ಇಂಡೋನೇಷ್ಯಾ ಏಷ್ಯಾದ ಕೋವಿಡ್ ಹಾಟ್‌ಸ್ಪಾಟ್‌!

* ಡೆಲ್ಟಾಹಾವಳಿ: ದೈನಂದಿನ ಕೇಸಲ್ಲಿ ಭಾರತ ಹಿಂದಿಕ್ಕಿದ ಇಂಡೋನೇಷ್ಯಾ

* ಇಂಡೋನೇಷ್ಯಾ ಈಗ ಏಷ್ಯಾದ ಕೋವಿಡ್‌ ಹಾಟ್‌ಸ್ಪಾಟ್‌

* ಸತತ 2 ದಿನಗಳಿಂದ ನಿತ್ಯ 40000ಕ್ಕಿಂತ ಹೆಚ್ಚು ಕೇಸು

* ಸತತ 7 ದಿನಗಳಿಂದ ಸರಾಸರಿ ನಿತ್ಯ 907 ಜನರ ಸಾವು

Indonesia Covid cases surge past India marking new epicenter pod

ಜಕಾರ್ತಾ(ಜು.15): 2 ದಿನಗಳಿಂದ ನಿತ್ಯ 40000ಕ್ಕಿಂತ ಹೆಚ್ಚು ಹೊಸ ಕೊರೋನಾ ಸೋಂಕು ದಾಖಲಾಗುವ ಮೂಲಕ ದೈನಂದಿನ ಸೋಂಕಿನ ಪ್ರಮಾಣದಲ್ಲಿ ಇಂಡೋನೇಷ್ಯಾ, ಭಾರತವನ್ನು ಹಿಂದಿಕ್ಕಿದೆ. ಜೊತೆಗೆ ಡೆಲ್ಟಾವೈರಸ್‌ ಹಾವಳಿಯಿಂದಾಗಿ ‘ಏಷ್ಯಾದ ಹೊಸ ಕೊರೋನಾ ಹಾಟ್‌ಸ್ಟಾಟ್‌’ ಆಗಿ ಹೊರಹೊಮ್ಮವು ಭೀತಿ ಎದುರಾಗಿದೆ.

ತಿಂಗಳ ಹಿಂದೆ ಇಂಡೋನೇಷ್ಯಾದಲ್ಲಿ ನಿತ್ಯ 10000 ಕೇಸು ದಾಖಲಾಗುತ್ತಿದ್ದು, ಸರಾಸರಿ 181 ಜನರು ಸಾವನ್ನಪ್ಪುತ್ತಿದ್ದರು. ಆದರೆ ಸೋಂಕಿನ ಪ್ರಮಾಣ ಸತತ 2 ದಿನ 40000ದ ಗಡಿ ದಾಟಿದೆ. ಮಂಗಳವಾರ 33000 ಕೇಸು, ಬುಧವಾರ 47899 ಕೇಸು ದಾಖಲಾಗಿವೆ. ಇನ್ನು ಸತತ 7 ದಿನಗಳಿಂದ ದೇಶದಲ್ಲಿ ಸಾವಿನ ಪ್ರಮಾಣ ಭಾರೀ ಏರಿಕೆ ಕಂಡಿದ್ದು, ನಿತ್ಯ ಸರಾಸರಿ 907 ಸಾವು ದಾಖಲಾಗುತ್ತಿದೆ.

ಡೆಲ್ಟಾಉಪ ಪ್ರಬೇಧ ಅಪಾಯಕಾರಿ ಅಲ್ಲ

 

ಡೆಲ್ಟಾ ರೂಪಾಂತರಿ ವೈರಸ್‌ನಂತೆ ಅದರ ಉಪ ಪ್ರಬೇಧಗಳಾದ ಎವೈ.1 ಮತ್ತು ಎವೈ.2 ವೇಗವಾಗಿ ಹರಡುವ ಸಾಧ್ಯತೆ ಕಡಿಮೆ ಎಂದು ಸರ್ಕಾರದಿಂದ ರಚನೆಯಾಗಿರುವ ಕೊರೋನಾ ವೈರಸ್‌ ಜಿನೋಮ್‌ ಸೀಕ್ವೆನ್ಸ್‌ ಸಮಿತಿ ತಿಳಿಸಿದೆ. ತನ್ನ ಇತ್ತೀಚಿನ ವರದಿಯಲ್ಲಿ ‘ಎವೈ.3 ಎನ್ನುವ ಡೆಲ್ಟಾದ ಮತ್ತೊಂದು ಪ್ರಬೇಧ ಗುರುತಿಸಲಾಗಿದೆ. ಅಮೆರಿಕದಲ್ಲಿ ಇದು ಮೊದಲು ಪತ್ತೆಯಾಗಿದ್ದು, ನಂತರ ಬ್ರಿಟನ್‌, ಭಾರತದಲ್ಲೂ ಪತ್ತೆಯಾಗಿದೆ. ಈ ವೈರಸ್‌ ಬಗ್ಗೆ ನಿಗಾ ವಹಿಸಲಾಗಿದೆ’ ಎಂದು ತಿಳಿಸಿದೆ.

Latest Videos
Follow Us:
Download App:
  • android
  • ios