ಭಾರತದ ಗಡಿಯಲ್ಲಿ ಚೀನಾ ತಂಟೆ ಮತ್ತೆ ಆರಂಭ ಮಹತ್ವದ ಬೆಳವಣಿಗೆ ನಡುವೆ ಲಡಾಖ್‌ಗೆ ರಾಜನಾಥ್ ಸಿಂಗ್ ಭೇಟಿ ತೀವ್ರ ಕುತೂಹಲ ಮೂಡಿಸಿದ ರಕ್ಷಣಾ ಸಚಿವರ ಭೇಟಿ

ನವದೆಹಲಿ(ಜೂ.26): ಸತತ ಮಾತುಕತೆ, ತಕ್ಕ ತಿರುಗೇಟುಗಳಿಂದ ಕಳೆದ ವರ್ಷ ಚೀನಾ ಆರಂಭಿಸಿದ ಗಡಿ ತಂಟೆ ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಚೀನಾ ಗಡಿಯಲ್ಲಿ ರಸ್ತೆ ಅಭಿವೃದ್ಧಿ, ಯುದ್ದವಿಮಾನಗಳ ಹಾರಾಟ ಸೇರಿದಂತೆ ಹಲವು ಕಸರತ್ತು ನಡೆಸುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಾಳೆ(ಜೂ.27) ಲಡಾಖ್‌ಗೆ ಭೇಟಿ ನೀಡಲಿದ್ದಾರೆ.

ಲಡಾಖ್‌ ಗಡಿ ಬಳಿ ಮತ್ತೆ ಚೀನಾ ತಾಲೀಮು ತಂಟೆ: 22 ಸಮರ ವಿಮಾನಗಳಿಂದ ಶಕ್ತಿ ಪ್ರದರ್ಶನ!

BRO ಮೂಲಸಕೌರ್ಯ ಅಭಿವೃದ್ಧಿ ಪರಿಶೀಲನೆ ಸೇರಿದಂತೆ ಕೆಲ ಮಹತ್ವದ ಕಾರಣಕ್ಕಾಗಿ ರಾಜನಾಥ್ ಸಿಂಗ್ ಲಡಾಖ್ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಕಾರ್ಯಕ್ರಮದ ನಡುವೆ ರಾಜನಾಥನ್ ಸಿಂಗ್ LAC(ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಭೇಟಿ ನೀಡುವ ಸಾಧ್ಯತೆಯನ್ನು ಕೇಂದ್ರ ರಕ್ಷಣಾ ಇಲಾಖೆ ತಳ್ಳಿ ಹಾಕಿಲ್ಲ.

ಕಳೆದ ವರ್ಷ ಮಾತುಕತೆ ಬಳಿಕವೂ ಗೋಗ್ರಾ ಹಾಗೂ ಹಾಟ್ ಸ್ಪ್ರಿಂಗ್ ವಲಯದಲ್ಲಿನ ಚೀನಾ ಸೇನಾ ಹಿಂದೆ ಸರಿಯದೆ ಕಿರಿಕ್ ಮಾಡಿತ್ತು. ಗೋಗ್ರಾ ಹಾಗೂ ಹಾಟ್‌ಸ್ಪ್ರಿಂಗ್‌ನಿಂದ ಚೀನಾ ಸೇನೆ ಹಿಂದೆ ಸರಿಯದೆ ಮೊಂಡುತನ ಮಾಡಿತ್ತು. ಈಗಲೂ ಇದೇ ವಲಯದಲ್ಲಿ ಚೀನಾ ತಂಟೆ ನಡೆಸುತ್ತಲೇ ಇದೆ.

ಪೂರ್ವ ಲಡಾಖ್‌ನಲ್ಲಿ ಭಾರತದ ಮೇಲೆ ಚೀನಾ ದಾಳಿ: 2020ರ ದೊಡ್ಡ ತಪ್ಪು!

ಪರಿಸ್ಥಿತಿ ಕೈಮೀರುತ್ತಿದ್ದಂತೆ, ಚೀನಾ ವಿದೇಶಾಂಗ ಸಚಿವಾಲಯ ಈ ಸಂದರ್ಭಕ್ಕೆ ಭಾರತವೇ ಕಾರಣ ಎಂದಿತ್ತು. ಭಾರತ ಗಡಿಯುದ್ದಕ್ಕೂ ನಿಯಮ ಉಲ್ಲಂಘಿಸುತ್ತಿದೆ. ಶಾಂತಿ ಕಾಪಾಡುವ ಬದ್ಧತೆಯನ್ನು ತಳ್ಳಿ ಹಾಕಿದೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿತ್ತು. ಈ ಬೆಳವಣಿಗೆ ಬಳಿಕ ಇದೀಗ ರಾಜನಾಥ್ ಸಿಂಗ್ ಲಡಾಖ್‌ಗೆ ತೆರಳುತ್ತಿರುವುದು ಮಹತ್ವ ಪಡೆದುಕೊಂಡಿದೆ.