Asianet Suvarna News Asianet Suvarna News

ಕೊರೋನಾ ಸಾವಿನ ಸಂಖ್ಯೆ 2 ಲಕ್ಷಕ್ಕೆ ಏರಿಕೆ; ಆದರೆ ಬೇರೆ ಕತೆ ಹೇಳುತ್ತಿದೆ ಸ್ಮಶಾನ!

ಕೊರೋನಾ ವೈರಸ್‌ಗೆ ಭಾರತ ತತ್ತರಿಸಿದೆ. ಪ್ರತಿ ದಿನ ಕೊರೋನಾ ಪ್ರಕರಣ ಸಂಖ್ಯೆ ಹಿಂದಿನ ದಾಖಲೆಯನ್ನು ಅಳಿಸಿಹಾಕುತ್ತಿದೆ. ಇದರ ಜೊತೆಗೆ ಸಾವಿನ ಸಂಖ್ಯೆಯೂ ಗಣನೀಯ ಏರಿಕೆಯಾಗುತ್ತಿದ್ದು, ಆತಂಕ ಹೆಚ್ಚಿಸುತ್ತಿದೆ. ಸರ್ಕಾರಿ ಅಧೀಕೃತ ವರದಿ ಪ್ರಕಾರ ಕೊರೋನಾಗೆ ಬಲಿಯಾದವರ ಸಂಖ್ಯೆ 2 ಲಕ್ಷ ದಾಟಿದೆ. ಆದರೆ ಸ್ಮಶಾನ ಬೇರೆ ಕತೆ ಹೇಳುತ್ತಿದೆ.

India covid 19 death toll crosses 2 lakh mark crematoriums reveals another story ckm
Author
Bengaluru, First Published Apr 28, 2021, 10:36 PM IST

ನವದೆಹಲಿ(ಏ.28): ಕೊರೋನಾ ಪ್ರಕರಣ ಸಂಖ್ಯೆ, ಆಕ್ಸಿಜನ್ ಕೊರತೆ, ವೈದ್ಯಕೀಯ ಸಲಕರಣೆ ಕೊರತೆ ಸೇರಿದಂತೆ ಭಾರತದ ಸಮಸ್ಯೆಗಳಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆಯತ್ತ ಹೆಚ್ಚಿನ ಗಮನಹೋಗಿಲ್ಲ. ಸರ್ಕಾರ ಬಿಡುಗಡೆ ಮಾಡುವು ವರದಿ ಹೊರತು ಪಡಿಸಿದರೆ ಇತರ ಅಂಕಿ ಸಂಖ್ಯೆ ಕುರಿತು ಹೊರಬೀಳುತ್ತಿಲ್ಲ. ಸರ್ಕಾರಿ ವರದಿ ಪ್ರಕಾರ ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2 ಲಕ್ಷ ದಾಟಿದೆ. ಆದರೆ ಈ ಸಂಖ್ಯೆ ಈ ಹಿಂದೆಯೇ ದಾಟಿದೆ ಅನ್ನುತ್ತಿದೆ ಮತ್ತೊಂದು ವರದಿ.

ಈ ಕುರಿತ ಕೆಲ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದೆ. ಪ್ರತಿ ನಗರದಲ್ಲಿ ಶವಗಾರ, ಸ್ಮಶಾನ ಸೇರಿದಂತೆ ಕೊರೋನಾಗೆ ಬಲಿಯಾದವರನ್ನು ಹಲವೆಡೆ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ದೆಹಲಿ ನಗರದಲ್ಲಿ ಎಪ್ರಿಲ್ 18 ರಿಂದ 24ರ ವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 1,938. ಇದು ಸರ್ಕಾರಿ ದಾಖಲೆ. ಈ ಕುರಿತು ಎನ್‌ಡಿಟಿವಿ ಮಾಧ್ಯಮದ ತನಿಖಾ ವರದಿಯಲ್ಲಿ ದೆಹಲಿಯ ಒಟ್ಟು 26 ಸ್ಮಶಾನದಲ್ಲಿ ಈ ಅವಧಿಯಲ್ಲಿ 3,096 ಕೊರೋನಾ ಸೋಂಕಿತ ಶವಗಳನ್ನು ಸುಡಲಾಗಿದೆ ಎಂದು ವರದಿ ಮಾಡಿದೆ.

ಬೆಂಗಳೂರಿನಲ್ಲಿ ಏಪ್ರಿಲ್ 18-22ರವರೆಗಿನ  ಸರ್ಕಾರದ ದಾಖಲೆಗಳ ಪ್ರಕಾರ,  467 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.  ಆದರೆ ತನಿಖಾ ವರದಿಯಲ್ಲಿ ಇದೇ ಅವಧಿಯಲ್ಲಿ 860 ಕೊರೋನಾ ಸೋಂಕಿತರ ಶವ ಸುಡಲಾಗಿದೆ. 

ಬಹುತೇಕ ನಗರದಲ್ಲಿನ ವರದಿಯಲ್ಲಿ ಈ ರೀತಿಯ ವ್ಯತ್ಯಾಸಗಳು ಕಾಣುತ್ತಿದೆ. ಹೀಗಾಗಿ ಕೊರೋನಾಗೆ ಬಲಿಯಾದವರ ಸಂಖ್ಯೆ ಈಗಾಗಲೇ 2 ಲಕ್ಷ ದಾಟಿದೆ ಅನ್ನೋ ಮಾತುಗಳು ಬಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹಾಗೂ ಕೊರೋನಾಗೆ ಬಲಿಯಾಗುತ್ತಿರುವುದು ಕಡಿಮೆಯಾಗಲಿ. 

Follow Us:
Download App:
  • android
  • ios