ತನ್ನ ಪ್ರಾಣ ಲೆಕ್ಕಿಸದೆ ಮಗುವನ್ನು ಕಾಪಾಡಿದ್ದ ಮಯೂರ್ ಶೇಲ್ಕೆಗೆ 50 ಸಾವಿರ ಬಹುಮಾನ..!

 ತನ್ನ ಪ್ರಾಣ ಲೆಕ್ಕಿಸದೆ ಮಗುವನ್ನು ಕಾಪಾಡಿದ ಮಯೂರ್ ಶೇಲ್ಕೆಗೆ ಕೇಂದ್ರ ರೈಲ್ವೆ ಇಲಾಖೆ ರೂ. 50,000 ಬಹುಮಾನ ಘೋಷಿಸಿದೆ. ಏಪ್ರಿಲ್ 17 ರಂದು ರೈಲು ಹಳಿಯ ಮೇಲೆ ಮಗು ಬಿದ್ದಿದ್ದನ್ನು ನೋಡುತ್ತಿದ್ದಂತೆಯೇ ರೈಲು ಹಳಿಯತ್ತ ಹಾರಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಮಗುವಿನ ಪ್ರಾಣವನ್ನು ಮಯೂರ್ ರಕ್ಷಿಸಿದ್ದರು. ಸಾಮಾಜಿಕ ಜಾಲತಾನದಲ್ಲಿ ಈ ವಿಡಿಯೋ ವೈರಲ್ ಆಗಿ ಸಾಕಷ್ಟು ಪ್ರಶಂಸೆಗಳು ಬಂದಿದ್ದವು.

Railway Ministry announces 50,000 Award for Mayur Shelke who saved child pod

ಮುಂಬೈ(ಏ.21): ಇತ್ತೀಚಿಗೆ ರೈಲು ಹಳಿಯ ಮೇಲೆ ಬಿದ್ದ ಮಗುವೊಂದನ್ನು ರೈಲ್ವೆ ಸಿಬ್ಬಂದಿಯೊಬ್ಬರು ತಮ್ಮ ಪ್ರಾಣವನ್ನು ಪಣಕಿಟ್ಟು ರಕ್ಷಿಸಿದ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರೈಲ್ವೇ ಮಂತ್ರಿ ಪಿಯೂಷ್ ಗೋಯಲ್ ಟ್ವೀಟರ್‌ನಲ್ಲಿ ಈ ವಿಡೀಯೋವನ್ನು ಹಂಚಿಕೊಂಡು ಮಗುವಿನ ಪ್ರಾಣ ರಕ್ಷಿಸಿದ್ದ ಮಯೂರ್ ಶೇಲ್ಕೆ ಸಾಹಸಕ್ಕೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಮಗುವಿನ ಪ್ರಾಣ ಉಳಿಸಿದ್ದ ಮಯೂರ್ ಶೇಲ್ಕೆರಿಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾಕಷ್ಟು  ಪ್ರಶಂಸೆಗಳು ಬಂದಿದ್ದವು. ನಿನ್ನೆ ಮಹಾರಾಷ್ಟ್ರದ ಕೇಂದ್ರ ರೈಲ್ವೇ ಕಚೇರಿಯಲ್ಲಿ ಮಯೂರ್ ಕಾರ್ಯಕ್ಕೆ ಅಭಿನಂದಿಸಿ ಚಪ್ಪಾಳೆ ಮೂಲಕ ಸ್ವಾಗತ ಕೋರಲಾಗಿತ್ತು. ಹಿರಿಯ ಅಧಿಕಾರಿಗಳು ಮಯೂರ್ ಕಾರ್ಯವನ್ನು ಶ್ಲಾಘಿಸಿದ್ದರು.

ಇದೀಗ ಕೇಂದ್ರ ರೈಲ್ವೇ ಇಲಾಖೆ ಮಯೂರ್‌ಗೆ ರೂ50,000 ಬಹುಮಾನ ಘೋಷಿಸಿದೆ. ಈ ಬಗ್ಗೆ ರೈಲ್ವೆ ಮಂಡಳಿಯ ಪ್ರಧಾನ ನಿರ್ದೇಶಕರು, ಕೇಂದ್ರ ರೈಲ್ವೆ ಇಲಾಖೆ ನಿರ್ವಾಹಕರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮಗುವಿನ ಪ್ರಾಣ ರಕ್ಷಿಸಿದ ಮಯೂರ್ ಶೇಲ್ಕೆರಿಗೆ ರೂ50,000  ಬಹುಮಾನ ನೀಡಬೇಕಾಗಿ ಆದೇಶಿಸಿದ್ದಾರೆ. ʼತನ್ನ ಪ್ರಾಣವನ್ನು ಲೆಕ್ಕಿಸದ ಮಯೂರ್ ಮಗುವನ್ನು ರೈಲು ಹಳಿಯಿಂದ ಪ್ಲಾಟ್‌ಫಾರಂ ಮೇಲೆ ಹಾಕಿ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದು ನಿಜಕ್ಕೂ ಮಯೂರ್‌ ಸಾಹಸ ಕಾರ್ಯಕ್ಕೆ ಸಂದ ಗೌರವ

ಏಪ್ರಿಲ್ 17 ರಂದು ದೃಷ್ಟಿಹೀನ ತಾಯಿಯೊಬ್ಬರು ತಮ್ಮ ಮಗುವಿನ ಜೊತೆ ರೆಲ್ವೇ ಪ್ಲಾಟ್‌ ಫಾರಂ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಅಚಾನಕ್ಕಾಗಿ ಬಲಭಾಗದಲ್ಲಿದ್ದ ಮಗು  ಕೆಳಕ್ಕೆ ಬಿದ್ದಿದೆ. ಇದೆ ವೇಳೆ ಮಗು ಬಿದ್ದ ಹಳಿ ಮೇಲೆ ರೈಲು ಕೂಡ ಬರುತ್ತಿತ್ತು. ಮಗು ಕೈ ತಪ್ಪಿ ಹೋಗಿದ್ದನ್ನು ಅರಿತು ಮಗುವಿನ ಕೈ ಹಿಡಿಯಲು ತಾಯಿ ಪ್ರಯತ್ನಿಸಿದ್ದಾರೆ. ಆದರೆ ಅವರ ಕೈಗೆ ಮಗು ಸಿಕ್ಕಿಲ್ಲ. ಇನ್ನೊಂಡೆದೆ ಪ್ರಾಟ್‌ ಫಾರಂ ಹತ್ತಲು ಪ್ರಯತ್ನಿಸುತ್ತಿದ್ದ ಮಗು ಕೂಡ ಯಶಸ್ವಿಯಾಗಿಲ್ಲ. ಇತ್ತ ತನ್ನ ಕಾರ್ಯದಲ್ಲಿ ತೊಡಗಿದ್ದ ಮಯೂರ್ ಮಗು ಬಿದ್ದಿದ್ದನ್ನು ನೋಡುತ್ತಿದ್ದಂತೆಯೇ ರೈಲು ಹಳಿಯತ್ತ ಹಾರಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಮಗುವಿನ ಪ್ರಾಣವನ್ನು ರಕ್ಷಿಸಿದ್ದಾರೆ. ರೈಲು ಬರುತ್ತಿದ್ದ ವಿರುದ್ಧ ದಿಕ್ಕಿಗೆ ಮಿಂಚಿನ ವೇಗದಲ್ಲಿ ಓಡಿದ ಮಯೂರ್ ಕೆಲವೇ ಸೆಕೆಂಡಗಳಲ್ಲಿ ಮಗುವನ್ನು ಎತ್ತಿ ಮೇಲಕ್ಕೆ ಹಾಕಿದ್ದಾರೆ. ಬಳಿಕ ಒಂದೇ ಸೇಕೆಂಡ್ನಲ್ಲಿ ತಾವು ಮೇಲಕ್ಕೆ ಹತ್ತಿದ್ದಾರೆ.

ಮಗುವನ್ನು ರಕ್ಷಿಸುವ ಭರದಲ್ಲಿ ಸ್ವತ: ಮಯೂರ ಶೇಲ್ಕೆ ತನ್ನ ಪ್ರಾಣವನ್ನು ಕಳೆದುಕೊಳ್ಳುವ ಸಾಧ್ಯತೆ ಇತ್ತು. ಮಗುವನ್ನು ಎತ್ತಿ ಮೇಲಕ್ಕೆ ಹಾಕಿ ತಾವು ಮೇಲೆ ಹತ್ತಲು ಸ್ವಲ್ಪ ತಡವಾಗಿದ್ದರೂ ಮಯೂರ್ ಪ್ರಾಣ ಕಳೆದುಕೊಳ್ಳಬೇಕಿತ್ತು. ತನ್ನ ಪ್ರಾಣದ ಹಂಗು ತೊರೆದು ಮಗುವಿನ ಪ್ರಾಣ ರಕ್ಷಿಸಿದ ಮಯೂರ್ ಶೇಲ್ಕೆರಿಗೆ ಈಗ ಗೌರವ ಸಲ್ಲಿಸಿ ಅಭಿನಂದಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮುಯೂರ್ರ ಈ ಕಾರ್ಯಕ್ಕೆ ಅಭಿನಂದನೆಗಳ ಸುರಿಮಳೆ ಬಂದಿದ್ದು, ಮುಯೂರ್ರಿಗೆ ರೈಲ್ವೆ ಇಲಾಖೆಯಲ್ಲಿ ಬಡ್ತಿ ನೀಡಬೇಕು ಎಂದು ಕೆಲವರು ಹೇಳಿದ್ದರೆ ಇನ್ನೂ ಕೆಲವರು ಮಯೂರ್ರಿಗೆ ಭಾರತದ ಉತ್ತಮ ಪ್ರಜೆ ಎಂಬ ಪ್ರಶಸ್ತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಹಾಗಾಗಿ ಮಯೂರ್ ಶೇಲ್ಕೆಯವರ ಸಾಹಸ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 ʼನಾನು ಮಗುವಿನಿಂದ ಸುಮಾರು 60 ಮೀಟರ್ ಅಂತರದಲ್ಲಿದ್ದೆ . ನಾನು ಕೆಂಪು ಧ್ವಜವನ್ನು ತೋರಿಸಿದ್ದರೂ ರೈಲು ಮಗುವನ್ನು ದಾಟಿ ಹೋಗುತ್ತಿತ್ತು. ಏಕೆಂದರೆ ಮಗು ಮತ್ತು ರೈಲಿನ ಮಧ್ಯದ ಅಂತರ ತುಂಬಾ ಕಡಿಮೆ ಇತ್ತು ಜೊತೆಗ ರೈಲಿನ ವೇಗವು ಹೆಚ್ಚಿತ್ತು, ಹಾಗಾಗಿ ಮಗುವಿನ ಪ್ರಾಣ ರಕ್ಷೀಸಬೇಕೆಂದು ರೇಲ್ವೆ ಹಳಿಗೆ ಹಾರಿದೆ. ಮಧ್ಯ ನನಗೆ ಸ್ವಲ್ಪ ಭಯವಾಯಿತು ಆದರೆ ಧೈರ್ಯ ಮಾಡಿ ಮುಂದೆ ಸಾಗಿ ಮಗುವನ್ನು ಎತ್ತಿ ಪ್ರಾಟ್ಫಾರ್ಮ್ ಮೇಲೆ ಹಾಕಿದೆ. ಇದಾದ ಸುಮಾರು 15 ನಿಮಿಷಗಳ ಕಾಲ ನಾನು ದಿಗ್ಭ್ರಾಂತನಾಗಿದ್ದೆ. ಆದರೆ ಎಲ್ಲರೂ ಪ್ರಶಂಸಿಸಲೂ ಆರಂಭಿಸಿದ ಮೇಲೆ ಸಮಾಧಾನಗೊಂಡೆʼ ಎಂದು ಮಗುವಿನ ಪ್ರಾಣ ಉಳಿಸಿದ್ದ ಮಯೂರ್ ಶೇಲ್ಕೆ ಹೇಳಿದ್ದಾರೆ.

Latest Videos
Follow Us:
Download App:
  • android
  • ios