Asianet Suvarna News Asianet Suvarna News

ಕೊರೋನಾ ಚೇತರಿಕೆ ಪ್ರಮಾಣ ಶೇ.96.87; ಕೋವಿಡ್ ಪರೀಕ್ಷೆಯಲ್ಲೂ ಭಾರತಕ್ಕೆ ಅಗ್ರಸ್ಥಾನ!

  • ದೇಶಾದ್ಯಂತ  ಕೋವಿಡ್ ಪ್ರಕರಣ ಸಂಖ್ಯೆ ಗಣನೀಯ ಇಳಿಕೆ
  • ಭಾರತದ ಚೇತರಿಕೆ ಪ್ರಮಾಣದಲ್ಲಿ ಏರಿಕೆ
  • 40.81 ಕೋಟಿ ಕೋವಿಡ್ ಪರೀಕ್ಷೆ ನಡೆಸಿದ  ಭಾರತ
     
India covid positivity rate jumps to 97 percent and crossed 32 90 crore mark ckm
Author
Bengaluru, First Published Jun 29, 2021, 10:16 PM IST

ನವದೆಹಲಿ(ಜೂ.29): ಭಾರತದಲ್ಲಿ ಡೆಲ್ಟಾ ಪ್ಲಸ್ ವೇರಿಯೆಂಟ್, 3ನೇ ಅಲೆ ಭೀತಿ ನಡುವೆ ಕೋವಿಡ್ ಪ್ರಕರಣ ಸಂಖ್ಯೆ ಇಳಿಮುಖವಾಗುತ್ತಿದೆ. 2ನೇ ಅಲೆ ಅಬ್ಬರ ಕಡಿಮೆಯಾಗಿದೆ. ಇದೀಗ ಬರೊಬ್ಬರಿ 102 ದಿನಗಳ ಬಳಿಕ ಭಾರತದ ಹೊಸ ಕೊರೋನಾ ಪ್ರಕರಣ ಸಂಖ್ಯೆ 40 ಸಾವಿರಕ್ಕಿಂತ ಕೆಳಕ್ಕಿಳಿದಿದೆ.

ಕೇರಳ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಹೊಸ ಮಾರ್ಗಸೂಚಿ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 37,566 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇಕಡ 1.82ರಷ್ಟಿದೆ.  ಇನ್ನು ಕೊರೋನಾ ಚೇತರಿಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿರುವುದು ಸಮಾಧಾನ ತಂದಿದೆ.

ದೇಶದಲ್ಲಿ ಇಲ್ಲಿಯ ತನಕ 2,93,66,601 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 56,994 ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ಸತತ 47ನೇ ದಿನದಲ್ಲೂ ಪ್ರತಿ ದಿನದ ಚೇತರಿಕೆ ಪ್ರಮಾಣ ಹೊಸ ಪ್ರಕರಣ ಸಂಖ್ಯೆಗಿಂತ ಹೆಚ್ಚಿದೆ. ಸದ್ಯ ಭಾರತದ ಕೊರೋನಾ ಚೇತರಿಕೆ ಪ್ರಮಾಣ 96.87%ಕ್ಕೆ ಏರಿಕೆಯಾಗಿದೆ.

ಕೋವಿಡ್‌ಗೆ ಮೃತಪಟ್ಟವರಲ್ಲಿ 50 ವರ್ಷದೊಳಗಿನವರೆ ಹೆಚ್ಚು; AIIMS ಅಧ್ಯಯನ ವರದಿ ...

ಕಳೆದೊಂದು ವಾರದಿಂದ ಕೊರೋನಾ ಪಾಸಿಟಿವಿಟಿ ದರ ಶೇಕಡಾ 5ಕ್ಕಿಂತ ಕೆಳಗಿಳಿದಿದೆ. ದೈನಂದಿನ ಪಾಸಿಟಿವಿಟಿ ದರ ಸಹ ಸತತ 22ನೇ ದಿನದಲ್ಲಿ 5% ಮಟ್ಟದಿಂದ ಕೆಳಗಿದ್ದು, ಅದೀಗ 2.12%ಗೆ ಕುಸಿದಿದೆ. ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಇದುವರೆಗೆ 40.81 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. 

ಲಸಿಕಾ ಅಭಿಯಾನ ಮತ್ತಷ್ಟು ಚುರಕುಗೊಂಡಿದೆ. ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರಂತರ ಲಸಿಕೆ ಪೂರೈಕೆ ಮಾಡುತ್ತಿದೆ. ಇದುವರೆಗೆ 32.90 ಕೋಟಿ ಲಸಿಕೆ ಡೋಸ್ ನೀಡಲಾಗಿದೆ.

Follow Us:
Download App:
  • android
  • ios