* 41 ದಿನಗಳ ಬಳಿಕ ದೇಶದಲ್ಲಿ 2 ಲಕ್ಷಕ್ಕಿಂತ ಕಡಿಮೆ ಕೇಸ್* 3511 ಸಾವು: 21 ದಿನದ ಕನಿಷ್ಠ* ಪಾಸಿಟಿವಿಟಿ ದರ ಶೇ.10ಕ್ಕೆ ಕೆಳಕ್ಕಿಳಿಕೆ* ಸತತ 12ನೇ ದಿನವೂ ಸೋಂಕಿಗಿಂತ ಚೇತರಿಕೆ ಅಧಿಕ
ನವದೆಹಲಿ(ಮೇ.26): ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವ ಮತ್ತಷ್ಟುಸುಳಿವು ಲಭ್ಯವಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 1,96,427 ಪ್ರಕರಣ ದಾಖಲಾಗಿವೆ.
ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!
ದೈನಂದಿನ ಸೋಂಕಿನ ಪ್ರಕರಣಗಳು 2 ಲಕ್ಷಕ್ಕಿಂತ ಕೆಳಗೆ ಇಳಿದಿರುವುದು 41 ದಿನಗಳ ಬಳಿಕ. ಏ.14ರಂದು 184372 ಕೇಸು ದಾಖಲಾಗಿತ್ತು. ಇದೇ ವೇಳೆ ಸಾವಿನ ಸಂಖ್ಯೆ ಕೂಡ 4 ಸಾವಿರಕ್ಕಿಂತ ಕೆಳಗೆ ಇಳಿದು ಕಳೆದ 24 ಗಂಟೆಗಳಲ್ಲಿ 3,511 ಮರಣಗಳು ದಾಖಲಾಗಿವೆ. ಈ ಸಾವಿನ ಸಂಖ್ಯೆ 21 ದಿನದ ಕನಿಷ್ಠ.
ಇನ್ನೊಂದು ಆಶಾದಾಯಕ ಸಂಗತಿ ಎಂದರೆ ಪಾಸಿಟಿವಿಟಿ ದರ ಶೇ.9.54ಕ್ಕೆ ಇಳಿದಿದೆ. ಇದೇ ವೇಳೆ ಸತತ 12ನೇ ದಿನವೂ ಹೊಸ ಸೋಂಕಿತರ ಸಂಖ್ಯೆಗಿಂತ ಚೇತರಿಕೆ ಸಂಖ್ಯೆ ಜಾಸ್ತಿ ಆಗಿದೆ. ಅಂದರೆ 3,26,850 ಜನರು ಚೇತರಿಸಿಕೊಂಡಿದ್ದಾರೆ. ಈ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 25,86,782ಕ್ಕೆ ಇಳಿದಿದೆ.
ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!
ಇನ್ನು, ಒಂದು ಹಂತದಲ್ಲಿ ಶೇ.80ರ ಆಸುಪಾಸಿಗೆ ಕುಸಿದಿದ್ದ ಚೇತರಿಕೆ ದರ ಶೇ.89.26ಕ್ಕೆ ಏರಿಕೆಯಾಗಿದೆ. ಈವರೆಗೆ 2,69,48,874 ಮಂದಿಗೆ ಕೊರೋನಾ ಸೋಂಕು ತಾಗಿದೆ. 3,07,231 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 2,40,54,861 ಜನರು ಚೇತರಿಸಿಕೊಂಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
