ಉದಯೋನ್ಮುಖ ಆರ್ಥಿಕತೆಗಳ ಒಕ್ಕೂಟವಾಗಿರುವ ಬ್ರಿಕ್ಸ್‌ನ ಈ ವರ್ಷದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಈ ನಿಮಿತ್ತ ಹೊಸ ಲೋಗೋ, ಥೀಂ ಮತ್ತು ವೆಬ್‌ಸೈಟ್‌ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇದನ್ನು ಬಿಡುಗಡೆಗೊಳಿಸಿದರು.
ನವದೆಹಲಿ: ಉದಯೋನ್ಮುಖ ಆರ್ಥಿಕತೆಗಳ ಒಕ್ಕೂಟವಾಗಿರುವ ಬ್ರಿಕ್ಸ್‌ನ ಈ ವರ್ಷದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಈ ನಿಮಿತ್ತ ಹೊಸ ಲೋಗೋ, ಥೀಂ ಮತ್ತು ವೆಬ್‌ಸೈಟ್‌ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇದನ್ನು ಬಿಡುಗಡೆಗೊಳಿಸಿದರು.
‘ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ’ ಥೀಂ ಆಗಿದೆ. ವೆಬ್‌ಸೈಟ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಸಮ್ಮೇಳನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು.
ಲೋಗೋ ಹೇಗಿದೆ?:
ಕಮಲಾಕಾರದಲ್ಲಿರುವ ಬ್ರಿಕ್ಸ್‌ನ ಹೊಸ ಚಿಹ್ನೆ, ಎಲ್ಲಾ 10 ಸದಸ್ಯ ರಾಷ್ಟ್ರಗಳನ್ನು ಪ್ರತಿನಿಧಿಸುವ ಬಣ್ಣಗಳನ್ನು ಒಳಗೊಂಡಿದೆ. ಈ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದೆ. ನಡುವಲ್ಲಿ ಮೂಡಿರುವ ನಮಸ್ತೆ ಆಕಾರವು ಭಾರತದ ಗೌರವ, ಸೌಹಾರ್ದತೆಯ ಪ್ರತೀಕವಾಗಿದೆ. ‘ಈ ಲೋಗೋ ಒಳಗೊಳ್ಳುವಿಕೆ, ಮಾತುಕತೆ ಮತ್ತು ಎಲ್ಲರಿಗೂ ಲಾಭದಾಯಕ ಬೆಳವಣಿಗೆ, ಸತಸ್ಥಿರ ಅಭಿವೃದ್ಧಿ, ಜಾಗತಿಕ ಸಾಮರಸ್ಯವನ್ನು ಸೂಚಿಸುತ್ತದೆ’ ಎಂದು ಸರ್ಕಾರ ಹೇಳಿದೆ.
ಜನನಾಯಗನ್ ಬಿಡುಗಡೆ ಅರ್ಜಿ ಜ.19ಕ್ಕೆ ಸುಪ್ರೀಂನಲ್ಲಿ ವಿಚಾರಣೆ
ನವದೆಹಲಿ: ನಟ, ಟಿವಿಕೆ ನಾಯಕ ವಿಜಯ್ ಅವರ ‘ಜನನಾಯಗನ್’ ಚಿತ್ರದ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನೀಡಿರುವ ತಡೆ ಪ್ರಶ್ನಿಸಿ ನಿರ್ಮಾಣ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯನ್ನು ಜ.19ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲಿದೆ. ಆಚಿತ್ರದಲ್ಲಿ ಹಿಂಸೆ, ರಾಜಕೀಯ ವಿಷಯ ಹೆಚ್ಚಿದೆ ಹಾಗೂ ಸೇನಾ ಲೋಗೋ ದುರ್ಬಳಕೆ ಆಗಿದೆ ಎಂಬ ಆರೋಪವಿದೆ. ಹೀಗಾಗಿ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣಪತ್ರ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಚಿತ್ರತಂಡ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಏಕಸದಸ್ಯ ಪೀಠ ಚಿತ್ರದ ಪರ ತೀರ್ಪು ನೀಡಿದ್ದರೂ ವಿಭಾಗೀಯ ಪೀಠ ಏಕಸದ್ಯ ಪೀಠದ ಆದೇಶಕ್ಕೆ ತಡೆ ನೀಡಿತ್ತು,
ಜನನಾಯಗನ್‌ಗೆ ತಡೆ: ಮೋದಿ ವಿರುದ್ಧ ರಾಹುಲ್ ಗಾಂಧಿ ಸಿಡಿಮಿಡಿ
ನವದೆಹಲಿ: ನಟ, ಟಿವಿಕೆ ಪಕ್ಷದ ನಾಯಕ ವಿಜಯ್ ಅವರ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ ‘ಜನ ನಾಯಗನ್’ಗೆ ಸೆನ್ಸಾರ್ ಮಂಡಳಿ ತಡೆ ನೀಡಿರುವುದಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಿಡಿಕಾದ್ದಾರೆ. ‘ಚಿತ್ರದ ಮೇಲೆ ಕೇಂದ್ರ ಸರ್ಕಾರ ಹೇರುತ್ತಿರುವ ಒತ್ತಡವು ತಮಿಳು ಸಂಸ್ಕೃತಿ ಮೇಲಿನ ದಾಳಿ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.ಈ ಕುರಿತು ಎಕ್ಸ್‌ನಲ್ಲಿ ಕಿಡಿಕಾರಿರುವ ರಾಹುಲ್,‘ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಜನನಾಯಗನ್ ಚಿತ್ರವನ್ನು ತಡೆ ಹಿಡಿಯಲು ಯತ್ನ ಮಾಡುತ್ತಿದೆ. ಇದು ತಮಿಳು ಸಂಸ್ಕೃತಿ ಮೇಲಿನ ಕೇಂದ್ರದ ದಬ್ಬಾಳಿಕೆ. ಮಿಸ್ಟರ್ ಮೋದಿ.. ತಮಿಳಿಗರ ದನಿಯನ್ನು ಮೆಟ್ಟಿಹಾಕುವ ಯತ್ನ ಎಂದಿಗೂ ಕೈಗೂಡದು’ ಎಂದು ಬರೆದಿದ್ದಾರೆ.
ಕರೂರು ಕಾಲ್ತುಳಿತ: ಜ.19ಕ್ಕೆ ವಿಚಾರಣೆಗೆ ಮತ್ತೆ ವಿಜಯ್‌ಗೆ ಬುಲಾವ್
ನವದೆಹಲಿ: ಕಳೆದ ವರ್ಷ 41 ಜನರ ಸಾವಿಗೆ ಕಾರಣವಾದ ತಮಿಳುನಾಡಿನ ಕರೂರಿನ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ, ಟಿವಿಕೆ ಪಕ್ಷದ ನಾಯಕ ವಿಜಯ್ ಅವರಿಗೆ ಸಿಬಿಐ ಜ.19ರಂದು ಪುನಃ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.ಇದೇ ಪ್ರಕರಣದಲ್ಲಿ ಸೋಮವಾರ 6 ತಾಸು ವಿಚಾರಣೆ ಎದುರಿಸಿದ್ದ ವಿಜಯ್ ಅವರಿಗೆ ಮಂಗಳವಾರವೂ ಬರುವಂತೆ ಸಿಬಿಐ ಸೂಚಿಸಿತ್ತು. ಆದರೆ ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ಬೇರೆ ದಿನಾಂಕ ಕೋರಿದ್ದರು. ಹೀಗಾಗಿ ಜ.19ಕ್ಕೆ ದಿನಾಂಕ ನಿಗದಿ ಮಾಡಿದೆ.
ಸೋಮವಾರ ವಿಚಾರಣೆಯಲ್ಲಿ ವಿಜಯ್ ಅವರು ಕಾಲ್ತುಳಿತಕ್ಕೆ ತಮಿಳುನಾಡು ಪೊಲೀಸರು ಕಾರಣ ಎಂದು ಆರೋಪಿಸಿದ್ದರು.


