ಕಾಲಿವುಡ್ ನಟ ಧನುಷ್ ಅವರ ಮಾಜಿ ಪತ್ನಿ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ 2ನೇ ಮದುವೆಯಾಗುತ್ತಿದ್ದಾರೆ ಎಂದು ವರದಿಯಾಗಿರೆ. ಯುವ ನಟನೊಬ್ಬನನ್ನು ಅವರು ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ.
ಚೆನ್ನೈ (ಜು.12): ಐಶ್ವರ್ಯಾ ರಜನಿಕಾಂತ್ ಪ್ರಸ್ತುತ ತಮ್ಮ ತಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಲಾಲ್ ಸಲಾಂ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಟ ಧನುಷ್ ಜೊತೆಗಿನ ಸಂಬಂಧ ಮುರಿದು ಬಿದ್ದ ಬಳಿಕ ಐಶ್ವರ್ಯಾ ರಜನಿಕಾಂತ್ ಎರಡನೇ ಮದುವೆಯಾಗಲು ಮುಂದಾಗಿದ್ದಾರೆ. ಮೂಲಹಳ ಪ್ರಕಾರ ಐಶ್ವರ್ಯಾ ರಜನಿಕಾಂತ್ ಇತ್ತೀಚೆಗೆ ಯುವ ನಟನೊಂದಿಗೆ ಜೊತೆಯಾಗಿ ಚೆನ್ನೈನ ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ವರದಿಗಳಿವೆ. ತಮಿಳುನಾಡು ಸಿನಿಮಾ ಮೂಲಗಳ ವರದಿಯ ಪ್ರಕಾರ, ಐಶ್ವರ್ಯಾ ರಜನಿಕಾಂತ್ 2ನೇ ಮದುವೆಯಾಗಲು ನಿರ್ಧಾರ ಮಾಡಿದ್ದು, ಅದೇ ಯುವ ನಟನೊಂದಿಗೆ ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಇದೆಲ್ಲವೂ ಕೇವಲ ವದಂತಿ ಎನ್ನಲಾಗುತ್ತಿದೆ.
ಇಂಗ್ಲೀಷ್ ಡಿಜಿಟಲ್ ಮಾಧ್ಯಮದೊಂದಿಗೆ ಮಾತನಾಡಿದ ಐಶ್ವರ್ಯಾ ರಜನಿಕಾಂತ್ ಅವರ ಆಪ್ತ ಮೂಲಗಳು ಇದನ್ನು ಬಹಿರಂಗಪಡಿಸಿದ್ದಾರೆ. "ಐಶ್ವರ್ಯಾ ಅವರ 2ನೇ ಮದುವೆಯ ಎಲ್ಲಾ ವದಂತಿಗಳು ಸುಳ್ಳು. ಅವುಗಳಲ್ಲಿ ಯಾವುದೇ ಸತ್ಯವಿಲ್ಲ. ಅವರು ಎರಡನೇ ಮದುವೆಯನ್ನು ಮಾಡಿಕೊಂಡಿಲ್ಲ. ಅಥವಾ ಈ ಕುರಿತಾದ ಯಾವುದೇ ಯೋಜನೆಗಳಿಲ್ಲ" ಎಂದು ಹೇಳಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಐಶ್ವರ್ಯಾ ರಜನಿಕಾಂತ್ ಮತ್ತು ಧನುಷ್ ತಮ್ಮ ಬೇರೆಯಾಗಿರುವುದಾಗಿ ಘೋಷಣೆ ಮಾಡಿದ್ದರು. ಮದುವೆಯಾದ 18 ವರ್ಷಗಳ ನಂತರ ಇವರಿಬ್ಬರೂ ಬೇರೆ ಬೇರೆಯಾಗಿದ್ದು ತಮಿಳು ಸಿನಿಮಾ ಇಂಡಸ್ಟ್ರಿಗೂ ಆಘಾತಕಾರಿ ವಿಚಾರವಾಗಿತ್ತು. ಆದರೆ, ಅವರಿಬ್ಬರೂ ಇನ್ನೂ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿಲ್ಲ. ಐಶ್ವರ್ಯಾ ತಮ್ಮ ಮಕ್ಕಳಾದ ಯಾತ್ರಾ ಮತ್ತು ಲಿಂಗ ಅವರೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಈ ವರ್ಷ ಏಪ್ರಿಲ್‌ನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್‌ನ ಪಂದ್ಯದ ವೇಳೆ ಕ್ರಿಕೆಟ್ ಸ್ಟೇಡಿಯಂಗೆ ಆಗಮಿಸಿದ್ದರು. ಐಶ್ವರ್ಯಾ ಟ್ವಿಟ್ಟರ್ ನಲ್ಲಿ ಈ ಸಂಬಂಧ ವಿಡಿಯೋವನ್ನು ಕೂಡ ಶೇರ್ ಮಾಡಿದ್ದರು.
ಅಲ್ಲು ಅರ್ಜುನ್, ಪ್ರಭಾಸ್ ರಿಂದ ಸಮಂತಾವರೆಗೆ: ಈ ದಕ್ಷಿಣ ತಾರೆಯರ ಐಷಾರಾಮಿ ಮನೆಗಳ ಬೆಲೆ ಎಷ್ಟು ಗೊತ್ತಾ?
ಈ ನಡುವೆ, ಮೇ 8 ರಂದು ಐಶ್ವರ್ಯಾ ರಜನಿಕಾಂತ್ ಅವರ ಮುಂಬರುವ ಚಿತ್ರ ಲಾಲ್ ಸಲಾಮ್‌ನ ಕ್ಯಾರೆಕ್ಟರ್ ಪೋಸ್ಟರ್ ಅನ್ನು ಲೈಕಾ ಬಿಡುಗಡೆ ಮಾಡಿತು. ಚಿತ್ರದಲ್ಲಿ ರಜನಿಕಾಂತ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಈ ಹಿಂದೆಯೇ ಘೋಷಿಸಲಾಗಿತ್ತು. ಅದರಂತೆ ಚಿತ್ರದಲ್ಲಿ ರಜನಿ ಪಾತ್ರದ ಹೆಸರನ್ನೂ ಮೊಯ್ದೀನ್ ಭಾಯ್ ಎಂದು ಹೇಳಲಾಗಿತ್ತು. ಸದ್ಯ ಲಾಲ್ ಸಲಾಂ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಲೈಕಾ ನಿರ್ಮಾಣದ ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರ ಇದೇ ವರ್ಷ ತೆರೆಗೆ ಬರಲಿದೆ.
ಜೈಲರ್ ಗ್ಲಿಂಫ್ಸ್‌ಗೆ ಫ್ಯಾನ್ಸ್ ಫಿದಾ: ರಜನಿಕಾಂತ್, ಶಿವಣ್ಣ, ಮೋಹನ್‌ಲಾಲ್ ಖಡಕ್ ಲುಕ್ ರಿವಿಲ್
