗಾಗಿ ಮನವಿ ಪತ್ರ ಸಲ್ಲಿಸಿದೆ. ಶತ್ರುಗಳ ಗಡಿ ರೇಖೆಯ ಹಿಂದೆ ವಿಶೇಷ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲು ಇದು ಕಡ್ಡಾಯವಾಗಿದೆ ಎಂದೂ ತಿಳಿದುಬಂದಿದೆ.

'ಪ್ಯಾರಾಚೂಟ್ ಬೆಟಾಲಿಯನ್‌ಗಳಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಬೇಕು. ಉತ್ತರದ ಆದೇಶಗಳ ಜೊತೆಗೆ ಪ್ರಸ್ತುತ ಬಾಷ್ಪಶೀಲ ಪರಿಸ್ಥಿತಿಯು ಕಾರ್ಯಾಚರಣೆಯ ಸಲಕರಣೆಗಳ ತ್ವರಿತ ಸಂಗ್ರಹಣೆಯನ್ನು ಖಾತರಿಪಡಿಸುತ್ತದೆ. RPAV ಒಂದು ಪ್ರಬಲವಾದ ಸಾಂದರ್ಭಿಕ ಜಾಗೃತಿ ಸಾಧನವಾಗಿದ್ದು, ಇದು ಗುರಿ ಪ್ರದೇಶವನ್ನು ಸ್ಕ್ಯಾನ್ ಮಾಡುವ ಸಾಮರ್ಥ್ಯದೊಂದಿಗೆ ಹಗಲು ರಾತ್ರಿ ಕಣ್ಗಾವಲು ಒದಗಿಸುತ್ತದೆ ಮತ್ತು ವಿಶೇಷ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲು ಗುರಿಯನ್ನು ಪ್ರೋಸೆಸ್‌ ಮಾಡಿದ 3D ಸ್ಕ್ಯಾನ್ ಚಿತ್ರವನ್ನು ಒದಗಿಸುತ್ತದೆ,' ಎಮದೂ ಕೇಂದ್ರ ಸರ್ಕಾರದ ಮನವಿ ಪತ್ರ ಹೇಳುತ್ತದೆ.

ಇದನ್ನೂ ಓದಿ: ಸೇನೆಗೆ ‘ಪ್ರಚಂಡ’ ಶಕ್ತಿ: ಭಾರತದ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರಗಳ ರಾಶಿ!


ಸಾಂದರ್ಭಿಕ ಅರಿವು, ಅಲ್ಪ-ಶ್ರೇಣಿಯ ಕಣ್ಗಾವಲು, ಗುರಿ ಪ್ರದೇಶವನ್ನು ಸ್ಕ್ಯಾನ್ ಮಾಡಲು ಮತ್ತು ಗುರಿ ಪ್ರದೇಶವನ್ನು ಪ್ರವೇಶಿಸುವ ಮೊದಲು ಗುರಿಯ ಸಂಸ್ಕರಿಸಿದ 3D ಚಿತ್ರಗಳನ್ನು ಒದಗಿಸಲು ಸಾಧನವನ್ನು ಬಳಸಿಕೊಳ್ಳಲಾಗುತ್ತದೆ. ವಿಶೇಷ ಪಡೆಗಳಿಗೆ ನೇರ ಕ್ರಿಯೆಯ ಕಾರ್ಯಗಳ ಸಮಯದಲ್ಲಿ ನಿಖರವಾದ ಸ್ಟ್ರೈಕ್‌ಗಳನ್ನು ಕಾರ್ಯಗತಗೊಳಿಸಲು ಈ ಡ್ರೋನ್‌ಗಳು ಅನುವು ಮಾಡಿಕೊಡುತ್ತದೆ.

ಪ್ರಸ್ತಾವನೆಗಳಿಗಾಗಿ ಇತರ ಇತ್ತೀಚಿನ ವಿನಂತಿಗಳು
ಇದಕ್ಕೂ ಮೊದಲು, ಅಕ್ಟೋಬರ್ 20 ರಂದು, 80 ಮಿನಿ ರಿಮೋಟ್‌ ಮೂಲಕ ಕಾರ್ಯನಿರ್ವಹಿಸುವ ಪೈಲಟೆಡ್ ಏರಿಯಲ್ ಸಿಸ್ಟಮ್ಸ್ (RPAS) ಗಾಗಿ ಮನವಿ ಪತ್ರವನ್ನು ನೀಡಲಾಯಿತು. ನಿರ್ದಿಷ್ಟ ವಲಯದಲ್ಲಿ ಎದುರಾಳಿ ಪಡೆಗಳು, ಉಪಕರಣಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪತ್ತೆಹಚ್ಚಲು ಯುದ್ಧತಂತ್ರದ ಕಣ್ಗಾವಲುಗಾಗಿಯೂ RPAS ಅನ್ನು ಬಳಸಬಹುದು.
15 ಕಿಮೀ ಮಿಷನ್ ವ್ಯಾಪ್ತಿಯೊಂದಿಗೆ ಹೊಸ ಚಿಕ್ಕ RPAS, ಎತ್ತರದ ಪ್ರದೇಶಗಳಲ್ಲಿ ಬೆಟ್ಟದ ಮೇಲಿನ ಯುದ್ಧತಂತ್ರದ ಕಣ್ಗಾವಲುಗಾಗಿ ಫಿರಂಗಿ ಘಟಕಗಳಿಗೆ ಅಗತ್ಯವಿದೆ. ಅವುಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಸೇನೆಯು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಬಹುದು ಎಂದೂ ಹೇಳಲಾಗಿದೆ. ಇದಲ್ಲದೆ, ಸೈನ್ಯವು ಹಿಮಾಲಯದಲ್ಲಿ ಕಾರ್ಯನಿರ್ವಹಿಸಲು ಮತ್ತು ಯುದ್ಧದ ಕಮಾಂಡರ್‌ಗಳಿಗೆ ಲೈವ್ ಫೀಡ್ ಅನ್ನು ಒದಗಿಸಲು 1,000 ಕಣ್ಗಾವಲು ಕಾಪ್ಟರ್‌ಗಳನ್ನು ಬಯಸುತ್ತಿದೆ. ಈ ಎಲ್ಲಾ UAV ಗಳು ಮತ್ತು RPAV ಗಳನ್ನು ಭಾರತೀಯ ಕಂಪನಿಗಳಿಂದ ಪಡೆಯಲಾಗುತ್ತದೆ.

ಕಾಪ್ಟರ್‌ಗಳು ಸೇನೆಗೆ ವೈಮಾನಿಕ ಮತ್ತು ನಿರಂತರ ಪಾಯಿಂಟ್ ಕಣ್ಗಾವಲು ಸಾಮರ್ಥ್ಯವನ್ನು ಒದಗಿಸುತ್ತದೆ. ಆಸಕ್ತಿಯ ಪ್ರದೇಶದ ನೈಜ-ಸಮಯದ ವಿಚಕ್ಷಣ ಮತ್ತು ಕಣ್ಗಾವಲು ಕೈಗೊಳ್ಳಲು ಇದು ಬಹು-ಸಂವೇದಕ ವ್ಯವಸ್ಥೆಯನ್ನು ಹೊಂದಿರುತ್ತದೆ.

ಕಳೆದ ವಾರದ ಆರಂಭದಲ್ಲಿ, ಸ್ಥಳೀಯ ಪರಿಹಾರಗಳೊಂದಿಗೆ ಭವಿಷ್ಯದ ಯುದ್ಧಗಳನ್ನು ಹೋರಾಡುವ ತನ್ನ ಬದ್ಧತೆಗೆ ಅನುಗುಣವಾಗಿ 363 ಡ್ರೋನ್‌ಗಳನ್ನು ಸಂಗ್ರಹಿಸುವ ಪ್ರಸ್ತಾಪಗಳಿಗಾಗಿ ಸೇನೆಯು 2 ಬಾರಿ ವಿನಂತಿಗಳನ್ನು ಮಾಡಿದೆ. ಇವುಗಳಲ್ಲಿ 163 ಡ್ರೋನ್‌ಗಳು ಹೆಚ್ಚಿನ ಎತ್ತರದಲ್ಲಿ ಕಾರ್ಯನಿರ್ವಹಿಸುತ್ತವೆ, ಆದರೆ ಉಳಿದ 200 ಟ್ರೋನ್‌ಗಳು ಮಧ್ಯಮ ಎತ್ತರಕ್ಕೆ ಹಾರುತ್ತವೆ. ಇವುಗಳು ಶೇ. 60 ಪ್ರತಿಶತದಷ್ಟು ಸ್ಥಳೀಯ ಬಿಡಿಭಾಗಗಳನ್ನು ಹೊಂದಿರಬೇಕು ಎಂಬುದು ಸೇನೆಯ ಷರತ್ತು.

Follow Us:
Download App:
  • android
  • ios