73 ಘೋಷಣೆಗೆ ವಿಶ್ವನಾಯಕರ ಅಂಗೀಕಾರ, ದಾಖಲೆ ಬರೆದ ಭಾರತದ G20 ಅಧ್ಯಕ್ಷತೆ!
ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಅತ್ಯಂತ ಮಹತ್ವಾಕಾಂಕ್ಷೆ ಸಮ್ಮೇಳನವಾಗಿ ದಾಖಲೆ ಬರೆದಿದೆ. ದ್ವಪಕ್ಷೀಯ ಮಾತುಕತೆ, ದಾಖಲೆಗಳ ಪ್ರಸ್ತುತಿ, ಫಲಿತಾಂಶಗಳು ಈ ಹಿಂದಿನ ಎಲ್ಲಾ ಜಿ20 ಅಧ್ಯಕ್ಷೀಯ ಸಭೆಗಿಂತ ಡಬಲ್ ಆಗಿದೆ.

ನವದೆಹಲಿ(ಸೆ.09) ಜಿ20 ಶೃಂಗಸಭೆಗೆ ಅಧ್ಯಕ್ಷತೆ ವಹಿಸಿರುವ ಭಾರತ ಇದೀಗ ದೆಹಲಿಯಲ್ಲಿ ಎರಡು ದಿನಗಳ ಮಹತ್ವದ ಸಮ್ಮೇಳನದಲ್ಲಿ ಹಲವು ರಾಷ್ಟ್ರಗಳ ಗಣ್ಯರೊಂದಿಗೆ ದ್ವಿಪಕ್ಷೀಯ ಮಾತುಕತೆ, ಜಾಗತಿಕ ಸಭೆ ನಡೆಸುತ್ತಿದೆ. ಇದರ ಜೊತಗೆ ಭಾರತದ ಜಿ20 ಶೃಂಗ ಸಭೆ ಹೊಸ ಮೈಲಿಗಲ್ಲು ನಿರ್ಮಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ 73 ಘೋಷಣೆಗಳು ಹೊರಬಿದ್ದಿದೆ. ಇಷ್ಟೇ ಅಲ್ಲ ಈ 73 ಘೋಷಣೆಗಳನ್ನು ವಿಶ್ವನಾಯಕರು ಅಂಗೀಕರಿಸಿದ್ದಾರೆ. ಈ ತನ ಯಾವುದೇ ಜಿ20 ಸಭೆಯಲ್ಲಿ ಇಷ್ಟು ಘೋಷಣೆಗಳಿಗೆ ಅಂಗೀಕಾರ ಸಿಕ್ಕಿಲ್ಲ. ಇದರ ಜೊತೆಗೆ 39 ದಾಖಲೆಗಳನ್ನು ಲಗತ್ತಿಸಿ ಪ್ರಸ್ತುತಪಡಿಸಲಾಗಿದೆ. ಈ ದಾಖಲೆಗಳು ಮಾನ್ಯವಾಗಿದೆ.
ಭಾರತದ ಅದ್ಯಕ್ಷತೆ ವಹಿಸಿರುವ ಜಿ20 ಶೃಂಗಸಭೆಯಲ್ಲಿ 73 ಘೋಷಣೆಗಳ ಅಂಗೀಕಾರ ಹಾಗೂ 39 ದಾಖಲೆಗಳ ಪ್ರಸ್ತುತಿ ಸೇರಿದಂತೆ ಒಟ್ಟು 112 ಮಹತ್ವದ ಘೋಷಣೆಗಳು ದಾಖಲೆಗಳು ಅಂಗೀಕಾರವಾಗಿದೆ. ಈ ಮೂಲಕ ಈ ಹಿಂದಿನ ಜಿ20 ಅಧ್ಯಕ್ಷತೆ ಹಾಗೂ ಸಮ್ಮೇಳನಕ್ಕೆ ಹೋಲಿಸಿದರೆ ಅತ್ಯಂತ ಗರಿಷ್ಠ ಅನ್ನೋ ಹೆಗ್ಗಳಿಕಗೆ ಪಾತ್ರವಾಗಿದೆ.
ಹುಟ್ಟು ಹಬ್ಬ ಆಚರಣೆಗೆ ಜಿ20 ಸಭೆ ಕಂಟಕ, ಕುಟುಂಬ, ಫೋಟೋಗ್ರಾಫರ್ ಮೇಲೆ ಕೇಸ್!
2022ರಲ್ಲಿ ಇಂಡೋನೇಷಿಯಾ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿತ್ತು. ಈ ವೇಳೆ 27 ಘೋಷಣೆಗಳಿಗೆ ಅಂಗೀಕಾರ ಸಿಕ್ಕಿದೆ. ಇನ್ನು 23 ದಾಖಲೆಗಳನ್ನು ಪ್ರಸ್ತುತ ಪಡಿಸಲಾಗಿತ್ತು. ಒಟ್ಟು ಸಂಖ್ಯೆ 50. 2021ರಲ್ಲಿ ಇಟಲಿ ಜಿ20 ಶೃಂಗಸಭೆ ಅಧ್ಯಕ್ಷತೆ ವಹಿಸಿತ್ತು. ಈ ವೇಳೆ ಮಹಾಸಮ್ಮೇಳನದಲ್ಲಿ 36 ಘೋಷಣೆಗಳಿಗೆ ವಿಶ್ವನಾಯಕರು ಅಂಗೀಕಾರ ಪಡೆದಿದ್ದರು. 29 ದಾಖಲೆಗಳು ಸಲ್ಲಿಕೆ ಸೇರಿದಂತೆ ಒಟ್ಟು 65 ಘೋಷಣೆ ಹಾಗೂ ದಾಖಲೆ ಅಂಗೀಕಾರವಾಗಿತ್ತು. ಜಿ20 ಇತಿಹಾಸದಲ್ಲಿ ಎರಡನೇ ಅತೀ ದೊಡ್ಡ ಘೋಷಣೆ ಅಂಗೀಕಾರ ಹಾಗೂ ದಾಖಳೆ ಸಲ್ಲಿಕೆಗೆ ಇಂಡೋನೇಷಿಯಾ ಜಿ20 ಪಾತ್ರವಾಗಿದೆ.
ಜಿ20ಯಲ್ಲಿ ರಾಜಕೀಯ ಮಾಡಿದ ಕಾಂಗ್ರೆಸ್‌ಗೆ ಮುಖಭಂಗ, ಖರ್ಗೆ ಮಾತ್ರವಲ್ಲ ನಡ್ಡಾಗೂ ಆಹ್ವಾನವಿಲ್ಲ!
2019ರಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಜಿ20 ಅಧ್ಯಕ್ಷತೆಯಲ್ಲಿ ಒಟ್ಟು 30, 2019ರಲ್ಲಿ ಜಪಾನ್ ಅಧ್ಯಕ್ಷತೆ ವಹಿಸಿದ್ದ ಜಿ20 ಅಧ್ಯಕ್ಷತೆಯಲ್ಲಿ ಒಟ್ಟು 29,2018ರಲ್ಲಿ ಅರ್ಜಂಟೀನಾ 33, ಇನ್ನು 2017ರಲ್ಲಿ ಜರ್ಮನಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಒಟ್ಟು 22 ಘೋಷಣೆ ಹಾಗೂ ದಾಖಲೆ ಅಂಗೀಕಾರವಾಗಿತ್ತು.