Asianet Suvarna News Asianet Suvarna News

ನಾವು ಗಡಿ ಕಾಯ್ತಿದ್ದೇವೆ; ನೀವು ಚಿಂತೆ ಮಾಡದೆ ದೀಪಾವಳಿ ಆಚರಿಸಿ: Indian Army

ಭಾರತೀಯ ಸೇನೆಯ ಯೋಧರು ಗಡಿಯಲ್ಲಿ ದಿಪಗಳನ್ನು ಬೆಳಗಿ ಪಟಾಕಿ ಸಿಡಿಸಿದ್ದಾರೆ. ಅಲ್ಲದೆ, ಲಕ್ಷ್ಮೀ ಪೂಜೆಯನ್ನೂ ಮಾಡಿದ್ದಾರೆ. ಜತೆಗೆ, ದೇಶದ ಜನತೆಗೆ ಚಿಂತೆ ಇಲ್ಲದೆ ಹಬ್ಬ ಆಚರಿಸಿ ಎಂದಿದ್ದಾರೆ. 

dont worry and celebrate diwali we are alert on borders ash
Author
First Published Oct 23, 2022, 2:43 PM IST

ನಾಳೆಯಿಂದ ದೀಪಾವಳಿಯ (Diwali) ಸಂಭ್ರಮ. ಕೆಲವೆಡೆ, ನಿನ್ನೆಯಿಂದಲೇ ಹಬ್ಬದ ಆಚರಣೆಗಳು ಆರಂಭಗೊಂಡಿದೆ. ಇಡೀ ದೇಶದ ಜನತೆ ಹಬ್ಬವನ್ನು ಆಚರಿಲು ಸಜ್ಜಾಗಿರುವಾಗ, ನಮ್ಮ ಭಾರತೀಯ ಸೇನೆಯ (Indian Army) ಸೈನಿಕರು (Soldiers) ಗಡಿ ನಿಯಂತ್ರಣ ರೇಖೆಯಲ್ಲಿ (Line of Control) (ಎಲ್‌ಒಸಿ) (LOC) ದೀಪ ಬೆಳಗುವ ಮೂಲಕ ಹಬ್ಬ ಆರಂಭಿಸಿದ್ದಾರೆ. ಮತ್ತು, ದೇಶದ ಗಡಿಗಳ ಬಳಿ ಎಲ್ಲವೂ ಚೆನ್ನಾಗಿದೆ ಎಂದು ದೇಶವಾಸಿಗಳಿಗೆ ಭರವಸೆ ನೀಡಿದರು. ಅಕ್ಟೋಬರ್ 22, 2022 ರಂದು ಶನಿವಾರ ಗಡಿ  ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜನೆಗೊಂಡಿರುವ ಸೇನಾ ಯೋಧರು ಧನ್ತೇರಸ್ (Dhanteras) ಆಚರಣೆಯಲ್ಲಿ ಭಾಗಿಯಾಗಿದ್ದರು. ದೀಪಗಳನ್ನು ಬೆಳಗಿಸಿದರು ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಹಬ್ಬದ ಸಂಭ್ರಮ ಕಳೆಗಟ್ಟಿದೆ. 

ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ಯೋಧರು ನಾಗರಿಕರಿಗೆ ದೀಪಾವಳಿ ಶುಭಾಶಯಗಳನ್ನು ನೀಡಿದರು ಮತ್ತು ಭಾರತೀಯರು ಆತಂಕಪಡಬೇಡಿ. ನಾವು ಗಡಿಗಳನ್ನು ರಕ್ಷಿಸುತ್ತಿರುವುದರಿಂದ ತಮ್ಮ ಕುಟುಂಬಗಳೊಂದಿಗೆ ಹಬ್ಬವನ್ನು ಚಿಂತೆಯಿಲ್ಲದೆ ಆಚರಿಸಲು ಕೋರಿದರು. "ನಾನು ದೇಶವಾಸಿಗಳಿಗೆ ಚಿಂತೆ ಮಾಡಬೇಡಿ ಮತ್ತು ಹಬ್ಬವನ್ನು ಪೂರ್ಣ ಸಂತೋಷದಿಂದ ಆಚರಿಸಲು ಬಯಸುತ್ತೇನೆ. ನಾನು ದೇಶವಾಸಿಗಳಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಲು ಬಯಸುತ್ತೇನೆ ಮತ್ತು ನಮ್ಮ ಸೈನಿಕರು ಜಾಗರೂಕರಾಗಿದ್ದಾರೆ ಹಾಗೂ ಗಡಿಯಲ್ಲಿ ಕಟ್ಟೆಚ್ಚರ ವಹಿಸುತ್ತಿದ್ದಾರೆ ಎಂದು ಅವರಿಗೆ ಭರವಸೆ ನೀಡಲು ಬಯಸುತ್ತೇನೆ" ಎಂದು ಕರ್ನಲ್ ಇಕ್ಬಾಲ್ ಸಿಂಗ್ ಹೇಳಿದ್ದಾರೆ. 

ಇದನ್ನು ಓದಿ: ಈ ಭಾರಿಯೂ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ, ಕೇದಾರನಾಥ ಭದ್ರಿನಾಥಕ್ಕೂ ಭೇಟಿ!

ಧನ್ತೇರಸ್ ಅನ್ನು ಗುರುತಿಸಲು, ಭಾರತೀಯ ಸೇನೆಯ ಸೈನಿಕರು ಲಕ್ಕ್ಷ್ಮೀ ಗಣೇಶ ಆರತಿಯನ್ನು ಹಾಡುತ್ತಾ ಲಕ್ಕ್ಷ್ಮೀ ಪೂಜೆಯನ್ನು ಮಾಡಿದ್ದಾರೆ. 

ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ ಪ್ರಧಾನಿ ಮೋದಿ..!
 ಭಾರತವು ತಮ್ಮ ಕುಟುಂಬದೊಂದಿಗೆ ಬೆಳಕು ಮತ್ತು ಸಂತೋಷದ ಹಬ್ಬವನ್ನು ಆಚರಿಸಲಿದ್ದರೆ, ಪ್ರಧಾನಿ ಮೋದಿ ಭಾರತೀಯ ಸೇನಾ ಯೋಧರೊಂದಿಗೆ ದೀಪಾವಳಿ ಆಚರಣೆಯನ್ನು ಆಚರಿಸುವ ಸಾಧ್ಯತೆಯಿದೆ. ಯೋಧರೊಂದಿಗೆ ನರೇಂದ್ರ ಮೋದಿ ದೀಪಾವಳಿ ಆಚರಿಸುತ್ತಾರೆ ಎಂದು ನಿರ್ಧರಿಸಲಾಗಿದ್ದರೂ, ಭದ್ರತಾ ಕಾರಣಗಳಿಂದ ನಿಖರವಾದ ಸ್ಥಳವನ್ನು ಬಹಿರಂಗಪಡಿಸಲಾಗಿಲ್ಲ.ಕಳೆದ ವರ್ಷ ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರದ ನೌಶೇರಾಕ್ಕೆ ಆಗಮಿಸಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಹಬ್ಬದ ಪ್ರಯುಕ್ತ ಅವರಿಗೆ ಸಿಹಿ ಹಂಚಿ, ದೀಪ ಬೆಳಗಿಸಿ, ಪಟಾಕಿ ಸಿಡಿಸಿದ್ದರು.

ಇದನ್ನೂ ಓದಿ: ಪ್ರಧಾನಿ ಆದ ನಂತರ 2ನೇ ಸಲ ಇಂದು Modi ಅಯೋಧ್ಯೆಗೆ ಭೇಟಿ: ದೀಪೋತ್ಸವಕ್ಕೆ ಚಾಲನೆ

2014 ರಲ್ಲಿ ಪ್ರಧಾನಿ ಅಧಿಕಾರಕ್ಕೆ ಬಂದಾಗಿನಿಂದ, ಅವರು ದೇಶದ ವಿವಿಧ ಗಡಿಗಳಲ್ಲಿ ಭಾರತೀಯ ಸೇನೆಯೊಂದಿಗೆ ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ. ಈ ಬಾರಿ ದೀಪಾವಳಿಗೂ ಮುನ್ನ ಪ್ರಧಾನಿ ಮೋದಿ ಬದ್ರಿನಾಥ, ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಗಡಿ ಬಳಿಕಯ ದೇಶದ ಕಟ್ಟ ಕಡೆಯ ಗ್ರಾಮಕ್ಕೂ ತೆರಳಿದ್ದರು. ಈ ಮೂಲಕ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ಇಂದು ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ದೀಪಾವಳಿಯ ಆಚರಣೆಗೆ ನರೇಂದ್ರ ಮೋದಿ ಮತ್ತಷ್ಟು ಮೆರುಗು ನೀಡಲಿದ್ದಾರೆ. 

Follow Us:
Download App:
  • android
  • ios