Asianet Suvarna News Asianet Suvarna News

Independence Day 2022: ತ್ರಿವರ್ಣದಿಂದ ಗಮನ ಸೆಳೆದ ಪ್ರಧಾನಿ ಮೋದಿ ಪೇಟ

ಪ್ರತಿ ವರ್ಷವೂ ಸ್ವಾತಂತ್ರ ದಿನಾಚರಣೆಯಂದು ಪ್ರಧಾನಿ ಮೋದಿ ಧರಿಸುವ ಧಿರಿಸು ಸ್ವಾತಂತ್ರ ದಿನಾಚರಣೆಯ ಪರೇಡ್‌ನಂತೆ ವಿಶೇಷವಾಗಿ ದೇಶವಾಸಿಗಳ ಗಮನ ಸೆಳೆಯುತ್ತದೆ. ಈ ಬಾರಿಯೂ ವಿಭಿನ್ನ ಧಿರಿಸಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ. 

Independence Day 2022, what this year PM modi special turban reflects akb
Author
Bangalore, First Published Aug 15, 2022, 11:04 AM IST

ನವದೆಹಲಿ: ಪ್ರತಿ ವರ್ಷವೂ ಸ್ವಾತಂತ್ರ ದಿನಾಚರಣೆಯಂದು ಪ್ರಧಾನಿ ಮೋದಿ ಧರಿಸುವ ಧಿರಿಸು ಸ್ವಾತಂತ್ರ ದಿನಾಚರಣೆಯ ಪರೇಡ್‌ನಂತೆ ವಿಶೇಷವಾಗಿ ದೇಶವಾಸಿಗಳ ಗಮನ ಸೆಳೆಯುತ್ತದೆ. ಈ ಬಾರಿಯೂ ವಿಭಿನ್ನ ಧಿರಿಸಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ಪ್ರಧಾನಿ ಧರಿಸಿದ ಪೇಟ ರಾಷ್ಟ್ರಧ್ವಜದ ಬಣ್ಣವನ್ನು ಪ್ರತಿನಿಧಿಸುತ್ತಿದ್ದು, ಸೊಗಸಾಗಿದೆ. ಎಂದಿನಂತೆ ಎಲ್ಲರ ಗಮನವನ್ನು ಸೆಳೆದಿದೆ. ಪ್ರಧಾನಿಯವರು ಕೇಸರಿ ಮತ್ತು ಹಸಿರು ಪಟ್ಟೆಗಳನ್ನು ಹೊಂದಿರುವ ಬಿಳಿ ಪೇಟವನ್ನು ಧರಿಸಿ 'ತಿರಂಗ'ದ ಬಣ್ಣವನ್ನು ತಮ್ಮ ಪೇಟದಲ್ಲಿ ಪ್ರದರ್ಶಿಸಿದರು. 

ಇಂದು ದೇಶಾದ್ಯಂತ 75ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸ್ವಾತಂತ್ರ ಬಂದು 75 ವರ್ಷ ತುಂಬಿದ ಹಿನ್ನೆಲೆ ಅಜಾದಿ ಕಾ ಅಮೃತ ಮಹೋತ್ಸವ ಹೆಸರಿನಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸುತ್ತಿದೆ. ಅಮೃತ ಮಹೋತ್ಸವದ ಭಾಗವಾಗಿ ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಮತ್ತು ತ್ರಿವರ್ಣ ಧ್ವಜದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಈ ವರ್ಷ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕಳೆದ ತಿಂಗಳೇ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡಿದೆ. ಜೊತೆಗೆ ಆಗಸ್ಟ್ 2 ಮತ್ತು ಆಗಸ್ಟ್ 15 ರ ನಡುವೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ 'ತಿರಂಗಾ' ವನ್ನು ತಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಬೇಕೆಂದು ಪ್ರಧಾನಿ ದೇಶದ ನಾಗರಿಕರಿಗೆ ಕರೆ ನೀಡಿದ್ದರು. ಹಾಗೆಯೇ ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಈ ವರ್ಷದ ಪ್ರಧಾನಿ ಪೇಟವು ವಿಶೇಷ ಸಂದೇಶವನ್ನು ಹೊಂದಿದೆ.

ವಿಶೇಷ ವೇಷ ಭೂಷಣದಿಂದ ವಿಶೇಷವಾಗಿ ಗಮನ ಸೆಳೆಯುವ ಪ್ರಧಾನಿ, ಸತತ ಒಂಬತ್ತನೇ ಬಾರಿ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿ ಅವರು ನೀಲಿ ಜಾಕೆಟ್ ಮತ್ತು ಕಪ್ಪು ಬೂಟುಗಳಿಗೆ ಮ್ಯಾಚ್‌ ಆಗುವಂತೆ ಸಾಂಪ್ರದಾಯಿಕ ಜುಬ್ಬಾ ಧರಿಸಿದ್ದರು. ಇದಕ್ಕೆ ಹೊಂದಿಕೆಯಾಗುವಂತೆ ಧರಿಸಿದ ಪೇಟಾ ಈ ಬಾರಿ ವಿಶೇಷವಾಗಿ ಗಮನ ಸೆಳೆಯಿತು.

 

ಪ್ರತಿ ಬಾರಿಯೂ ಪ್ರಧಾನಿ ಸ್ವಾತಂತ್ರ ದಿನಾಚರಣೆಯಂದು ತಾವು ಧರಿಸುವ ಪೇಟವೂ ವಿಶೇಷವಾದ ಸ್ಟೈಲ್ ಸ್ಟೇಟ್‌ಮೆಂಟ್ ನೀಡುತ್ತದೆ. ಕಳೆದ ವರ್ಷದ ಸ್ವಾತಂತ್ರ ದಿನಾಚರಣೆಯ ಸಂಭ್ರಮದ ವೇಳೆ ಅವರು ಕೇಸರಿ ಹಾಗೂ ಕ್ರೀಮ್ ಬಣ್ಣದ ಉದ್ದನೇಯ ಪೇಟ ಧರಿಸಿದ್ದರು. ಹಾಗೆಯೇ 2020ರಲ್ಲಿ  ತಮ್ಮ ಆರನೇ ಸ್ವಾತಂತ್ರೋತ್ಸವದ ಭಾಷಣದಲ್ಲಿ ಅವರು ಬಹು ಬಣ್ಣದ ಪೇಟ ಧರಿಸಿದ್ದರು. ಇದಕ್ಕೂ ಮೊದಲು  2014 ರಲ್ಲಿ ಪ್ರಕಾಶಮಾನವಾದ ಕೆಂಪು ಜೋಧಪುರಿ ಬಂಧೇಜ್ ಪೇಟ ಧರಿಸಿದ್ದರು. 2016 ರಲ್ಲಿ, ಅವರು ಟೈ ಮತ್ತು ಡೈ ಪೇಟದಲ್ಲಿ ಕಾಣಿಸಿಕೊಂಡಿದ್ದರು. 

ಕಾಶ್ಮೀರದಲ್ಲಿ ಸ್ವಾತಂತ್ರ ಸಂಭ್ರಮ: ವಿಶ್ವದ ಅತೀ ಎತ್ತರದ ಸೇತುವೆ ಮೇಲೆ ...

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ತ್ರಿವರ್ಣ ಧ್ವಜದ ಕುರಿತು ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ, 1921 ರಲ್ಲಿ ರಾಜಕೀಯ ಸನ್ನಿವೇಶದಲ್ಲಿ ತ್ರಿವರ್ಣ ಧ್ವಜ ಹೊರಹೊಮ್ಮಿತು. ಎಲ್ಲಾ ಪ್ರಮುಖ ಸಮುದಾಯಗಳನ್ನು ಪ್ರತಿನಿಧಿಸುವ ಧ್ವಜವನ್ನು ಹೊಂದುವುದು ಗಾಂಧೀಜಿಯವರ ಕಲ್ಪನೆಯಾಗಿತ್ತು. ಆದ್ದರಿಂದ, ತ್ರಿವರ್ಣ ಧ್ವಜವು ಕೆಳಭಾಗದಲ್ಲಿ ಕೆಂಪು (ಕೇಸರಿ ಅಲ್ಲ), ಮಧ್ಯದಲ್ಲಿ ಹಸಿರು ಮತ್ತು ಮೇಲ್ಭಾಗದಲ್ಲಿ ಬಿಳಿ, ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಪ್ರತಿನಿಧಿಸುತ್ತದೆ. ನಂತರ ಧ್ವಜ ಸಮಿತಿಯು, ಧ್ವಜದ ಮೇಲಿನ ಮೂಲೆಯಲ್ಲಿ ನೀಲಿ ಚರಕದೊಂದಿಗೆ  ಆಯತಾಕಾರದ ಕೇಸರಿ ಧ್ವಜವನ್ನು ಶಿಫಾರಸು ಮಾಡಿತ್ತು ಎಂದು ವೈದ್ಯ ಸುದ್ದಿ ಪೋರ್ಟಲ್‌ಗೆ ಒಂದಕ್ಕೆ ತಿಳಿಸಿದ್ದರು. 

ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರು ಕೂಡ ತಮ್ಮನ್ನು ತಾವೊಬ್ಬ ತ್ರಿವರ್ಣ ಕ್ರುಸೇಡರ್ ಎಂದು ಬಣ್ಣಿಸಿಕೊಂಡಿದ್ದು, ಭಾರತದ 75 ನೇ ಸ್ವಾತಂತ್ರ್ಯದ ವರ್ಷವನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿಯವರ ಹರ್ ಘರ್ ತಿರಂಗಾ ಅಭಿಯಾನವನ್ನು ಸಹ ಅವರು ಬೆಂಬಲಿಸಿದ್ದಾರೆ. 
 

Follow Us:
Download App:
  • android
  • ios