Asianet Suvarna News Asianet Suvarna News

ನಿಜ್ಜರ್ ಆಪ್ತ, ಗ್ಯಾಂಗ್‌ಸ್ಟರ್ ಲಕ್ಬೀರ್ ಸಿಂಗ್ ಭಯೋತ್ಪಾದಕ, ಕೇಂದ್ರ ಸರ್ಕಾರ ಘೋಷಣೆ!

ಇತ್ತೀಚೆಗೆ ಹತ್ಯೆಯಾಗಿರುವ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ, ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಲಕ್ಬೀರ್ ಸಿಂಗ್ ಲಂಡಾ ಓರ್ವ ಭಯೋತ್ಪಾದಕ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ 
 

India Home Ministry declare gangster Lakhbir Singh Landa as a terrorist under UAPA act ckm
Author
First Published Dec 30, 2023, 12:41 PM IST

ನವದೆಹಲಿ(ಡಿ.30) ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರದ ಮೇಲೆ ರಾಕೆಟ್ ದಾಳಿ ನಡೆಸಿದ ಸೇರಿದಂತೆ ಹಲವು ಖಲಿಸ್ತಾನ ಉಗ್ರ ಹೋರಾಟದಲ್ಲಿ ಭಾರತ ವಿರೋಧಿ ಚಟುವಟಿಕೆ ಹಾಗೂ ದಾಳಿ ನಡೆಸಿದ ಕೆನಾಡ ಮೂಲದ ಲಕ್ಬೀರ್ ಸಿಂಗ್ ಲಂಡಾ ಓರ್ವ ಭಯೋತ್ಪಾದಕ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. UAPA ಅಡಿಯಲ್ಲಿ ಲಂಡಾ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಗೆ ಸೇರಿಸಲಾಗಿದೆ. ಪಾಕಿಸ್ತಾನ ಹಾಗೂ ಖಲಿಸ್ತಾನ ಭಯೋತ್ಪಾದಕರು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಾಬರ್ ಖಾಲ್ಸಾ ಅಂತಾರಾಷ್ಟ್ರೀಯ(BKI) ಉಗ್ರ ಸಂಘಟನೆ ಸದಸ್ಯನಾಗಿರುವ ಲಂಡಾನನ್ನು ವಾಂಟೆಡ್ ಉಗ್ರ ಘೋಷಿಸಿರುವ ಕೇಂದ್ರ ಸರ್ಕಾರ ಮುಂದಿನ ಟಾರ್ಗೆಟ್ ಮಾಡಿಕೊಂಡಿದೆ.

ಪಂಜಾಬ್‌ನಲ್ಲಿ ಹುಟ್ಟಿದ ಲಂಡಾ, 2017ರಲ್ಲಿ ಕೆನಾಡಗೆ ಪರಾರಿಯಾಗಿದ್ದ. ಪಂಜಾಬ್‌ನಲ್ಲಿ ಹಲವು ಕೊಲೆ, ಡ್ರಗ್ಸ್ ಕಳ್ಳಸಾಗಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಲಕ್ಬೀರ್ ಸಿಂಗ್ ಲಂಡಾ ಕೆನಾಡೆ ಪರಾರಿಯಾಗಿದ್ದ. ಖಲಿಸ್ತಾನ ಉಗ್ರರ ನೆರವಿನಿಂದ ಕೆನಾಡಗೆ ತೆರಳಿ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಇದಕ್ಕಾಗಿ ಪಾಕಿಸ್ತಾನ ಭಯೋತ್ಪಾದಕರ ನರೆವು ಪಡೆದುಕೊಂಡಿದ್ದ.

 

ಕಾಶ್ಮೀರಿ ಉಗ್ರರ ಜೊತೆ ಸೇರಿ ಪನ್ನು ಹೊಸ ಉಗ್ರ ಸಂಘಟನೆ! ಕಾಶ್ಮೀರ್ - ಖಲಿಸ್ತಾನ್ ರೆಫರೆಂಡಮ್‌ ಫ್ರಂಟ್‌ ಘೋಷಣೆ

ಹರ್ವಿಂದರ್ ಸಿಂಗ್ ಅಲಿಯಾ ರಿಂಡಾ ಅನ್ನೋ ಪಾಕಿಸ್ತಾನ ಮೂಲದ ಭಯೋತ್ಪಾದಕ ಇದೇ BKI ಉಗ್ರ ಸಂಘಟನೆಯ ಪ್ರಮುಖನಾಗಿದ್ದ. ಈ BKI ಸಂಘಟನೆಯಲ್ಲಿ ಲಿಂಡಾ ಕೂಡ ಸದಸ್ಯನಾಗಿದ್ದಾನೆ. 2021ರಲ್ಲಿ ಪಂಜಾಬ್ ಗುಪ್ತಚರ ಪೊಲೀಸ್ ಕೇಂದ್ರದ ಮೇಲೆ ರಾಕೆಟ್ ದಾಳಿ ನಡೆದಿತ್ತು. ಈ ಭಯೋತ್ಪಾದಕ ದಾಳಿಯ ರೂವಾರಿಯಾಗಿದ್ದ ಇದೇ ಲಿಂಡಾ, ಈ ದಾಳಿಗೆ ಸ್ಫೋಟಗಳನ್ನೂ ಪೂರೈಸಿದ್ದ. ರಾಕೆಟ್ ದಾಳಿಯನ್ನು ದೊಡ್ಡ ಮಟ್ಟದಲ್ಲಿ ಮಾಡಲು ಶಸ್ತ್ರಾಸ್ತ್ರಗಳನ್ನೂ ಈತ ಪೂರೈಸಿದ್ದ.

ಖಲಿಸ್ತಾನಿಗಳು ಕೆನಡಾದಲ್ಲಿ ನಡೆಸುತ್ತಿರುವ ಭಾರತ ವಿರೋಧಿ ಕೃತ್ಯಗಳು ಎಲ್ಲೆಮೀರುತ್ತಿರುವ ನಡುವೆಯೇ ಪಂಜಾಬ್‌ ಪೊಲೀಸರು ರಾಜ್ಯದ 48 ಖಲಿಸ್ತಾನಿ ನೆಲೆಗಳ ಮೇಲೆ ಇತ್ತಿಚೆಗೆ ದಾಳಿ ನಡೆಸಿದ್ದರು. ಖಲಿಸ್ತಾನಿ ಉಗ್ರ ಲಖ್ಬೀರ್‌ ಸಿಂಗ್‌ ಲಂಡಾ ಹಾಗೂ ಆತನ ಸಹಚರರಿಗೆ ಸೇರಿದ 48 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು. ಹಲವು ಮಹತ್ವದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಂಡಾ ಸಹಚನಾದ ಹರ್ವಿಂದರ್‌ ಸಿಂಗ್ ಸಂಧು ಅಲಿಯಾಸ್‌ ರಿಂದಾ ಹಾಗೂ ಹಲವರ ಆಸ್ತಿಪಾಸ್ತಿಗಳಿಗೆ ದಾಳಿ ಬಿಸಿ ತಟ್ಟಿದೆ.

 

ಖಲಿಸ್ತಾನಿ ಉಗ್ರನ ಹತ್ಯೆ: ಭಾರತಕ್ಕೇ ವಾರ್ನಿಂಗ್ ಕೊಡ್ತಾ ಅಮೆರಿಕಾ? ಭಾರತದ ಪ್ರತ್ಯುತ್ತರವೇನು?

Follow Us:
Download App:
  • android
  • ios