* ಕೊರೋನಾ ಬಂದಿದ್ದು ಇಡೀ ಜಗತ್ತಿಗೇ ಗೊತ್ತಿದೆ* 20 ವರ್ಷ ಗುಹೆಯಲ್ಲಿ ಇದ್ದವನಿಗೆ ಕೊರೋನಾ ಬಗ್ಗೆ ಗೊತ್ತೇ ಇರಲಿಲ್ಲ* 20 ವರ್ಷಗಳಿಂದ ಸ್ಟಾರಾ ಪ್ಲಾಸಿನಾ ಪರ್ವತದ ತುದಿಯಲ್ಲಿರು ಗುಹೆಯಲ್ಲಿ ವಾಸಿಸುತ್ತಿದ್ದ

ಬೆಲ್‌ಗ್ರೇಡ್(ಆ.16): ಕೊರೋನಾ ಬಂದಿದ್ದು ಇಡೀ ಜಗತ್ತಿಗೇ ಗೊತ್ತಿದೆ. ಆದರೆ, ಸೈಬೀರಿಯಾದ ಗುಹೆಯೊಂದರಲ್ಲಿ ಕಳೆದ 20 ವರ್ಷದಿಂದ ವಾಸಿಸುತ್ತಿರುವ ವ್ಯಕ್ತಿಯೊಬ್ಬನಿಗೆ ಕೊರೋನಾ ವೈರಸ್‌ ಬಗ್ಗೆ ಗೊತ್ತೇ ಇರಲಿಲ್ಲ.

ಇತ್ತೀಚೆಗೆ ಆತ ತನ್ನ ಊರಿಗೆ ಹಿಂದಿರುಗಿದ ಸಂದರ್ಭದಲ್ಲಿ ಕೊರೋನಾ ವೈರಸ್‌ ಬಗ್ಗೆ ತಿಳಿದು ಲಸಿಕೆ ಹಾಕಿಸಿಕೊಂಡಿದ್ದಾನೆ. 70 ವರ್ಷದ ಪ್ಯಾಂಟಾ ಪೆಟ್ರೋವಿಕ್‌ ಎಂಬಾತನೇ ಈ ವ್ಯಕ್ತಿ. ಈತ ಕಳೆದ 20 ವರ್ಷಗಳಿಂದ ಸ್ಟಾರಾ ಪ್ಲಾಸಿನಾ ಪರ್ವತದ ತುದಿಯಲ್ಲಿರು ಗುಹೆಯಲ್ಲಿ ವಾಸಿಸುತ್ತಿದ್ದ.

ಇತರ ಜನರೊಂದಿಗೆ ಆತ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದ. ಆದರೆ, ಪೈರೋಟ್‌ನಲ್ಲಿರುವ ಅಂಗಡಿಯೊಂದಕ್ಕೆ ಆತ ಬೇಟಿ ನೀಡಿದ ವೇಳೆ ಆತನಿಗೆ ಕೊರೋನಾ ವೈರಸ್‌ ಬಗ್ಗೆ ತಿಳಿದಿದೆ. ಇದೀಗ ಆತ ಲಸಿಕೆ ಹಾಕಿಸಿಕೊಂಡಿದ್ದು, ತನ್ನ ಗೂಡಿಗೆ ಮರಳಿದ್ದಾನೆ.