ಇದು ಸಿಂಗಾಪುರದ ಅಂಡರ್ ವಾಟರ್ ವರ್ಲ್ಡ್ ಅಲ್ಲ; ಬೆಂಗಳೂರಿನ ಅತ್ಯಾಕರ್ಷಕ ರೈಲು ನಿಲ್ದಾಣ!
- ಇದು ಸಿಂಗಾಪುರ ಅಲ್ಲ, ಬೆಂಗೂರಿನ ಅತ್ಯಾದುನಿಕ ಹಾಗೂ ಆಕರ್ಷಕ ರೈಲು ನಿಲ್ದಾಣ
- ಅಂಡರ್ ವಾಟರ್ ವರ್ಲ್ಡ್ ರೀತಿಯ ರೈಲು ನಿಲ್ದಾಣ ಸಾರ್ವಜನಿಕರಿಗೆ ಮುಕ್ತ
- ಮೀನು, ಜಲಚರ , ಗಾಜಿನ ಸುರಂಗ ಸೇರಿದಂತೆ ಹಲವು ವಿಶೇಷತೆ
ಬೆಂಗಳೂರು(ಜು.01): ಸುತ್ತಲೂ ನೀರು, ನೀರಿನಲ್ಲಿ ಮೀನು ಸೇರಿದಂತೆ ಜಲಚರ, ಅಂಡರ್ ವಾಟರ್ ಮೂಲಕ ಸಾಗಿದ ಅನುಭವ. ಅಕ್ವೇರಿಯಂ ಸೇರಿದಂತೆ ಹಲವು ವಿಶೇಷತೆ. ಇದು ಬೆಂಗಳೂರಿನ ರೈಲು ನಿಲ್ದಾಣ. ಅತ್ಯಾಧುನಿಕ, ಅತ್ಯಾಕರ್ಷಕ, ಮಕ್ಕಳಿಗೆ ಆಪ್ತ ಹಾಗೂ ಶಿಕ್ಷಣ ಮೌಲ್ಯ ನೀಡುವ ರೈಲು ನಿಲ್ದಾಣ ಇದಾಗಿದೆ.
ಶ್ರೀನಗರ ಸೇರಿ ಕಾಶ್ಮೀರ ಕಣಿವೆಯ ಎಲ್ಲಾ 15 ರೈಲು ನಿಲ್ದಾಣದಲ್ಲಿ Wi-Fi ಸೇವೆ
ಮೆಜೆಸ್ಟಿಕ್ ಬಳಿ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಹೊಸ ಸ್ಪರ್ಶ ನೀಡಲಾಗಿದೆ. ನಿಲ್ದಾಣದ ಪ್ರವೇಶ ದ್ವಾರದಲ್ಲಿ ಈ ಹೊಸತವನ್ನು ತರಲಾಗಿದೆ. ಈ ಪ್ರವೇಶದ್ವಾರದ ಮೂಲಕ ಒಳ ಪ್ರವೇಶಿಸುತ್ತಿದ್ದಂತೆ ಪ್ರಯಾಣಿಕನ ಮನಸ್ಸು ಹಗುರವಾಗುದು ಸುಳ್ಳಲ್ಲ. ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮ ಹಾಗೂ ಎಚ್‌ಎನ್‌ಐ ಎಂಟರ್‌ಪ್ರೈಸಸ್ ಜಂಟಿಯಾಗಿ ಕೆಲಸ ಪೂರೈಸಿದೆ.
ಎಪ್ರಿಲ್ ತಿಂಗಳಲ್ಲಿ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಕೊರೋನಾ ವೈರಸ್ ಕಾರಣ ಎಲ್ಲವೂ ಮುಂದೂಡಲಾಗಿತ್ತು. ಈ ರೀತಿಯ ಅಕ್ವೇರಿಯಾ ಅಂಡರ್ ವಾಟರ್ ರೈಲ್ವೇ ನಿಲ್ದಾಣ ಭಾರತದಲ್ಲೇ ಮೊದಲು. ಈ ಪರಿಕಲ್ಪನೆಯು ಸಾಮಾನ್ಯವಾಗಿ ವಿದೇಶದಲ್ಲಿ ಜನಪ್ರಿಯವಾಗಿದೆ ಮತ್ತು ಇದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ ಎಂದು ಐಆರ್‌ಎಸ್‌ಡಿಸಿ ಸೌಲಭ್ಯ ನಿರ್ವಹಣಾ ವಿಭಾಗದ ಸಲಹೆಗಾರ ಎನ್ ರಘುರಾಮನ್ ಹೇಳಿದ್ದಾರೆ.
ತನ್ನ ಪ್ರಾಣ ಲೆಕ್ಕಿಸದೆ ಮಗುವನ್ನು ಕಾಪಾಡಿದ್ದ ಮಯೂರ್ ಶೇಲ್ಕೆಗೆ 50 ಸಾವಿರ ಬಹುಮಾನ..
ಭಾರತದ ಬಹುತೇಕ ಸರ್ಕಾರಿ ಕಟ್ಟಡ, ಸಂಸ್ಥೆ, ಕಚೇರಿ ಹಾಗೂ ಸೇವೆಗಳು ಆಧುನೀಕರಣಗೊಂಡಿದೆ. ಖಾಸಗಿ ವಲಯಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬದಲಾಗಿದೆ. ಅದರಲ್ಲೂ ರೈಲು ಹಾಗೂ ರೈಲು ನಿಲ್ದಾಣಗಳು ಮೇಲ್ದರ್ಜೆಗೆ ಏರಿದೆ. ಇದರಲ್ಲಿ ಬೆಂಗಳೂರಿನ ರೈಲು ನಿಲ್ದಾಣ ಇದೀಗ ಎಲ್ಲರ ಗಮನಸೆಳೆದಿದೆ.