ಬೀಜಿಂಗ್(ಜ.10): ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆ ವಿತರಣೆಗೆ ಭಾರತದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ನಡುವೆ ಕೋವಾಕ್ಸಿನ್ ಲಸಿಕೆಗೆ ಅನುಮತಿ ನೀಡಿದ ಹಿಂದಿನ ಕಾರಣ ಬಹಿರಂಗ ಪಡಿಸಬೇಕು. ಇದು ಬಳಕೆಗೆ ಯೋಗ್ಯವೇ ಎಂದು ಕಾಂಗ್ರೆಸ್ ನಾಯಕರು ಒ್ಬಬರ ಮೇಲೊಬ್ಬರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಆದರೆ ಈ ವಿರೋಧದ ನಡುವೆ ಇದೀಗ ಸದಾ ಭಾರತವನ್ನು ಟೀಕಿಸುವ, ಕತ್ತಿ ಮಸೆಯುವ ಚೀನಾ, ಭಾರತದ ಲಸಿಕೆಗೆ ಬೆಸ್ಟ್ ಸರ್ಟಿಫಿಕೇಟ್ ನೀಡಿದೆ

ಚೀನಾ ಲಸಿಕೆಯಿಂದ 73 ಸೈಡ್‌ ಎಫೆಕ್ಟ್!...

ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್‌ನಲ್ಲಿ ಭಾರತದ ಲಸಿಕೆ ಹೆಚ್ಚು ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿ ಎಂದಿದೆ. ಚೀನಾ ಲಸಿಕೆಗಿಂತ ಭಾರತದ ಲಸಿಕೆಗಳು ಯಾವುದರಲ್ಲೂ ಕಡಿಮೆ ಇಲ್ಲ. ಸಂಶೋಧನೆ ಹಾಗೂ ಉತ್ಪಾದನೆಯಲ್ಲೂ ಭಾರತ ಮುಂದಿದೆ. ಭಾರತ ವಿಶ್ವದ ಅತೀ ದೊಡ್ಡ ಔಷಧ ತಯಾರಕ ಎಂದು ಗ್ಲೋಬಲ್ ಟೈಮ್ಸ್‌ನಲ್ಲಿ ಹೇಳಿದೆ.

2 ಲಸಿಕೆಗೆ ಅನುಮತಿ; ಭಾರತದ ನಿರ್ಧಾರದ ಬೆನ್ನಲ್ಲೇ ಮಹತ್ವದ ಪ್ರಕಟಣೆ ಹೊರಡಿಸಿದ WHO!

ಚೀನಾದ  ಲೈಫ್ ಆಫ್ ಸೈನ್ಸ್ ಜಿಲಿನ್ ವಿಶ್ವವಿದ್ಯಾಲಯ ಜಿಯಾಂಗ್ ಚುನ್ಲಾಯಿ ಇತ್ತೀಚೆಗೆ ಭಾರತ್ ಭಯೋಟೆಕ್ ಸಂಸ್ಥೆಗೆ ಭೇಟಿ ನೀಡಿದ್ದಾರೆ. ಈ ಕುರಿತು ಗ್ಲೋಬಲ್ ಟೈಮ್ಸ್‌ನಲ್ಲಿ ಉಲ್ಲೇಖಿಸಲಾಗಿದೆ. ಜಿಯಾಂಗ್ ಪ್ರಕಾರ, ಔಷಧ ತಯಾರಿಕೆಯಲ್ಲಿ ಭಾರತ ಬಹಳ ಪ್ರಬುದ್ಧ ಉತ್ಪಾದನೆ ಮತ್ತು ಪೂರೈಕೆ ಸಾಮರ್ಥ್ಯ ಹೊಂದಿದೆ. ಪಾಶಿಮಾತ್ಯ ದೇಶಗಳಿಗಿಂತ ಉತ್ತಮವಾಗಿ ಎಂದಿದ್ದಾರೆ. ಈ ಮಾತುಗಳನ್ನು ಗ್ಲೋಬಲ್ ಟೈಮ್ಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಸದಾ ಭಾರತ ವಿರುದ್ಧ ಕತ್ತಿ ಮಸೆಯುವ, ಟೀಕೆ ಮಾಡುವ ಚೀನಾ ಇದೀಗ ಭಾರತದ ಲಸಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ವಿಶ್ವ ಕಣ್ಮುಚ್ಚಿ ಭಾರತದ ಲಸಿಕೆ ಪಡೆಯುವಷ್ಟು ಯೋಗ್ಯವಾಗಿದೆ ಎಂದಿದೆ. ಕೇಂದ್ರ ಸರ್ಕಾರ ಲಸಿಕೆ ವಿತರಣೆಗೂ ಮುನ್ನ ಚೀನಾ ಸರ್ಕಾರದ ಮುಖವಾಣಿಯಲ್ಲಿ ಈ ರೀತಿಯ ಬೆಸ್ಟ್ ಸರ್ಟಿಫಿಕೇಟ್ ಸಿಕ್ಕಿರುವುದು ಇದೀಗ ಕಾಂಗ್ರೆಸ್ ಸೇರಿದಂತೆ ಲಸಿಕೆ ವಿರೋಧಿಸಿದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.