ಶಿಲಿಪಾದ ಗೋಡಂಬಿ ಅರಣ್ಯದ ಬಳಿ ವಾಸಿಸುವ ಗ್ರಾಮಸ್ಥರ ಪ್ರಕಾರ, 9 ಗಂಡಾನೆಗಳು, 6 ಹೆಣ್ಣಾನೆಗಳು ಹಾಗೂ 9 ಮರಿಗಳು, ಲೋಕಲ್ ಎಣ್ಣೆ 'ಮಹುವಾ'ವನ್ನು ಗಡಿಗೆಯಲ್ಲಿ ಇಟ್ಟ ಪ್ರದೇಶದಲ್ಲಿ ಮಲಗಿಕೊಂಡಿದ್ದವು ಎಂದು ತಿಳಿಸಿದ್ದಾರೆ.
ಭುವನೇಶ್ವರ (ನ.10): ದಟ್ಟ ಕಾಡಿನ ಒಳಗೆ ಲೋಕಲ್ ಮದ್ಯ ತಯಾರಿಸುವ ಪ್ರದೇಶಕ್ಕೆ ಹೋದಾಗ ಒಡಿಶಾದ ಕಿಯೋಂಜಾರ್ ಜಿಲ್ಲೆಯ ಗ್ರಾಮಸ್ಥರಿಗೆ ಅಚ್ಚರಿ ಕಾದಿತ್ತು. ಸಾಂಪ್ರದಾಯಿಕ ಮದ್ಯ ತಯಾರಿಸುವ ಪ್ರದೇಶದ ಯಾವ ಡ್ರಮ್‌ಗಳಲ್ಲೂ ಮದ್ಯ ಇದ್ದಿರಲಿಲ್ಲ. ಆದರೆ, ಅವುಗಳ ಪಕ್ಕದಲ್ಲಿ ಬರೋಬ್ಬರಿ 24 ಆನೆಗಳು ಭರ್ಜರಿಯಾಗಿ ನಿದ್ರೆ ಮಾಡುತ್ತಿದ್ದವು. ಹಾಗಂತ ಅವುಗಳು ಸುಮ್ಮನೆ ನಿದ್ರೆ ಮಾಡಿರಲಿಲ್ಲ. ಡ್ರಮ್‌ಗಳಲ್ಲಿದ್ದ ಲೋಕಲ್ ಎಣೆಯಲ್ಲಿ ಕಂಠಪೂರ್ತಿ ಕುಡಿದಿದ್ದ ಆನೆಗಳು 'ಫುಲ್ ಟೈಟ್' ಆಗಿ ಅಲ್ಲಿಯೇ ಬಿದ್ದುಕೊಂಡಿದ್ದವು. ಗ್ರಾಮಸ್ಥರ ಪ್ರಕಾರ, ಶಿಲಿಪಾದಾ ಗೋಡಂಬಿ ಅರಣ್ಯದ ಬಳಿ ಈ ಘಟನೆ ನಡೆದಿದೆ. ಇಲ್ಲಿನ ಗ್ರಾಮಸ್ಥರು ಕಾಡಿನ ಒಳಗೆ ಮದ್ಯ ತಯಾರಿಸಲು ಹೋದಾಗ ಅವರಿಗೆ ಈ ಅಚ್ಚರಿ ಕಂಡಿದೆ. ಕಾಡಾನೆಗಳು ಕಂಡಾಗ ಹೆದರಿದ ಗ್ರಾಮಸ್ಥರಿಗೆ ಬಳಿಕ ಅವುಗಳು ಎಣ್ಣೆ ಹೊಡೆದು ನಿದ್ರೆ ಮಾಡಿದ್ದು ಗೊತ್ತಾಗಿದೆ. ಇದರಲ್ಲಿ 9 ಗಂಡಾನೆಗಳು, 6 ಹೆಣ್ಣಾನೆಗಳು ಹಾಗೂ 9 ಮರಿಗಳು ಸೇರಿದ್ದವು. ಸಾಂಪ್ರದಾಯಿಕ ಮದ್ಯ ಮಹುವಾವನ್ನು ಮದ್ಯವನ್ನು ಹುದುಗುವಿಕೆಗಾಗಿ ಡ್ರಮ್ ರೀತಿಯ ದೊಡ್ಡ ಕುಂಡಗಳಲ್ಲಿ ಇರಿಸಲಾಗಿತ್ತು. ಈ ಮಣ್ಣಿನ ಉದ್ದದ ಮಡಿಕೆಗಳೆಲ್ಲಾ ಒಡೆದು ಹೋಗಿದ್ದರೆ, ಅದರಲ್ಲಿನ ಮದ್ಯ ಕೂಡ ಖಾಲಿಯಾಗಿದೆ.
ಅಂದಾಜು ಬೆಳಗ್ಗೆ 6 ಗಂಟೆಯ ವೇಳೆಗೆ ನಾವು ಕಾಡಿನ ಒಳಗೆ ಹೋಗಿದ್ದೆವು. ಮಹುವಾವನ್ನು ಸಿದ್ಧ ಮಾಡುವುದು ನಮ್ಮ ಪ್ರತಿನಿತ್ಯದ ಕೆಲಸ. ಈ ವೇಳೆ ಮಹುವಾ ಇಟ್ಟಿದ್ದ ಎಲ್ಲಾ ಮಡಿಕೆಗಳು ಒಡೆದು ಹೋಗಿದ್ದವು. ಅದರಲ್ಲಿದ್ದ ಎಲ್ಲಾ ಮದ್ಯಗಳು ಖಾಲಿಯಾಗಿದ್ದವು. ಅದರ ಹತ್ತಿರದಲ್ಲಿಯೇ ಆನೆಗಳ ಹಿಂಡು ನಿದ್ರೆ ಮಾಡುತ್ತಿರುವುದನ್ನು ಗಮನಿಸಿದ್ದೆವು. ಮದ್ಯವನ್ನು ಸೇವಿಸಿದ ಆನೆಗಳಿಗೆ ಮತ್ತೇರಿ ಅಲ್ಲಿಯೇ ನಿದ್ರೆ ಮಾಡಿವೆ ಎಂದು ಗ್ರಾಮಸ್ಥರಾದ ನರಿಯಾ ಸೇಥಿ ಹೇಳಿದ್ದಾರೆ.
ಈ ವೇಳೆ ಗ್ರಾಮಸ್ಥರು ಆನೆಗಳನ್ನು ಏಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ, ಎಷ್ಟು ಪ್ರಯತ್ನಪಟ್ಟರು ಆನೆಗಳು ಏಳದೇ ಇದ್ದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. 'ಅದು ಸಂಸ್ಕರಿಸಿದ ಮದ್ಯವಾಗಿರಲಿಲ್ಲ. ಆದರೆ, ಅವುಗಳನ್ನು ಆನೆಗಳು ಕುಡಿದಿದ್ದವು. ನಾವು ಪ್ರಾಣಿಗಳನ್ನು ಎಬ್ಬಿಸಲು ಮಾಡಿದ ಪ್ರಯತ್ನವೆಲ್ಲಾ ವಿಫಲವಾಗಿತ್ತು. ಬಳಿಕ ಅರಣ್ಯ ಇಲಾಖೆಗೆ ಈ ವಿಚಾರ ತಿಳಿಸಿದೆವು ಎಂದು ಸೇಥಿ ಹೇಳಿದ್ದಾರೆ. ನಾವು ನೀಡಿದ್ದ ಮಾಹಿತಿಯ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಪಟನಾ ಅರಣ್ಯ ವ್ಯಾಪ್ತಿಯ ಸ್ಥಳಕ್ಕೆ ಆಗಮಿಸಿ ಆನೆಗಳನ್ನು ಎಬ್ಬಿಸಲು ಡ್ರಮ್‌ಗಳನ್ನು ಬಾರಿಸಿದ್ದಾರೆ.
Kenya Drought: ಕೀನ್ಯಾದಲ್ಲಿ ಕುಡಿಯಲು ನೀರಿಲ್ಲ ತಿನ್ನಲು ಊಟವಿಲ್ಲ, ಪ್ರಾಣಿಗಳ ಮರಣ ಮೃದಂಗ!
ಸಾಕಷ್ಟು ಸಮಯ ಅರಣ್ಯ ಇಲಾಖೆ ಅಧಿಕಾರಿಗಳು ಡ್ರಮ್ ಬಾರಿಸಿದ ಬಳಿಕ, ಆನೆಗಳು ಎಚ್ಚರಗೊಂಡಿದ್ದವು. ಡ್ರಮ್‌ಗಳ ಸದ್ದು ಕೇಳಿದ ಬಳಿಕ, ಆನೆಗಳು ಕಾಡಿನ ಒಳಕ್ಕೆ ಹೊಕ್ಕವು ಎಂದು ರೇಂಜರ್ ಘಾಸಿರಾಮ್ ಪಾತ್ರಾ ಹೇಳಿದ್ದಾರೆ. ಆನೆಗಳು ಸ್ಥಳದಲ್ಲಿದ್ದ ದೇಶೀ ನಿರ್ಮಿತ ಮದ್ಯವನ್ನು ಸೇವಿಸಿವೆಯೇ ಅಥವಾ ಕೇವಲ ಗಾಢ ನಿದ್ರೆಯಲ್ಲಿವೆಯೇ ಎಂಬುದು ಖಚಿತವಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಒಡೆದ ಮಡಕೆಗಳ ಸಮೀಪವಿರುವ ವಿವಿಧ ಸ್ಥಳಗಳಲ್ಲಿ ಆನೆಗಳು ಅಮಲೇರಿದ ಸ್ಥಿತಿಯಲ್ಲಿ ಮಲಗಿದ್ದನ್ನು ಅವರು ಮಂಗಳವಾರ ಗಮನಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆನೆಗಳು ಸೊಂಡಿಲಲ್ಲಿ ಆಶೀರ್ವದಿಸಿದ್ರೆ ಅನ್ಕೊಂಡಿದ್ದೆಲ್ಲ ಆಗುತ್ತಾ?
ಮಹುವಾ ಮರದ ಹೂವುಗಳನ್ನು (ಮಧುಕಾ ಲಾಂಗಿಫೋಲಿಯಾ) ಹುದುಗಿಸಿ, ಮಹುವಾ ಎಂದು ಕರೆಯಲ್ಪಡುವ ಮದ್ಯವನ್ನು ಉತ್ಪಾದನೆ ಮಾಡಲಾಗುತ್ತದೆ. ಭಾರತದ ವಿವಿಧ ಭಾಗಗಳಲ್ಲಿ ಬುಡಕಟ್ಟು ಪುರುಷರು ಮತ್ತು ಮಹಿಳೆಯರು ಸಾಂಪ್ರದಾಯಿಕವಾಗಿ ಈ ಮದ್ಯವನ್ನು ತಯಾರಿಸುತ್ತಾರೆ.
