ಆರ್ಟೆಮಿಸ್‌ ಒಪ್ಪಂದಕ್ಕೆ ಭಾರತ ಸಹಿ: 2024ರಲ್ಲಿ ಅಮೆರಿಕ ಜೊತೆ ಅಂತ​ರಿಕ್ಷ ಕೇಂದ್ರಕ್ಕೆ ಜಂಟಿ ಪ್ರಯಾಣ

ಚಂದ್ರಯಾನ, ಮಂಗಳಯಾನದ ಜೊತೆಗೆ ಭವಿಷ್ಯದಲ್ಲಿ ಬಾಹ್ಯಾಕಾಶ ಅನ್ವೇಷಣೆಯ ಹಲವು ಕನಸುಗಳನ್ನು ಹೊಂದಿರುವ ಮಹತ್ವದ ಆರ್ಟೆಮಿಸ್‌ ಒಪ್ಪಂದಕ್ಕೆ ಭಾರತ ಕೂಡಾ ಸಹಿ ಹಾಕಿದೆ.

India America signs Artemis deal Joint journey to space station with US in 2024 akb

ವಾಷಿಂಗ್ಟನ್‌: ಚಂದ್ರಯಾನ, ಮಂಗಳಯಾನದ ಜೊತೆಗೆ ಭವಿಷ್ಯದಲ್ಲಿ ಬಾಹ್ಯಾಕಾಶ ಅನ್ವೇಷಣೆಯ ಹಲವು ಕನಸುಗಳನ್ನು ಹೊಂದಿರುವ ಮಹತ್ವದ ಆರ್ಟೆಮಿಸ್‌ ಒಪ್ಪಂದಕ್ಕೆ ಭಾರತ ಕೂಡಾ ಸಹಿ ಹಾಕಿದೆ. ಈ ಮೂಲಕ ಅಮೆರಿಕದ ನೇತೃತ್ವದಲ್ಲಿ ಸೃಷ್ಟಿಯಾಗಿದ್ದ ವೇದಿಕೆಗೆ 26ನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಉಭಯ ದೇಶಗಳು ಈ ಕುರಿತ ಒಪ್ಪಂದಕ್ಕೆ ಸಹಿಹಾಕಿವೆ. ಆರ್ಟೆಮಿಸ್‌ ಯೋಜನೆಯ ಜೊತೆಗೆ 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ISI) ಜಂಟಿ ಪ್ರಯಾಣ ಕೈಗೊಳ್ಳಲೂ ಉಭಯ ದೇಶಗಳು ಸಮ್ಮತಿಸಿವೆ. ಆದರೆ ಇದು ಮಾನವಸಹಿತವೋ ಅಥವಾ ಮಾನವ ರಹಿತವೋ ಎಂಬುದು ಬಹಿರಂಗವಾಗಿಲ್ಲ.

ಆರ್ಟೆಮಿಸ್‌ ಒಪ್ಪಂದ:

1967ರ ಬಾಹ್ಯಾಕಾಶ ಒಪ್ಪಂದವನ್ನು ಮೂಲವಾಗಿಟ್ಟುಕೊಂಡು 2020ರಲ್ಲಿ ಆರ್ಟೆಮಿಸ್‌ ಒಪ್ಪಂದಕ್ಕೆ ಹಲವು ದೇಶಗಳು ಸಹಿಹಾಕಿದವು. ಆಧುನಿಕ ಯುಗದಲ್ಲಿ ಬಾಹ್ಯಾಕಾಶ ಅನ್ವೇಷಣೆ ಮತ್ತು ಬಾಹ್ಯಾಕಾಶದ (Space) ಸದ್ಭಳಕೆಗೆ ಸೂಕ್ತ ಮಾರ್ಗಸೂಚಿ ರೂಪಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕೆ ಇವರೆಗೆ 25 ದೇಶಗಳು ಸದಸ್ಯತ್ವ ಪಡೆದುಕೊಂಡಿದ್ದು, ಇದೀಗ ಭಾರತ ಕೂಡಾ ಸೇರ್ಪಡೆಯಾಗಿದೆ.

ಏನೇನು ಗುರಿ?:

ಆರ್ಟೆಮಿಸ್‌ ಯೋಜನೆಯ ಭಾಗವಾಗಿ 2025ರಲ್ಲಿ ಚಂದ್ರನ ಮೇಲೆ ಮತ್ತೊಮ್ಮೆ ಮಾನವ ಸಹಿತಯಾನ ಕೈಗೊಳ್ಳುವ ಗುರಿಯನ್ನು ಅಮೆರಿಕ ಹಾಕಿಕೊಂಡಿದೆ. ಇದರ ಜೊತೆಗೆ ಮಂಗಳಯಾನ ಸೇರಿದಂತೆ ಇತರೆ ಗ್ರಹಗಳು, ಬಾಹ್ಯಾಕಾಶದ ಅನ್ವೇಷಣೆಯ ಗುರಿಯೂ ಇದೆ.

ಬೆಂಗ​ಳೂ​ರ​ಲ್ಲೂ US ರಾಯಭಾರ ಕಚೇರಿ: H1B Visa ನಿಯಮ ಬದ​ಲಾಗಿ ಭಾರತೀಯ ಟೆಕ್ಕಿಗಳಿಗೆ ಅನುಕೂಲ

ಐಎಸ್‌ಎಸ್‌ ಯಾನ?:

ಚೀನಾ ತನ್ನದೇ ಆದ ಪ್ರತ್ಯೇಕ ಬಾಹ್ಯಾಕಾಶ ಕೇಂದ್ರ ನಿರ್ಮಾಣ ಮಾಡುತ್ತಿರುವ ಹೊತ್ತಿನಲ್ಲೇ, ಹಾಲಿ ಅಸ್ತಿತ್ವದಲ್ಲಿರುವ ವಿವಿಧ ದೇಶಗಳ ಜಂಟಿ ಯೋಜನೆಯಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭಾರತವನ್ನು ಇನ್ನಷ್ಟುಹತ್ತಿರ ಮಾಡುವ ಯತ್ನವನ್ನು ಅಮೆರಿಕ ಮಾಡಿದೆ. ಇದರ ಭಾಗವಾಗಿ 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜಂಟಿ ಪ್ರಯಾಣ ಕೈಗೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ.

ಸೆಮಿ ಕಂಡಕ್ಟರ್‌:

ಸೆಮಿ ಕಂಡಕ್ಟರ್‌ (Semiconductor) ವಲಯದಲ್ಲಿನ ಪೂರೈಕೆ ಜಾಲವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಮೆರಿಕ (America) ಮತ್ತು ಭಾರತದ ಕಂಪನಿಗಳು ಒಂದಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿವೆ. ಈ ಕುರಿತು ಅಮೆರಿಕ ಮೈಕ್ರಾನ್‌ ಟೆಕ್ನಾಲಜಿಯು, ಭಾರತದ ಇಂಡಿಯನ್‌ ನ್ಯಾಷನಲ್‌ ಸೆಮಿಕಂಡಕ್ಟರ್‌ ಮಿಷನ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದಲ್ಲದೆ ಕೃತಕ ಬುದ್ಧಿಮತ್ತೆ (Artificial intelligence), ಕ್ವಾಂಟಮ್‌ ತಂತ್ರಜ್ಞಾನದಲ್ಲೂ ಪಾಲುದಾರಿಕೆಗೆ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ಭಾರತದಲ್ಲಿ ಸೆಮಿಕಂಡಕ್ಟರ್ ಸ್ಥಾಪನೆ: ಇದು ಪ್ರಧಾನಿ ದೂರದೃಷ್ಟಿ ಫಲ : ರಾಜೀವ್ ಚಂದ್ರಶೇಖರ್

Latest Videos
Follow Us:
Download App:
  • android
  • ios