ಎಲ್ಲ ರೀತಿಯ ಅಗತ್ಯ ಸುರಕ್ಷತಾ ಪರೀಕ್ಷೆ ನಡೆಸಿ, ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ ಶೀಘ್ರವೇ ಈ ಅಂಡರ್‌ವಾಟರ್‌ ಮೆಟ್ರೋವನ್ನು ಪ್ರಾರಂಭಿಸಲಾಗುವುದು. ಈ ನದಿಯಾಳದ ಸುರಂಗವು ಒಂದು ಮೈಲಿಗಲ್ಲಾಗಿದೆ. ನದಿಯೊಳಗೆ 16 ಮೀ. ಆಳದಲ್ಲಿ ಸುರಂಗ ನಿರ್ಮಿಸಲಾಗಿದೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ 

ಕೋಲ್ಕತಾ(ಜೂ.23): ದೇಶದ ಮೊದಲ ಅಂಡರ್‌ವಾಟರ್‌ ಮೆಟ್ರೋ ಶೀಘ್ರದಲ್ಲೇ ಪ್ರಯಾಣಿಕರಿಗೆ ಮುಕ್ತವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಹೌರಾ ಮೈದಾನದಿಂದ ಎಸ್‌ಪ್ಲ್ಯಾನೇಡ್‌ವರೆಗೆ 4.8 ಕಿ.ಮೀ ಮಾರ್ಗವನ್ನು ಹೂಗ್ಲಿ ನದಿಯ ಆಳದಲ್ಲಿ ನಿರ್ಮಿ​ಸ​ಲಾ​ಗಿದೆ. ಇದರ ಪರಿ​ಶೀ​ಲನೆ ನಡೆ​ಸಿ ಸುದ್ದಿಗಾರರೊಂದಿಗೆ ಮಾತನಾಡಿದ ವೈಷ್ಣವ್‌, ‘ಎಲ್ಲ ರೀತಿಯ ಅಗತ್ಯ ಸುರಕ್ಷತಾ ಪರೀಕ್ಷೆ ನಡೆಸಿ, ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ ಶೀಘ್ರವೇ ಈ ಅಂಡರ್‌ವಾಟರ್‌ ಮೆಟ್ರೋವನ್ನು ಪ್ರಾರಂಭಿಸಲಾಗುವುದು. ಈ ನದಿಯಾಳದ ಸುರಂಗವು ಒಂದು ಮೈಲಿಗಲ್ಲಾಗಿದೆ. ನದಿಯೊಳಗೆ 16 ಮೀ. ಆಳದಲ್ಲಿ ಸುರಂಗ ನಿರ್ಮಿಸಲಾಗಿದೆ’ ಎಂದರು.

ಬೆಂಗಳೂರಿನಲ್ಲಿ ಮತ್ತೆ 3 'ನಮ್ಮ ಮೆಟ್ರೋ' ಮಾರ್ಗ: ಸರ್ಕಾರಕ್ಕೆ ಪ್ರಸ್ತಾವ

‘ಹೌರಾ ನಿಲ್ದಾಣವು ದೇಶದ ಅತ್ಯಂತ ಆಳದ ಮೆಟ್ರೋ ನಿಲ್ದಾಣವಾಗಲಿದೆ. ಮೇಲ್ಮೈ ಭಾಗದಿಂದ 33 ಮೀಟರ್‌ ಆಳದಲ್ಲಿ 5ಲಕ್ಷ ಚ.ಮೀ ಆಳದಲ್ಲಿ ಇದನ್ನು ನಿರ್ಮಿಸಲಾಗಿದೆ’ ಎಂದರು. ಇನ್ನು ಡಿಸೆಂಬರ್‌ನಲ್ಲಿ ಈ ಮಾರ್ಗ ಉದ್ಘಾಟನೆಯಾಗುವ ನಿರೀಕ್ಷೆ ಇದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.