ಸಿಕ್ಕಿಂ(ಜ.25): ಪೂರ್ವ ಲಡಾಖ್‌ನಲ್ಲಿ LAC ಬಳಿ ಚೀನಾ ಹಾಗೂ ಭಾರತೀಯ ಯೋಧರ ನಡುವೆ ಘರ್ಷಣೆಯಾಗಿದೆ. ಮಾಧ್ಯಮ ವರದಿಗಳನ್ವಯ ಚೀನಾ ಸೈನಿಕರು ಎಲ್‌ಎಸಿ ಯಥಾಸ್ಥಿತಿ ಬದಲಾಯಿಸಲು ಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲ ಚೀನೀ ಸೈನಿಕರು ಭಾರತದ ಗಡಿ ದಾಟಲು ಯತ್ನಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಯೋಧರು ಅವರನ್ನು ತಡೆದಿದ್ದಾರೆ. ಉಭಯ ರಾಷ್ಟ್ರದ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, ಇದರಲ್ಲಿ ನಾಲ್ವರು ಭಾರತೀಯ ಹಾಗೂ 20 ಚೀನಾ ಯೋಧರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ಮೂರು ದಿನಗಳ ಹಿಂದೆ ನಾಕುಲಾದಲ್ಲಿ ನಡೆದಿತ್ತು ಜಗಳ

ಇನ್ನು ಈ ಘರ್ಷಣೆ ಮೂರು ದಿನಗಳ ಹಿಂದೆ ಸಿಕ್ಕಿಂನ ನಾಕುಲಾ ಸೆಕ್ಟರ್‌ನಲ್ಲಿ ನಡೆದಿತ್ತೆಂದು ವರದಿಗಳು ಉಲ್ಲೇಖಿಸಿವೆ. ಗಡಿ ದಾಟಲು ಯತ್ನಿಸಿದ ಚೀನಾದ ಸೈನಿಕರನ್ನು ತಮ್ಮ ಕಾರ್ಯಾಚರಣೆ ಮೂಲಕ ಭಾರತೀಯ ಸೈನಿಕರು ತಡೆದಿದ್ದಾರೆ.

ಜೂನ್ 16ರಂದೂ ಸೈನಿಕರ ನಡುವೆ ನಡೆದಿತ್ತು ಘರ್ಷಣೆ

15-16 ಜೂನ್‌ನಲ್ಲಿ ಲಡಾಖ್‌ನ ಗಲ್ವಾನ್ ಕಣಿವೆಯ ಎಲ್‌ಎಸಿಯಲ್ಲೂ ಉಭಯ ರಾಷ್ಟ್ರದ ಸಐನಿಕರ ನಡುವೆ ಸಂಘರ್ಷ ನಡೆದಿತ್ತು. ಇದರಲ್ಲಿ ಭಾರತೀಯ ಸೇನೆಯ ಕರ್ನಲ್ ಸೇರಿ ಇಪ್ಪತ್ತು ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಈ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಚೀನಾಗೆ ತಕ್ಕ ಪಾಠ ಕಲಿಸಿದ್ದರೆನ್ನಲಾಗಿತ್ತು.