ಸಿಗ್ನಲಿಂಗ್‌ ವ್ಯವಸ್ಥೆಯ ದೋಷವೇ ಬಾಲಸೋರ್‌ ರೈಲು ದುರಂತಕ್ಕೆ ಕಾರಣ: ಸಿಆರ್‌ಎಸ್‌ ವರದಿ

ಜೂನ್‌ ಆರಂಭದಲ್ಲಿ ಒಡಿಶಾದಲ್ಲಿ ನಡೆದ ತ್ರಿವಳಿ ರೈಲು ದುರಂತಕ್ಕೆ ಸಿಗ್ನಿಲಿಂಗ್‌ ವ್ಯವಸ್ಥೆಯಲ್ಲಿಯ ದೋಷವೇ ಕಾರಣವೆನ್ನುವುದು ರೈಲ್ವೆ ಸುರಕ್ಷತಾ ಆಯುಕ್ತರ ವರದಿಯಲ್ಲಿ ತಿಳಿಸಲಾಗಿದೆ. ಇದರ ಬೆನ್ನಲ್ಲಿಯೇ ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಆರಂಭಿಸಿವೆ.
 

CRS Report on Odisha Train Accident fault in the signaling system is the reason san

ನವದೆಹಲಿ (ಜು.4): ಒಡಿಶಾದ ಬಾಲಸೋರ್‌ನಲ್ಲಿ ಜೂನ್ 2 ರಂದು ಮೂರು ರೈಲುಗಳು ಡಿಕ್ಕಿ ಹೊಡೆದಿದ್ದರಿಂದ ಈ ಶತಮಾನದ ಅತ್ಯಂತ ಭೀಕರ ರೈಲು ದುರಂತ ಸಂಭವಿಸಿತ್ತು. ಎರಡು ದಶಕಗಳ ಅತಿದೊಡ್ಡ ಅಪಘಾತದಲ್ಲಿ 293 ಜನರು ಸಾವು ಕಂಡಿದ್ದರೆ, 1 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಪಘಾತದ ಕುರಿತು ಒಂದೆಡೆ ಸಿಬಿಐ ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ರೈಲ್ವೆ ಮಂಡಳಿಯ ಪರವಾಗಿ ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ಕೂಡ ವಿಚಾರಣೆ ನಡೆಸಿದ್ದು, ಸೋಮವಾರ, ಸಿಆರ್‌ಎಸ್ 40 ಪುಟಗಳ ವರದಿಯನ್ನು ಮಂಡಳಿಗೆ ಸಲ್ಲಿಸಿದೆ. ವರದಿಗಳ ಪ್ರಕಾರ, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯು ಲೆವೆಲ್-ಕ್ರಾಸಿಂಗ್ ಲೊಕೇಶನ್ ಬಾಕ್ಸ್‌ನ ಒಳಗೆ ತಂತಿಗಳ ತಪ್ಪಾದ ಲೇಬಲ್‌ನಿಂದಾಗಿ ಅಸ್ತವ್ಯಸ್ತವಾಗಿದೆ. ಕೊನೆಗೆ ಇದೇ ಅಪಘಾತಕ್ಕೆ ಕಾರಣವಾಯಿತು. ಕ್ರಾಸಿಂಗ್ ಲೊಕೇಶನ್ ಬಾಕ್ಸ್‌ನಲ್ಲಿನ ತಂತಿಗಳ ತಪ್ಪು ಲೇಬಲ್ ವರ್ಷಗಳವರೆಗೆ ಪತ್ತೆಯಾಗಿಲ್ಲ. ನಿರ್ವಹಣೆ ವೇಳೆಯೂ ಇದು ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಲಾಗಿದೆ.ಈ ವರದಿ ಬಂದ ಬೆನ್ನಲ್ಲಿಯೇ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಸರ್ಕಾರದ ನಿರ್ಲಕ್ಷ್ಯದಿಂದ ಪ್ಯಾಸೆಂಜರ್ ರೈಲುಗಳು ನಡೆದಾಡುವ ಶವಪೆಟ್ಟಿಗೆಯ ರೀತಿ ಆಗಿದೆ ಎಂದು ಟಿಎಂಸಿ ಹೇಳಿದೆ. 

ಮತ್ತೊಂದೆಡೆ, ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಮಾತನಾಡಿ, ವಂದೇ ಭಾರತ್ ರೈಲುಗಳ ಉದ್ಘಾಟನೆಯ ಕ್ರೇಜ್‌ನಲ್ಲಿ ಕೇಂದ್ರ ಸರ್ಕಾರವು ರೈಲ್ವೆ ಸುರಕ್ಷತೆಯಂತಹ ಮೂಲಭೂತ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಸಿಆರ್‌ಎಸ್‌ ವರದಿಯಲ್ಲಿನ ಪ್ರಮುಖ ಅಂಶಗಳು
- ಲೆವೆಲ್-ಕ್ರಾಸಿಂಗ್‌ನ ಲೊಕೇಷನ್‌ ಬಾಕ್ಸ್‌ನಲ್ಲಿ ಎಲ್ಲಾ ತಂತಿಗಳನ್ನು ತಪ್ಪಾಗಿ ಸಂಪರ್ಕಗೊಂಡಿವೆ. ಇದೇ ಕಾರಣದಿಂದ ನಿರ್ವಹಣಾ ಕಾಮಗಾರಿ ವೇಳೆಯೂ ತಪ್ಪುಗಳು ನಡೆದಿವೆ. ಇದರಿಂದಾಗಿ ರೈಲುಗಳ ನಿಲುಗಡೆಗೆ ತಪ್ಪು ಇಂಡಿಕೇಷನ್‌ ಹೋಗುತ್ತಿತ್ತು. ಈ ತಪ್ಪನ್ನು ವರ್ಷಗಳ ಕಾಲ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.
-  ಅಪಘಾತಕ್ಕೆ ಸಿಗ್ನಲಿಂಗ್ ವಿಭಾಗವನ್ನು ಪ್ರಾಥಮಿಕವಾಗಿ ಹೊಣೆ ಮಾಡಲಾಗುತ್ತಿದೆ. ಸಿಗ್ನಲಿಂಗ್ ನಿಯಂತ್ರಣ ವ್ಯವಸ್ಥೆಯಲ್ಲಿನ ದೋಷವನ್ನು ಪತ್ತೆಹಚ್ಚಲು ವಿಫಲವಾದ ಸ್ಟೇಷನ್ ಮಾಸ್ಟರ್ ಅನ್ನು ಸಹ ವರದಿಯು ಹೆಸರಿಸಿದೆ.
- ಬಾಲಸೋರ್‌ನ ಮತ್ತೊಂದು ಸ್ಥಳವಾದ ಬಹನಗಾ ಬಜಾರ್‌ನ ಲೊಕೇಷನ್‌ ಬಾಕ್ಸ್‌ಗೂ ಲೊಕೇಷನ್‌ ಬಾಕ್ಸ್‌ನ ರೇಖಾಚಿತ್ರವನ್ನು ಬಳಸಲಾಗಿದೆ. ಇದು ತಪ್ಪು ಕ್ರಮವಾಗಿತ್ತು, ಇದು ತಪ್ಪು ವೈರಿಂಗ್‌ಗೆ ಕಾರಣವಾಯಿತು.
-  ಕೋರಮಂಡಲ್ ಎಕ್ಸ್ ಪ್ರೆಸ್ ಮುಖ್ಯ ಮಾರ್ಗಕ್ಕೆ ಹಸಿರು ನಿಶಾನೆ ತೋರಲಾಗಿತ್ತು. ರೈಲಿನ ದಿಕ್ಕನ್ನು ನಿರ್ಧರಿಸುವ ವ್ಯವಸ್ಥೆಯು ತಪ್ಪಾಗಿ 'ಲೂಪ್ ಲೈನ್' ಕಡೆಗೆ ತೋರಿಸುತ್ತಿತ್ತು.
- ಅಪಘಾತದ ದಿನವೇ ಲೆವೆಲ್ ಕ್ರಾಸಿಂಗ್‌ನಲ್ಲಿರುವ ಎಲೆಕ್ಟ್ರಿಕ್ ಲಿಫ್ಟಿಂಗ್ ತಡೆಗೋಡೆಯನ್ನು ಬದಲಾಯಿಸಲಾಗಿತ್ತು. ಈ ಸಮಯದಲ್ಲಿ, ಟರ್ಮಿನಲ್‌ನಲ್ಲಿ ತಪ್ಪಾದ ಲೇಬಲ್‌ನಿಂದಾಗಿ ಅಡಚಣೆ ಉಂಟಾಯಿತು. ರೈಲು ಒಂದು ಹಳಿಯಿಂದ ಇನ್ನೊಂದು ಟ್ರ್ಯಾಕ್‌ಗೆ ರೈಲನ್ನು ಕರೆದೊಯ್ಯುವ ಪಾಯಿಂಟ್‌ನ ಸರ್ಕ್ಯೂಟ್ ಅನ್ನು ಈಗಾಗಲೇ ಬದಲಾಯಿಸಲಾಗಿದೆ.
-  ಮೇ 16, 2022 ರಂದು ಖರಗ್‌ಪುರ ವಿಭಾಗದ ಬಂಕ್ರಾ ನಯಾಬಾಜ್ ನಿಲ್ದಾಣದಲ್ಲಿ ತಪ್ಪು ರಿಂಗ್ ಮತ್ತು ದೋಷಯುಕ್ತ ತಂತಿಯಿಂದಾಗಿ ಇದೇ ರೀತಿಯ ಘಟನೆ ಸಂಭವಿಸಿದೆ. ಆಗಲೂ ವೈರಿಂಗ್ ಸರಿಪಡಿಸಿದ್ದರೆ ಬಾಲಸೋರ್ ಅವಘಡ ಸಂಭವಿಸುತ್ತಿರಲಿಲ್ಲ.


ಸಿಆರ್‌ಎಸ್‌ ವರದಿಗೆ ಪ್ರತಿಕ್ರಿಯೆ ನೀಡಿದ ಟಿಎಂಸಿ, ಪ್ರಯಾಣಿಕ ರೈಲುಗಳು ಶವಾಗಾರಗಳಾಗಿ ಮಾರ್ಪಟ್ಟಿವೆ ಎಂದು ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ ಹೇಳಿದ್ದಾರೆ. ಕೇಂದ್ರ ಸರ್ಕಾರವು ಪ್ರಯಾಣಿಕರ ಸುರಕ್ಷತೆಗಿಂತ ಹೆಚ್ಚಾಗಿ ಪಿಆರ್‌ಗೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಭಾರತೀಯ ರೈಲ್ವೇಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಎತ್ತಿರುವ ಸಮಸ್ಯೆಗಳನ್ನು ಕೇಂದ್ರ ನಿರ್ಲಕ್ಷಿಸಿದೆ ಎಂದು ಅವರು ಹೇಳಿದರು. ದೇಶದಲ್ಲಿ ಪ್ಯಾಸೆಂಜರ್ ರೈಲುಗಳು ನಡೆದಾಡುವ ಶವಗಳಾಗಿ ಮಾರ್ಪಟ್ಟಿವೆ ಎಂದು ಟಿಎಂಸಿ ಸಂಸದರು ಹೇಳಿದ್ದಾರೆ.

ಒಡಿಶಾ ರೈಲು ದುರಂತಕ್ಕೆ ಸಿಬ್ಬಂದಿ ಕಾರಣ: ರೈಲ್ವೆ ತನಿಖಾ ವರದಿ; ವಿಧ್ವಂಸಕ ಕೃತ್ಯದ ಅನುಮಾನದ ಬಗ್ಗೆ ಸಿಬಿಐ ತನಿಖೆ ಮುಂದುವರಿಕೆ

ಸಂಸತ್ತಿನಲ್ಲಿ ಭಾರತೀಯ ರೈಲ್ವೆಗೆ ಸಂಬಂಧಿಸಿದ ಗಂಭೀರ ವಿಷಯಗಳನ್ನು ವಿರೋಧ ಪಕ್ಷಗಳು ಆಗಾಗ್ಗೆ ಪ್ರಸ್ತಾಪಿಸುತ್ತವೆ ಮತ್ತು ಅವುಗಳ ಸುಧಾರಣೆಗೆ ಸಲಹೆಗಳನ್ನು ನೀಡುತ್ತವೆ ಎಂದು ಅವರು ಹೇಳಿದರು. ಯಾರೂ ಅವರತ್ತ ಗಮನ ಹರಿಸಲಿಲ್ಲ. ಪ್ರಸ್ತುತ ಸರ್ಕಾರದಲ್ಲಿ ಪ್ರಯಾಣಿಕರ ಸುರಕ್ಷತೆಗಿಂತ ಸಾರ್ವಜನಿಕ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ದುರಂತದ ನಡುವೆ ಕುದುರಿದ ಲಕ್‌, ಪುಟ್ಟ ಗ್ರಾಮ ಬಹನಗಾ ಅಭಿವೃದ್ಧಿಗೆ 2 ಕೋಟಿ ಪ್ಯಾಕೇಜ್‌!

Latest Videos
Follow Us:
Download App:
  • android
  • ios