ಜಿ20ಯಲ್ಲಿ ರಾಜಕೀಯ ಮಾಡಿದ ಕಾಂಗ್ರೆಸ್‌ಗೆ ಮುಖಭಂಗ, ಖರ್ಗೆ ಮಾತ್ರವಲ್ಲ ನಡ್ಡಾಗೂ ಆಹ್ವಾನವಿಲ್ಲ!
ಜಿ20 ನಾಯಕರ ಔತಣಕೂಟದಿಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೈಬಿಟ್ಟಿರುವುದು ಕಾಂಗ್ರೆಸ್ ಕೆರಳಿಸಿದೆ. ಇತ್ತ ಜೆಪಿ ನಡ್ಡಾಗೂ ಆಹ್ವಾನ ನೀಡಿಲ್ಲ. ಆದರೆ ಕಾಂಗ್ರೆಸ್ ರಾಜಕೀಯ ಶುರುವಮಾಡಿ ಪೇಚಿಗೆ ಸಿಲುಕಿದೆ.

ನವದೆಹಲಿ(ಸೆ.09) ಜಿ20 ಶೃಂಗಸಭೆಯಲ್ಲಿ ವಿಶ್ವದ ದಿಗ್ಗಜ ನಾಯಕರು ಸಭೆ ಸೇರಿದ್ದಾರೆ. ವಿಶ್ವದ ಚಿತ್ತ ಇದೀಗ ಭಾರತದ ಮೇಲಿದೆ. ಅಂತಾರಾಷ್ಟ್ರೀಯ ಸಮ್ಮೇಳನದ ನಡುವೆ ಕಾಂಗ್ರೆಸ್ ರಾಜಕೀಯ ಮಾಡಿ ಇದೀಗ ಪೇಚಿಗೆ ಸಿಲುಕಿದೆ. ಜಿ20 ಜಿ20 ನಾಯಕರಿಗೆ ಆಯೋಜಿಸಿರುವ ಔತಣಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ವಾಕ್ಸಮರ ಶುರುಮಾಡಿದ್ದಾರೆ. ಕಾಂಗ್ರೆಸ್ ದ್ವೇಷಿಸುವ ಬಿಜೆಪಿ ಇದೀಗ ಅತ್ಯಂತ ಕೆಳಮಟ್ಟದ ರಾಜಕೀಯ ತೋರಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ರಾಷ್ಟ್ರಪತಿ ಆಹ್ವಾನಿಸಿರುವ ಜಿ20 ಔತಣಕೂಟಕ್ಕೆ ರಾಜಕೀಯ ಮುಖಂಡರಿಗೆ ಆಹ್ವಾನ ನೀಡಿಲ್ಲ. ಖರ್ಗೆ ಮಾತ್ರವಲ್ಲ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೂ ಆಹ್ವಾನ ನೀಡಿಲ್ಲ. ಆದರೆ ಕಾಂಗ್ರೆಸ್ ಮಾತ್ರ ಈ ವಿಚಾರದಲ್ಲಿ ರಾಜಕೀಯ ಪ್ರದರ್ಶಿಸಿ ಇದೀಗ ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ದ್ರೌಪದಿ ಮುರ್ಮು ಇಂದು ರಾತ್ರಿ ಆಯೋಜಿಸಿರುವ ಜಿ20 ನಾಯಕರುಗಳ ಔತಣಕೂಟಕ್ಕೆ ದೇಶದ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಆದರೆ ಪ್ರಮುಖ ಅಥಿತಿಗಳ ಪೈಕಿ ರಾಜ್ಯಸಭೆಯ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಲಾಗಿಲ್ಲ. ಬಿಜೆಪಿ ದಲಿತರನ್ನು ದಮನ ಮಾಡುತ್ತದೆ. ದಲಿತರಿಗೆ ಯಾವುದೇ ಸ್ಥಾನ ಮಾನ ನೀಡುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ದಲಿತ ಅನ್ನೋ ಕಾರಣಕ್ಕೆ ಆಹ್ವಾನ ನೀಡಿಲ್ಲ ಎಂದು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಮುಗಿಬಿದ್ದಿತ್ತು. ಆದರೆ ಖರ್ಗೆ ರೀತಿ ಜೆಪಿ ನಡ್ಡಾ ಕೂಡ ಮತ್ತೊಂದು ಪ್ರಮುಖ ಪಕ್ಷ ಹಾಗೂ ಆಡಳಿತ ಪಕ್ಷದ ಅಧ್ಯಕ್ಷರಾಗಿದ್ದಾರೆ. ಜೆಪಿ ನಡ್ಡಾಗೂ ಆಹ್ವಾನ ನೀಡಿಲ್ಲ ಅನ್ನೋದು ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಸೈಲೆಂಟ್ ಆಗಿದ್ದಾರೆ.
ದೇಶಕ್ಕೆ ಬಂದ ಮಗಳು ಅಳಿಯ, ಸಾಂಪ್ರದಾಯಿಕವಾಗಿ ಕಚ್ಚೆ ಪಂಚೆ ಧರಿಸಿ ಸ್ವಾಗತಿಸಿದ ಕೇಂದ್ರ ಸಚಿವ!
ಔತಣಕ್ಕೆ ದೇಶೀಯ ನಾಯಕರುಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದೆ ಪ್ರಧಾನಿ ಮೋದಿ ಸರ್ಕಾರ ಜಾತೀಯತೆ ಮಾಡುತ್ತಿದೆ. ಅವರು ಮೋದಿಯೋ ಅಥವಾ ‘ಮನು’ವೋ (ಮನುಸ್ಮೃತಿ ಕರ್ತೃ)’ ಎಂದು ತಮಿಳುನಾಡು ಕಾಂಗ್ರೆಸ್ ನಾಯಕ ಮೋಹನ್ ಕುಮಾರಮಂಗಲಂ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನ ಹಲವು ನಾಯರು ಕೇಂದ್ರದ ನಡೆಯನ್ನು ಖಂಡಿಸಿದ್ದಾರೆ. ಇಷ್ಟೇ ಅಲ್ಲ ಖರ್ಗೆಗೆ ಆಹ್ವಾನ ನೀಡಿದೇ ಇರುವುದು ಮಹಾಅಪರಾಧ ಎಂದು ಬಿಂಬಿಸಿದೆ. ಆದರೆ ಜಿ20 ನಾಯಕರ ಔತಣಕೂಟಕ್ಕೆ ಕೆಲ ಮಾನದಂಡಗಳನ್ನಿಟ್ಟುಕೊಂಡು ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಮಲ್ಲಿಕಾರ್ಜುನ ಖರ್ಗೆ, ಜೆಪಿ ನಡ್ಡಾ ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರಾಗಿದ್ದಾರೆ. ಪಕ್ಷದೊಳಗೆ ಅತೀ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಆದರೆ ವಿಪಕ್ಷ ನಾಯಕ, ಅಥವಾ ಸರ್ಕಾರದ ಯಾವುದೇ ಸಮಿತಿ ಸೇರಿದಂತೆ ಆಹ್ವಾನಿತ ಗಣ್ಯರ ಮಾನದಂಡಗಳಲ್ಲಿ ಜೆಪಿ ನಡ್ಡಾ ಆಗಲಿ, ಖರ್ಗೆಯಾಗಲಿ ಇಲ್ಲ. ಹೀಗಾಗಿ ಈ ನಾಯಕರಿಗೆ ಆಹ್ವಾನ ನೀಡಿಲ್ಲ. ಈ ವಿಚಾರವನ್ನು ಕಾಂಗ್ರೆಸ್ ರಾಜಕೀಯ ಮಾಡಿ ಇದೀಗ ಪೇಚಿಗೆ ಸಿಲುಕಿದೆ.
ನರೇಂದ್ರ ಮೋದಿ ಸರ್ಕಾರವನ್ನು ಶ್ಲಾಘಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್