ನವದೆಹಲಿ(ಆ.14): ಕೊರೋನಾ ವೈರಸ್ ನಡುವೆ ದೇಶ ಸ್ವಾತಂತ್ರ್ಯ ದಿನಾಚರೆ ಆಚರಿಸಲು ಸಜ್ಜಾಗಿದೆ. ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿ ಪ್ರಕಟಿಸಿದೆ. ಈ ಬಾರಿ ಅದ್ಧೂರಿ ಕಾರ್ಯಕ್ರಮಗಳಿಲ್ಲ. ಕೊರೋನಾ ಕಾರಣ ಸರಳವಾಗಿ ಪ್ರಮುಖ ಆಶಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. 

ಹುತಾತ್ಮ ಯೋಧರಿಗೆ ನಮನ: ಸ್ವಾತಂತ್ರ್ಯ ದಿನಾಚರಣೆಗೆ ಮಹತ್ವದ ಸಂದೇಶ ಸಾರಿದ ರಾಷ್ಟ್ರಪತಿ!.

74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ದೇಶವನ್ನುದ್ದೇಶಿ ಮೋದಿ ಭಾಷಣ ಮಾಡಲಿದ್ದಾರೆ. ನಾಳಿನ(ಆ.15)ರ ಸ್ವಾತಂತ್ರ್ಯ ದಿನಾಚರೆ ಕಾರ್ಯಕ್ರದಮ ವಿವರ ಇಲ್ಲಿದೆ.

 • ಬೆಳಗ್ಗೆ 7.18ಕ್ಕೆ ನರೇಂದ್ರ ಮೋದಿ  ಲಾಹೋರ್ ಗೇಟ್ ಮೂಲಕ ಕೆಂಪು ಕೋಟೆ ಪ್ರವೇಶ
 • ಕೆಂಪು ಕೋಟೆಗೆ ಆಗಮಿಸಿದ ಮೋದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಬರಮಾಡಿಕೊಳ್ಳಲಿದ್ದಾರೆ
 • ರಕ್ಷಣಾ  ಕಾರ್ಯದರ್ಶಿ ಪ್ರಧಾನಿ ಮೋದಿಗೆ, ಜನರಲ್ ಆಫೀಸರ್ ಕಮಾಂಡಿಂಗ್(GoC) ಲೆ.ಜ. ವಿಜಯ್ ಕುಮಾರ್ ಅವರನ್ನು ಪರಿಚಯಿಸಲಿದ್ದಾರೆ
 • GoC, ಇಂಟರ್ ಸರ್ವೀಸ್ ಹಾಗೂ ಪೊಲೀಸ್ ಗಾರ್ಡ್ ಪ್ರಧಾನಿ ಮೋದಿಗೆ ಸಲ್ಯೂಟ್ ಗೌರವ ನೀಡಲಿದ್ದಾರೆ
 • ಪ್ರಧಾನಿ ನರೇಂದ್ರ ಮೋದಿಗೆ ಗಾರ್ಡ್ ಆಫ್ ಹಾನರ್ ನೀಡಲಿದ್ದಾರೆ. ಭೂ ಸೇನೆ, ವಾಯು ಸೇನೆ ಹಾಗೂ ನೌಕಾಸೇನೆಯ ಒಟ್ಟು 24 ಮಂದಿ ಅಧಿಕಾರಿಗಳು ಮೋದಿಗೆ  ಗಾರ್ಡ್ ಆಫ್ ಹಾನರ್ ನೀಡಲಿದ್ದಾರೆ
 • ವಾಯುಪಡೆಯ ಲೆ.ಕೊಲೊನೆಲ್ ಗೌರವ್ ಎಸ್ ಯೆವಾಲ್ಕರ್, ಭೂಸೇನೆಯ ಮೇಜರ್ ಪಲ್ವಿಂದರ್ ಗೆವಾಲ್, ನೌಕಾಪಡೆಯ ಕೆವಿಆರ್ ರೆಡ್ಡಿ, ಪ್ರಧಾನಿ ಮೋದಿಗೆ ನೀಡಲಿರುವ ಗಾರ್ಡ್ ಆಫ್ ಹಾನರ್ ನೇತೃತ್ವವಹಿಸಲಿದ್ದಾರೆ.
 • ಭಾರತೀಯ ಸೇನೆಯ ಅತ್ಯಂತ ಜನಪ್ರಿಯ ಗರ್ವಾಲ್ ರೈಫಲ್ಸ್ ತುಕಡಿ ಗಾರ್ಡ್ ಆಫ್ ಹಾನರ್ ನೀಡಲಿದೆ
 • ಗಾರ್ಡ್ ಆಫ್ ಹಾನರ್ ಬಳಿಕ ಪ್ರಧಾನಿ ಮೋದಿ ಧ್ವಜಾರೋಹಣಕ್ಕಾಗಿ ಆಗಮಸಲಿದ್ದಾರೆ. ಈ ವೇಳೆ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಎಂಎಂ ನರವಾಣೆ, ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಸೇನಾಧಿಕಾರಿಗಳು ಸಾಥ್ ನೀಡಲಿದ್ದಾರೆ.
 • ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ಸೇನಾಧಿಕಾರಿಗಳು ಹಾಗೂ ಗಾರ್ಡ್ ಆಫ್ ಹಾನರ್ ನೀಡಿದ ತುಕಡಿ ರಾಷ್ಟ್ರ ಧ್ವಜಕ್ಕೆ ಸಲ್ಯೂಟ್ ಮಾಡಲಿದೆ
 • ಸುಬೆದಾರ್ ಮೇಜರ್ ಅಬ್ದುಲ್ ಗಾನಿ ನೇತೃತ್ವದ ಮಿಲಿಟರಿ ಬ್ಯಾಂಡ್ ರಾಷ್ಟ್ರಗೀತೆ ನುಡಿಸಲಿದೆ.
 • ಲೆಫ್ಟಿನೆಂಟ್ ಕೊಲೊನೆಲ್ ಜಿತೇಂದ್ರ ಸಿಂಗ್ ಮೆಹ್ತ ನೇತೃತ್ವದ ಸೇನಾ ತುಕಡಿ 21 ಗನ್ ಸಲ್ಯೂಟ್ ಮೂಲಕ ಗೌರವ ಸಲ್ಲಿಸಲಿದೆ
 • ಧ್ವಜಾರೋಹಣ ಗೌರವ ಸಮರ್ಪಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಭಾಷಣ ಮಾಡಲಿದ್ದಾರೆ
 • ವಿವಿದ ಶಾಲೆಗಳ 500 NCC ಕೆಡೆಟ್ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ