56.64 ಕೋಟಿ ದಾಟಿತು ಭಾರತದ ಲಸಿಕಾ ಅಭಿಯಾನ; 3 ಅಲೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ!
- ಕಳೆದ 24 ಗಂಟೆಗಳಲ್ಲಿ 36,401 ಹೊಸ ಪ್ರಕರಣಗಳು ವರದಿ
- ಕೋವಿಡ್ ನಿಯಂತ್ರಣಕ್ಕೆ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ
- 56.64 ಕೋಟಿ ದಾಟಿತು ಭಾರತದ ಒಟ್ಟು ಕೋವಿಡ್-19 ಲಸಿಕೆ ವ್ಯಾಪ್ತಿ
- ಭಾರತದ ಒಟ್ಟು ಕೊರೋನಾ ಚೇತರಿಕೆ ಸಂಖ್ಯೆ 3,15,25,080
ನವದೆಹಲಿ(ಆ.19): ಭಾರತದಲ್ಲಿ ಕೊರೋನಾ 3ನೇ ಅಲೆ ಆತಂಕ ಹೆಚ್ಚಾಗುತ್ತಿದೆ. ಕೇರಳದಲ್ಲಿ ಉಲ್ಬಣಗೊಂಡ ಕೊರೋನಾ ಪ್ರಕರಣ ಸಂಖ್ಯೆಯಿಂದ ಕರ್ನಾಟಕ, ತಮಿಳುನಾಡಿನಲ್ಲಿ ಪ್ರಕರಣ ಏರಿಕೆಯಾಗಿದೆ. ಹೀಗಾಗಿ ನಿರ್ಬಂಧಗಳು ಮತ್ತೆ ಜಾರಿಯಾಗಿದೆ. ಕೊರೋನಾ ನಿಯಂತ್ರಣಕ್ಕೆ ಜನವರಿ 16 ರಿಂದ ಆರಂಭಗೊಂಡಿರುವ ಲಸಿಕಾ ಅಭಿಯಾನಕ್ಕೆ ಹೊಸ ವೇಗ ನೀಡಲಾಗಿದೆ. ಪರಿಣಾಣ ಇದೀಗ ದೇಶದಲ್ಲಿ 56.64 ಕೋಟಿ ಲಸಿಕೆ ನೀಡಲಾಗಿದೆ. ಈ ಮೂಲಕ ದಾಖಲೆ ಬರೆದಿದೆ.
20 ವರ್ಷ ಗುಹೆಯಲ್ಲಿ ಇದ್ದವನಿಗೆ ಕೊರೋನಾ ಬಗ್ಗೆ ಗೊತ್ತೇ ಇರಲಿಲ್ಲ!ಕಳೆದ 24 ಗಂಟೆಗಳಲ್ಲಿ 56,36,336 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇದರೊಂದಿಗೆ ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ 56.64 ಕೋಟಿ ದಾಟಿದೆ(56,64,88,433). ಇದರೊಂದಿಗೆ ಕಡಿಮೆ ಅವದಿಯಲ್ಲಿ ಗರಿಷ್ಠ ಡೋಸ್ ನೀಡಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಕಳೆದ 24 ಗಂಟೆಗಳಲ್ಲಿ 39,157 ರೋಗಿಗಳು ಚೇತರಿಸಿಕೊಂಡಿದ್ದು, ಇದರೊಂದಿಗೆ ಇದುವರೆಗೂ ಚೇತರಿಸಿಕೊಂಡ ರೋಗಿಗಳ ಒಟ್ಟು ಸಂಖ್ಯೆ 3,15,25,080ಕ್ಕೆ ಹೆಚ್ಚಳಗೊಂಡಿದೆ. ಪರಿಣಾಮವಾಗಿ, ಭಾರತದ ಚೇತರಿಕೆ ದರವು 97.53%ರಷ್ಟಿದ್ದು, ಇದು 2020ರ ಮಾರ್ಚ್ ನಂತರ ಅತ್ಯಧಿಕವಾಗಿದೆ.
ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಹಾಗೂ ಸಹಯೋಗದ ಪ್ರಯತ್ನಗಳಿಂದಾಗಿ ಸತತ ಐವತ್ತಮೂರು ದಿನಗಳಿಂದ ನಿತ್ಯ 50,000ಕ್ಕಿಂತ ಕಡಿಮೆ ಹೊಸ ಪ್ರಕರಣಗಳು ವರದಿಯಾಗುತ್ತಿರುವ ಪ್ರವೃತ್ತಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 36,401 ಹೊಸ ಪ್ರಕರಣಗಳು ವರದಿಯಾಗಿವೆ.
WhatsApp ಮೂಲಕ ಪಡೆಯಿರಿ ಕೋವಿಡ್ ಲಸಿಕೆ ಸರ್ಟಿಫಿಕೇಟ್; ಕೇಂದ್ರದಿಂದ ಸುಲಭ ವಿಧಾನ ಜಾರಿ!ಅಧಿಕ ಚೇತರಿಕೆಗಳು ಮತ್ತು ಕಡಿಮೆ ಸಂಖ್ಯೆಯ ಹೊಸ ಪ್ರಕರಣಗಳಿಂದಾಗಿ ಸಕ್ರಿಯ ಪ್ರಕರಣಗಳ ಹೊರೆ 3,64,129ಕ್ಕೆ ಇಳಿದಿದೆ. ಈ ಪ್ರಮಾಣ 149 ದಿನಗಳಲ್ಲೇ ಅತ್ಯಂತ ಕಡಿಮೆ ಎನಿಸಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಕೇವಲ 1.13% ರಷ್ಟಿವೆ. ಇದು 2020ರ ಮಾರ್ಚ್ ನಂತರ ಅತ್ಯಂತ ಕಡಿಮೆ ಎನಿಸಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯದ ವಿಸ್ತರಣೆಯೂ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 18,73,757 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತವು ಇದುವರೆಗೂ ಒಟ್ಟು 50.03 ಕೋಟಿ (50,03,00,840) ಪರೀಕ್ಷೆಗಳನ್ನು ನಡೆಸಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದರೂ, ಸಾಪ್ತಾಹಿಕ ಪಾಸಿಟಿವಿಟಿ ದರವು ಕಳೆದ 55 ದಿನಗಳಿಂದ 1.95% ಕ್ಕಿಂತ ಕಡಿಮೆ ಇದೆ. ದೈನಂದಿನ ಪಾಸಿಟಿವಿಟಿ ದರವೂ 1.94% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಕಳೆದ 24 ದಿನಗಳಿಂದ 3% ಕ್ಕಿಂತ ಕಡಿಮೆ ಇದೆ ಮತ್ತು ಸತತ 73 ದಿನಗಳಿಂದ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.