ಕೀನ್ಯಾದಲ್ಲಿ ಭೀಕರ ಬರಗಾಲ ಎದುರಾಗಿದೆ.   ವರದಿಯ ಪ್ರಕಾರ, ಆನೆಗಳು ಮತ್ತು ಅಳಿವಿನಂಚಿನಲ್ಲಿರುವ ಗ್ರೆವಿಯ ಝೀಬ್ರಾಗಳು ಸೇರಿದಂತೆ ನೂರಾರು ಪ್ರಾಣಿಗಳು ಪೂರ್ವ ಆಫ್ರಿಕಾದಲ್ಲಿನ ಕೀನ್ಯಾದ ವನ್ಯಜೀವಿ ಸಂರಕ್ಷಣೆಯ ವಲಯದಲ್ಲಿ ಸಾವನ್ನಪ್ಪಿವೆ.

ನೈರೋಬಿ (ನ.5): ಕೀನ್ಯಾದಲ್ಲಿ ಭೀಕರ ಬರಗಾಲ ಎದುರಾಗಿದೆ. ಇದರ ಪರಿಣಾಮ ನೀರು, ಆಹಾರ ಸಿಗದೆ ಹಸಿವಿನಿಂದ ಜಿರಾಫೆಗಳು, ಆನೆಗಳು, ಝೀಬ್ರಾಗಳು ಒಂದರ ಮೇಲೆ ಒಂದರಂತೆ ಸಾಯುತ್ತಿದೆ. ಶುಕ್ರವಾರ ಬಿಡುಗಡೆಯಾದ ವರದಿಯ ಪ್ರಕಾರ, ಆನೆಗಳು ಮತ್ತು ಅಳಿವಿನಂಚಿನಲ್ಲಿರುವ ಗ್ರೆವಿಯ ಝೀಬ್ರಾಗಳು ಸೇರಿದಂತೆ ನೂರಾರು ಪ್ರಾಣಿಗಳು ಪೂರ್ವ ಆಫ್ರಿಕಾದಲ್ಲಿನ ಕೀನ್ಯಾದ ವನ್ಯಜೀವಿ ಸಂರಕ್ಷಣೆಯ ವಲಯದಲ್ಲಿ ಸಾವನ್ನಪ್ಪಿವೆ. ಕೀನ್ಯಾ ವನ್ಯಜೀವಿ ಸೇವೆ ಮತ್ತು ಇತರ ಸಂಸ್ಥೆಗಳು ನೀಡಿರುವ ವರದಿ ಪ್ರಕಾರ ಕಳೆದ ಒಂಬತ್ತು ತಿಂಗಳಲ್ಲಿ 205 ಆನೆಗಳು, 512 ಕಾಡಾನೆಗಳು, 381 ಸಾಮಾನ್ಯ ಜೀಬ್ರಾಗಳು, 51 ಎಮ್ಮೆಗಳು, 49 ಗ್ರೆವಿಯ ಜೀಬ್ರಾಗಳು ಮತ್ತು 12 ಜಿರಾಫೆಗಳು ಜೀವ ಬಿಟ್ಟಿವೆ. ಕೀನ್ಯಾದ ವಿವಿಧ ಭಾಗಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಸತತ ನಾಲ್ಕು ಋತುಗಳಲ್ಲಿ ಅಸಮರ್ಪಕ ಮಳೆಯಾಗಿದ್ದು, ನೀರಿಲ್ಲದೆ, ಆಹಾರ ಬೆಳೆಯದೆ ಜಾನುವಾರುಗಳು ಸೇರಿದಂತೆ ಜನರು ಮತ್ತು ಪ್ರಾಣಿಗಳಿಗೆ ಭೀಕರ ಪರಿಣಾಮ ಎದುರಾಗಿದೆ. ವರದಿಯ ಪ್ರಕಾರ, ಕೀನ್ಯಾದ ಅತಿ ಹೆಚ್ಚು ಭೇಟಿ ನೀಡುವ ಪ್ರದೇಶಗಳಾದ ರಾಷ್ಟ್ರೀಯ ಉದ್ಯಾನವನಗಳು, ಅಂಬೋಸೆಲಿ, ತ್ಸಾವೊ ಮತ್ತು ಲೈಕಿಪಿಯಾ ಸಂಬೂರು ಉದ್ಯಾನವನಗಳ ಪ್ರದೇಶಗಳನ್ನು ಒಳಗೊಂಡಂತೆ ಹಲವು ಪರಿಸರ ವ್ಯವಸ್ಥೆಗಳು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ.

ಅಲ್ಲಿನ ಕಾಡು ಪ್ರಾಣಿಗಳ ಮೇಲೆ ಬರದ ಪ್ರಭಾವದ ವಿಶಾಲ ನೋಟದ ಮಾಹಿತಿ ಪಡೆಯಲು ಅಂಬೋಸೆಲಿಯಲ್ಲಿ ವನ್ಯಜೀವಿಗಳ ತುರ್ತು ವೈಮಾನಿಕ ಗಣತಿ ನಡೆಸಲು ಸೂಚಿಸಲಾಗಿದೆ. ತಜ್ಞರು ಬರ ಪೀಡಿತ ಪ್ರದೇಶಗಳಲ್ಲಿ ನೀರು ಮತ್ತು ಉಪ್ಪು ನೆಕ್ಕಲು ತಕ್ಷಣವೇ ವ್ಯವಸ್ಥೆ ಒದಗಿಸುವಂತೆ ಶಿಫಾರಸು ಮಾಡಿದ್ದಾರೆ. ಆನೆಗಳು ದಿನಕ್ಕೆ 240 ಲೀಟರ್ (63.40 ಗ್ಯಾಲನ್) ನೀರು ಕುಡಿಯುತ್ತವೆ ಎಂದು ಎಲಿಫೆಂಟ್ ನೈಬರ್ಸ್ ಸೆಂಟರ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜಿಮ್ ಜಸ್ಟಸ್ ನ್ಯಾಮು ಹೇಳಿದ್ದಾರೆ. ಜೊತೆಗೆ ಗ್ರೇವಿಯ ಝಿಬ್ರಾಗಳಿಗೆ, ತಜ್ಞರು ತಕ್ಷಣ ಹುಲ್ಲು ನೀಡಲು ಒತ್ತಾಯಿಸಿದ್ದಾರೆ.

ಇನ್ನು ತ್ಸಾವೊ ವೆಸ್ಟ್ ನ್ಯಾಷನಲ್ ಪಾರ್ಕ್‌ನಲ್ಲಿರುವ ನ್ಗುಲಿಯಾ ಘೇಂಡಾಮೃಗಗಳ ಅಭಯಾರಣ್ಯದಲ್ಲಿ ಕೇವಲ ಒಂದು ಘೇಂಡಾಮೃಗ ಸಾವನ್ನಪ್ಪಿದ್ದರಿಂದ ಬರಗಾಲವು ಖಡ್ಗಮೃಗಗಳ ಸಂತತಿ ಮೇಲೆ ಗಮನಾರ್ಹ ಪರಿಣಾಮ ಬೀರಿಲ್ಲ ಎಂದು ಕೀನ್ಯಾ ಸರ್ಕಾರ ಗಮನಿಸಿದೆ. 

ಆಫ್ರಿಕಾ ವೈಲ್ಡ್‌ಲೈಫ್ ಫೌಂಡೇಶನ್‌ನ ಸಂರಕ್ಷಣಾವಾದಿ ಮತ್ತು ಕೀನ್ಯಾದ ದೇಶದ ನಿರ್ದೇಶಕರಾದ ನ್ಯಾನ್ಸಿ ಗಿಥೈಗಾ, ನಾವು ಪ್ರಾಣಿಗಳನ್ನು ಕಳೆದುಕೊಳ್ಳುತ್ತಿದ್ದೇವೆ, ನಾವು ವನ್ಯಜೀವಿಗಳನ್ನು ಕಳೆದುಕೊಳ್ಳುತ್ತಿದ್ದೇವೆ, ನಾವು ಜೀವನೋಪಾಯವನ್ನು ಕಳೆದುಕೊಳ್ಳುತ್ತಿದ್ದೇವೆ, ನಾವು ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ಲಕ್ಷಾಂತರ ನಾಗರಿಕರು ಈ ಸಮಸ್ಯೆಯಿಂದ ನಿಜವಾಗಿಯೂ ಬಾಧಿತರಾಗಿದ್ದಾರೆ. ಆದ್ದರಿಂದ, ನಾವು ಸಂಭಾಷಣೆಗಳನ್ನು ಮುಂದುವರಿಸಲು ಸಾಧ್ಯವಿಲ್ಲ, ನಮಗೆ ಇದರ ವಿರುದ್ಧ ಕೆಲಸ ಮಾಡುವ ಅಗತ್ಯವಿದೆ ಎಂದಿದ್ದಾರೆ. 

Udupi ಬರಗಾಲದಲ್ಲೂ ಎಂದೂ ಬತ್ತದ ಕೆರೆಯ ವಿಸ್ಮಯ!

U.N ನ ವಿಶ್ವ ಹವಾಮಾನ ಸಂಸ್ಥೆಯು ಬರವು 40 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚಿದೆ ಎಂದು ಹೇಳುತ್ತದೆ ಮತ್ತು ಈ ಪ್ರದೇಶದಲ್ಲಿ 50 ದಶಲಕ್ಷಕ್ಕೂ ಹೆಚ್ಚು ಜನರು ತೀವ್ರ ಆಹಾರ ಅಭದ್ರತೆಯಿಂದ ಬಳಲುತ್ತಿದ್ದಾರೆ ಎಂದು ಎಚ್ಚರಿಸಿದೆ.

ಇರಾಕ್‌ನಲ್ಲಿ ಒಣಗಿದ ಅತಿದೊಡ್ಡ ಜಲಾಶಯ, ಪತ್ತೆಯಾಯ್ತು 3,400 ವರ್ಷ ಹಳೆಯು ನಗರ!

2021 ರಲ್ಲೂ ಇದೇ ಸಮಯದಲ್ಲಿ ಇಲ್ಲಿ ಭೀಕರ ಬರಗಾಲ ಬಂದಿತ್ತು. ಆ ಸಮಯಲ್ಲಿ ಬರಗಾಲದಿಂದ ನೀರು, ಆಹಾರ ಸಿಗದೆ ಹಸಿವಿನಿಂದ ಜಿರಾಫೆಗಳು ಒಂದರ ಮೇಲೊಂದು ಬಿದ್ದು ಸತ್ತಿರುವ ಕಳೇಬರದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.