ಹುಟ್ಟು ಹಬ್ಬ ಆಚರಣೆಗೆ ಜಿ20 ಸಭೆ ಕಂಟಕ, ಕುಟುಂಬ, ಫೋಟೋಗ್ರಾಫರ್ ಮೇಲೆ ಕೇಸ್!
ದೆಹಲಿಯಲ್ಲಿ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿದ ಕುಟುಂಬಕ್ಕೆ ಇದೀಗ ತಲೆನೋವು ಹೆಚ್ಚಾಗಿದೆ. ಕಾರಣ ಜಿ20 ಸಭೆ ಕಾರಣದಿಂದ ಇದೀಗ ಕುಟುಂಬ ಹಾಗೂ ಪೋಟೋಗ್ರಾಫರ್ ಮೇಲೆ ಕೇಸ್ ದಾಖಲಾಗಿದೆ. ಕೇವಲ ಕೇಸ್ ಮಾತ್ರವಲ್ಲ, ಕಠಿಣ ಶಿಕ್ಷೆಗೆ ಕುರಿಯಾಗುವ ಆತಂಕ ಎದುರಾಗಿದೆ.

ನವದೆಹಲಿ(ಸೆ.09) ಹುಟ್ಟು ಹಬ್ಬ ಆಚರಿಸಿದ ದೆಹಲಿಯ ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಕಾರಣ ಜಿ20 ಶೃಂಗಸಭೆ. ತಮ್ಮ ಪಾಡಿಗೆ ತಾವು ಹುಟ್ಟು ಹಬ್ಬ ಆಚರಿಸಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಈ ಹುಟ್ಟು ಹಬ್ಬವನ್ನು ಆವಿಸ್ಮರಣೀಯವನ್ನಾಗಿ ಮಾಡಲು ಹೋಗಿ ಶಿಕ್ಷೆ ಆತಂಕ ಎದುರಿಸುತ್ತಿದ್ದಾರೆ. ಕೇಂದ್ರ ದೆಹಲಿಯ ಪಟೇಲ್ ನಗರದ ಕುಟುಂಬವೊಂದು ಮನೆಯಲ್ಲಿ ಅದ್ಧೂರಿ ಹುಟ್ಟು ಆಚರಿಸಿದೆ. ಇದೀಗ ದೆಹಲಿ ಪೊಲೀಸರು ಕುಟುಂಬ ಹಾಗೂ ಪೋಟೋಗ್ರಾಫರ್ ವಿರುದ್ಧ IPC 188 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಷ್ಟೇ ಅಲ್ಲ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ.
ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದೆ. ಹೀಗಾಗಿ ಹಲವು ಕಠಿಣ ನಿಮಯಗಳು ಜಾರಿಯಾಗಿದೆ. ಈ ಕುರಿತು ದೆಹಲಿ ಪೊಲೀಸರು ಹಾಗೂ ಭದ್ರತಾ ಪಡೆದು ಸಾರ್ವಜನಿಕರಿಗೆ ಹಲವು ಸುತ್ತಿನ ಸೂಚನೆ ಹಾಗೂ ಜಾಗೃತಿ ಮೂಡಿಸಿದ್ದಾರೆ. ದೆಹಲಿಯಲ್ಲಿ ಒಂದು ಸಣ್ಣ ಪಕ್ಷಿ ಸ್ವಚ್ಚಂದವಾಗಿ ಎರಡು ಸುತ್ತು ಹೆಚ್ಚಿಗೆ ಹಾಕಿದರೂ ಸಂಕಷ್ಟಎದುರಾಗಿದೆ. ಅಷ್ಟರ ಮಟ್ಟಿಗೆ ಭದ್ರತೆ ಬಿಗಿಗೊಳಿಸಲಾಗಿದೆ. ದೆಹಲಿಯ ಹಲವು ಭಾಗಗಳನ್ನು ನೋ ಫ್ಲೈಯಿಂಗ್ ಝೋನ್ ಎಂದು ಘೋಷಿಸಲಾಗಿದೆ. ಹೀಗಿರುವಾಗಿ ಪಟೇಲ್ ನಗರ ನಿವಾಸಿ ತನ್ನ ಮನೆಯಲ್ಲಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಇಷ್ಟೇ ಆಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಈ ಹುಟ್ಟುಹಬ್ಬ ಆಚರಣೆ ನೆನಪು ಶಾಶ್ವತವಾಗಿರಿಸಲು ದುಬಾರಿ ಬೆಲೆ ನೀಡಿ ಫೋಟೋಗ್ರಾಫರ್ ತಂಡವನ್ನು ಕರೆಸಿದ್ದಾನೆ. ಇದು ಯಡವಟ್ಟಿಗೆ ಕಾರಣಾಗಿದೆ.
ನರೇಂದ್ರ ಮೋದಿ ಸರ್ಕಾರವನ್ನು ಶ್ಲಾಘಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ಹುಟ್ಟ ಹಬ್ಬ ಆಚರಣೆ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಫೋಟೋಗ್ರಾಫರ್ ತಂಡವನ್ನೇ ಕೆರಸಲಾಗಿದೆ. ದುಬಾರಿ ಬೆಲೆ ನೀಡಿ ಫೋಟೋಗ್ರಾಫರ್ ಕರೆಯಿಸಿಕೊಂಡಿದ್ದಾರೆ. ಇತ್ತ ಫೋಟೋಗ್ರಾಫರ್‌ಗಳು ಫೋಟೋ ಜೊತೆಗೆ ವಿಡಿಯೋ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಮೂವಿ ರೀತಿಯಲ್ಲಿ ವಿಡಿಯೋ ತೆಗೆದ ಫೋಟೋಗ್ರಾಫರ್ ತಂಡ, ಡ್ರೋನ್ ಬಳಕೆ ಮಾಡಿದೆ. ಎತ್ತರಕ್ಕೆ ಡ್ರೋನ್ ಹಾರಿಸಿ ಡ್ರೋನ್ ಮೂಲಕ ವಿಡಿಯೋ ಸೆರೆ ಹಿಡಿಯಲಾಗಿದೆ.
ಸೆಂಟ್ರಲ್ ದೆಹಲಿಯ ಏರಿಯಾದಲ್ಲೇ ಡ್ರೋನ್ ಹಾರಾಡಿದೆ. ಇದು ನೋ ಫ್ಲೈಯಿಂಗ್ ಝೋನ್ ಎಂದು ಘೋಷಿಸಿದ ವಲಯವಾಗಿದೆ. ಏಕಾಏಕಿ ಡ್ರೋನ್ ಹಾರಾಡಿದಕಾರಣ ಪೊಲೀಸರು ಆತಂಕಗೊಂಡಿದ್ದಾರೆ. ತಕ್ಷಣ ಭದ್ರತಾ ಪಡೆ ಅಲರ್ಟ್ ಆಗಿದೆ. ಇತ್ತ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಇದ್ಯಾವುದರ ಅರಿವೇ ಅಲ್ಲದ ಕುಟುಂಬ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಇತ್ತ ಪೊಲೀಸರು ಡ್ರೋನ್ ಹಾರಾಡಿದ ಸ್ಥಳವನ್ನು ಮ್ಯಾಪಿಂಗ್ ಮಾಡಿದ್ದಾರೆ. ಬಳಿಕ ಕೆಲವೇ ಕ್ಷಣದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಜಿ20 ಶೃಂಗಸಭೆ ಡಿನ್ನರ್‌ಗೆ ಅದಾನಿ, ಅಂಬಾನಿ; ರಾಯಿಟರ್ಸ್ ಪ್ರಕಟಿಸಿದ್ದು 'ತಪ್ಪು ಮಾಹಿತಿ' ಎಂದ ಸರ್ಕಾರ
ಪೊಲೀಸರು ಪರಿಶೀಲನೆ ನಡೆಸಿದಾಗ ಹುಟ್ಟು ಹಬ್ಬ ಆಚರಣೆ ಫೋಟೋ ಹಾಗು ವಿಡಿಯೋ ತೆಗೆಯಲು ಡ್ರೋನ್ ಬಳಸಿದ್ದಾರೆ. ಉದ್ದೇಶ ಒಳ್ಳಯದ್ದೇ ಆಗಿದ್ದರೂ ನೋ ಫ್ಲೈಯಿಂಗ್ ಝೋನ್‌ನಲ್ಲಿ ಡ್ರೋನ್ ಹಾರಾಡಿದೆ. ಇದು ನಿಯಮಕ್ಕೆ ವಿರುದ್ಧಾಗಿದೆ. ಹೀಗಾಗಿ IPC 188 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲ ಕುಟುಂಬಸ್ಥರು ಕಠಿಣ ಶಿಕ್ಷೆಗೆ ಗುರಿಯಾಗುವುದ ಸಾಧ್ಯತೆ ಇದೆ.