Asianet Suvarna News Asianet Suvarna News

ಎರಡು ದಶಕದಲ್ಲಿ ಶೇ.90ರಷ್ಟು ರೈಲು ಅಪಘಾತ ಇಳಿಕೆ

ಕಳೆದ 22 ವರ್ಷದಲ್ಲಿ ದೇಶದಲ್ಲಿ ರೈಲು ಅಪಘಾತಗಳ ಪ್ರಮಾಣವು ಶೇ.90ರಷ್ಟುಇಳಿಕೆಯಾಗಿದೆ. 2000-2001ರಲ್ಲಿ ದೇಶದಲ್ಲಿ 473 ರೈಲು ಅಪಘಾತ ಸಂಭವಿಸಿದ್ದರೆ, 2022-23ರಲ್ಲಿ ಈ ಪ್ರಮಾಣ 48ಕ್ಕೆ ಇಳಿದಿದೆ ಎಂದು ಕೇಂದ್ರ ಸಚಿವ ಅರ್ಜುನ್‌ ಮುಂಡಾ ಲೋಕಸಭೆಗೆ ತಿಳಿಸಿದ್ದಾರೆ.

In two decades 90 percent train accident decreased In 2000 there was 473 train accidents per year which decrease to 48 in 2022 akb
Author
First Published Aug 10, 2023, 7:18 AM IST

ನವದೆಹಲಿ: ಕಳೆದ 22 ವರ್ಷದಲ್ಲಿ ದೇಶದಲ್ಲಿ ರೈಲು ಅಪಘಾತಗಳ ಪ್ರಮಾಣವು ಶೇ.90ರಷ್ಟುಇಳಿಕೆಯಾಗಿದೆ. 2000-2001ರಲ್ಲಿ ದೇಶದಲ್ಲಿ 473 ರೈಲು ಅಪಘಾತ ಸಂಭವಿಸಿದ್ದರೆ, 2022-23ರಲ್ಲಿ ಈ ಪ್ರಮಾಣ 48ಕ್ಕೆ ಇಳಿದಿದೆ ಎಂದು ಕೇಂದ್ರ ಸಚಿವ ಅರ್ಜುನ್‌ ಮುಂಡಾ ಲೋಕಸಭೆಗೆ ತಿಳಿಸಿದ್ದಾರೆ. ಇನ್ನು ಸರಾಸರಿ ವಾರ್ಷಿಕ ರೈಲ್ವೆ ಅಪಘಾತ ಪ್ರಮಾಣವು 2004-14ರಲ್ಲಿ 171 ಇದ್ದು, 2014-23ರ ಅವಧಿಯಲ್ಲಿ 71ಕ್ಕೆ ಇಳಿಕೆಯಾಗಿದೆ. ರೈಲು ಹಳಿಗಳ ನವೀಕರಣ, ರೈಲು ನಿಲ್ದಾಣಗಳಲ್ಲಿ ವಿದ್ಯುನ್ಮಾನ ಇಂಟರ್ಲಾಕಿಂಗ್‌ ವ್ಯವಸ್ಥೆ, ರೈಲ್ವೆ ಗೇಟ್‌ಗಳ ಉನ್ನತೀಕರಣ, ಮಂಜು ಮುಸುಕಿದ ವಾತಾವರಣದಲ್ಲಿ ಸುಗಮ ಸಂಚಾರಕ್ಕೆ ಜಿಪಿಎಸ್‌ ಆಧಾರಿತ ಹಿಮ ಗೋಚರ ವ್ಯವಸ್ಥೆ, ಚಾಲಕರ ಸಮಯಪ್ರಜ್ಞೆ ಅರಿಯಲು ಅಲರ್ಟ್‌ ಸಿಸ್ಟಂ, ಫಲಕಗಳ ಸೂಕ್ಷ್ಮಗೊಳಿಸುವಿಕೆ ಹೀಗೆ ಹಲವು ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ ಎಂದರು.

ಸಿಗ್ನಲಿಂಗ್‌ ವ್ಯವಸ್ಥೆಯ ದೋಷವೇ ಬಾಲಸೋರ್‌ ರೈಲು ದುರಂತಕ್ಕೆ ಕಾರಣ: ಸಿಆರ್‌ಎಸ್‌ ವರದಿ

ಮುರಿದ ಗಾಲಿಯಲ್ಲಿ 10 ಕಿ.ಮೀ ಚಲಿಸಿದ ರೈಲು, ಪ್ರಯಾಣಿಕನ ಜಾಣ್ಮೆಯನ್ನು ಶ್ಲಾಘಿಸಿದ ರೈಲ್ವೇಸ್‌

Follow Us:
Download App:
  • android
  • ios