ಡಿಸೆಂಬರಲ್ಲೇ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ಲಾನ್, ಬಿಜೆಪಿಯಿಂದ ಎಲ್ಲಾ ಕಾಪ್ಟರ್ ಬುಕ್: ಮಮತಾ
ಡಿಸೆಂಬರಲ್ಲೇ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ಲಾನ್, ಬಿಜೆಪಿಯಿಂದ ಎಲ್ಲಾ ಕಾಪ್ಟರ್ ಬುಕ್, ಡಿಸೆಂಬರಲ್ಲೇ ಚುನಾವಣೆ. ಬೇರೆ ಪಕ್ಷಗಳಿಗೆ ಹೆಲಿಕಾಪ್ಟರ್ ಸಿಗದಂತೆ ಬಿಜೆಪಿ ಕುತಂತ್ರ. ವಿಪಕ್ಷಗಳ ‘ಇಂಡಿಯಾ’ ಒಕ್ಕೂಟದ ನಾಯಕಿ ಆರೋಪ

ಕೋಲ್ಕತಾ (ಆ.29): ‘ಮೇನಲ್ಲಿ ನಡೆಯಬೇಕಿರಯಡಿಸೆಂಬರಲ್ಲೇ ಲೋಕಸಭೆ ಚುನಾವಣೆಗೆ ಬಿಜೆಪಿ ಯೋಜನೆ ರೂಪಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟದ ನಾಯಕಿಯರಲ್ಲಿ ಒಬ್ಬರಾದ ಮಮತಾ ಬ್ಯಾನರ್ಜಿ ‘ಬಾಂಬ್’ ಸಿಡಿಸಿದ್ದಾರೆ. ‘ಬಿಜೆಪಿಯವರು ದೇಶದಲ್ಲಿರುವ ಎಲ್ಲಾ ಹೆಲಿಕಾಪ್ಟರ್‌ಗಳನ್ನೂ ಚುನಾವಣಾ ಪ್ರಚಾರಕ್ಕಾಗಿ ಈಗಲೇ ಬುಕ್ ಮಾಡಿದ್ದು, 2023ರ ಡಿಸೆಂಬರ್‌ನಲ್ಲೇ ಲೋಕಸಭೆ ಚುನಾವಣೆ ನಡೆಸುವ ಸಾಧ್ಯತೆಯಿದೆ’ ಎಂದು ಮಮತಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ ರಾರಯಲಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಹೆಲಿಕಾಪ್ಟರ್‌ಗಳು ಸಿಗದಂತೆ ನೋಡಿಕೊಳ್ಳಲು ಬಿಜೆಪಿಯವರು ಎಲ್ಲಾ ಹೆಲಿಕಾಪ್ಟರ್‌ಗಳನ್ನೂ ಈಗಲೇ ಬುಕ್ ಮಾಡಿದ್ದಾರೆ. ಹೀಗಾಗಿ ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಬೇಕಾದ ಲೋಕಸಭೆ ಚುನಾವಣೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ವರ್ಷದ ಡಿಸೆಂಬರ್‌ನಲ್ಲೇ ನಡೆಸುವ ಸಾಧ್ಯತೆಯಿದೆ’ ಎಂದು ಹೇಳಿದರು.
‘ಬಿಜೆಪಿಯೇನಾದರೂ ಮೂರನೇ ಬಾರಿಯೂ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಸಂಪೂರ್ಣ ಸರ್ವಾಧಿಕಾರ ಜಾರಿಗೆ ಬರಲಿದೆ. ಕೇಸರಿ ಪಕ್ಷ ಈಗಾಗಲೇ ದೇಶವನ್ನು ಬೇರೆ ಬೇರೆ ಸಮುದಾಯಗಳ ನಡುವಿನ ಯುದ್ಧಭೂಮಿಯಾಗಿ ಪರಿವರ್ತನೆ ಮಾಡಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅವರು ಭಾರತವನ್ನು ದ್ವೇಷಿಗಳ ದೇಶವನ್ನಾಗಿ ಮಾಡುತ್ತಾರೆ’ ಎಂದೂ ಮಮತಾ ಎಚ್ಚರಿಕೆ ನೀಡಿದರು.