Asianet Suvarna News Asianet Suvarna News

Viral Video: ಗಣಿತದಲ್ಲಿ ಕಡಿಮೆ ಅಂಕ ನೀಡಿದ ಶಿಕ್ಷಕ, ಮರಕ್ಕೆ ಕಟ್ಟಿ ಬಾರಿಸಿದ ವಿದ್ಯಾರ್ಥಿಗಳು, ವಿಡಿಯೋ ವೈರಲ್‌!

ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (ಜೆಎಸಿ) ಶನಿವಾರದಂದು 9 ನೇ ತರಗತಿಯ ಪರೀಕ್ಷೆಯಲ್ಲಿ 32 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಗ್ರೇಡ್- ಡಿಡಿ (ಡಬಲ್ ಡಿ) ಅನ್ನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 

in Jharkhand Dumka Mathematics Teacher Tied to Tree Beaten by Students For Giving Poor Marks Vedio Viral san
Author
First Published Aug 31, 2022, 2:16 PM IST

ರಾಂಚಿ (ಆ. 31): ಶಾಲೆಗೆ ಹೋಗುವ ದಿನಗಳಲ್ಲಿ ನೀವು ನಿಮ್ಮ ಶಿಕ್ಷಕರಿಂದ ಹೇಗೆಲ್ಲಾ ಪೆಟ್ಟು ತಿಂದಿರಬಹುದು. ಹಿಂದೆಲ್ಲಾ ಟೀಚರ್‌ಗಳು ಪೆಟ್ಟು ಕೊಡೋ ರೀತಿ ಹೇಗಿರ್ತಿತ್ತು ಅಂದರೆ, 'ಎಲ್ಲವೂ ಅಲ್ಲೇ' ಆಗುತ್ತಿತ್ತು. ನೀವು, ನಿಮ್ಮ ಸಹಪಾಠಿಗಳು ಯಾರೂ ಇದಕ್ಕೆ ಹೊರತಲ್ಲ. ಶಾಲೆಗೆ ತರುವ ಬೆತ್ತಗಳು ಗಟ್ಟಿಮುಟ್ಟಾಗಿದೆಯೇ ಎನ್ನುವುದನ್ನು ಪುಂಡ ಹುಡುಗರನ್ನು ಬೆಂಡೆತ್ತುವ ಮೂಲಕ ಶಿಕ್ಷಕರು ಮಾಡುತ್ತಿದ್ದರು. ಆದರೆ, ಟೀಚರ್‌ಗೆ ಮಕ್ಕಳೆಲ್ಲಾ ಸೇರಿಕೊಂಡು ಹೊಡೆಯುವುದು ಎಲ್ಲಾದರೂ ಕೇಳಿದ್ದೀರಾ..! ಬಹುಶಃ ಆ ಕಾಲದಲ್ಲಿ ಇದರ ಯೋಚನೆ ಮಾಡಿದ್ರೂ ಮತ್ತೆರಡು ಪೆಟ್ಟು ಗ್ಯಾರಂಟಿ ಇರ್ತಿತ್ತು. ಆದೆ, ಜಾರ್ಖಂಡ್‌ನ ಧುಮ್ಕಾದಲ್ಲಿ ಒಂದು ಅಚ್ಚರಿಯ ಘಟನೆಯಾಗಿದೆ. ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎನ್ನುವ ಕಾರಣಕ್ಕೆ ಧುಮ್ಕಾ ಜಿಲ್ಲೆಯಲ್ಲಿನ ವಸತಿ ಶಾಲೆಯ ಗಣಿತ ಶಿಕ್ಷಕರುಗಳನ್ನು ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ಈ ಕುರಿತಾಗಿ ಯಾವುದೇ ಪೊಲೀಸ್‌ ಪ್ರಕರಣ ದಾಖಲಾಗಿಲ್ಲ. 'ನಾವು ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಮತ್ತು ಎಲ್ಲಾ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದ್ದೇವೆ. ನಾವು ಘಟನಾ ಸ್ಥಳವನ್ನು ತಲುಪಿದ ವೇಳೆ,  ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ನೀಡಲಾಗಿದ್ದು, ಈ ಕುರಿತಾಗಿ ಶಿಕ್ಷಕರನ್ನು ಕೇಳಿದಾಗ ಅವರು ಸಮರ್ಪಕವಾಗಿ ಉತ್ತರ ನೀಡಿಲ್ಲ. ಆ ಕಾರಣಕ್ಕಾಗಿ ಹೀಗೆ ಮಾಡಿದ್ದಾಗಿ ತಿಳಿಸಿದ್ದಾರೆ' ಎಂದು ಧುಮ್ಕಾದ ಗೋಪಿಕಂದರ್‌ನ ಬ್ಲಾಕ್‌ ಶಿಕ್ಷಣಾ ವಿಸ್ತರಣಾಧಿಕಾರಿ ಸುರೇಂದ್ರ ಹೆಬ್ರಾಮ್‌ ಹೇಳಿದ್ದಾರೆ.


ಜಿಲ್ಲೆಯ ಗೋಪಿಕಂದರ್ ಪೊಲೀಸ್ ಠಾಣೆ (GopiKandar Police Station) ವ್ಯಾಪ್ತಿಯ ಸರ್ಕಾರಿ ಪರಿಶಿಷ್ಟ ಪಂಗಡ ವಸತಿ ಶಾಲೆಯಲ್ಲಿ (SC/ST Resident School) ಸೋಮವಾರ ಈ ಘಟನೆ ನಡೆದಿದೆ. ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (ಜೆಎಸಿ) ಶನಿವಾರದಂದು 9 ನೇ ತರಗತಿಯ ಪರೀಕ್ಷೆಯಲ್ಲಿ 32 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಗ್ರೇಡ್- ಡಿಡಿ (ಡಬಲ್ ಡಿ) ಅನ್ನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಘಟನೆಯ ಬಗ್ಗೆ ಶಾಲಾ ಆಡಳಿತ ಮಂಡಳಿ ಯಾವುದೇ ಲಿಖಿತ ದೂರು (Police Complaint) ನೀಡದ ಕಾರಣ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಘಟನೆಯ ಪರಿಶೀಲನೆಯ ನಂತರ, ನಾನು ದೂರು ದಾಖಲಿಸಲು ಶಾಲಾ ಪ್ರಾಧಿಕಾರವನ್ನು ಕೇಳಿದೆ ಆದರೆ ಅದು ವಿದ್ಯಾರ್ಥಿಗಳ ವೃತ್ತಿಜೀವನವನ್ನು ಹಾಳುಮಾಡಬಹುದು ಎಂದು ಹೇಳಿ ಶಾಲೆ ನಿರಾಕರಿಸಿದೆ ಎಂದು ಗೋಪಿಕಂದರ್ ಪೊಲೀಸ್ ಠಾಣೆಯ ಪ್ರಭಾರಿ ನಿತ್ಯಾನಂದ ಭೋಕ್ತಾ (Nityanand Bhoktha) ತಿಳಿಸಿದ್ದಾರೆ. ಶಿಕ್ಷಕನನ್ನು ಸುಮನ್ ಕುಮಾರ್ ಎಂದು ಗುರುತಿಸಲಾಗಿದ್ದು, ಗುಮಾಸ್ತ ಸೋನೆರಾಮ್ ಚೌರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರೂ ಕೂಡ ಪೊಲೀಸರಿಗೆ ಲಿಖಿತ ದೂರನ್ನೂ ನೀಡಿಲ್ಲ ಎಂದು ಭೋಕ್ತಾ ಹೇಳಿದರು.

2 ವರ್ಷಗಳಿಂದ ಶಾರುಖ್‌ನ ಭಯದಲ್ಲೇ ಬದುಕಿದ್ದಳು ಅಂಕಿತಾ, ಶಿಕ್ಷೆಯ ಭಯವಿಲ್ಲದೆ ನಗುತ್ತಲೇ ಬಂದ ಆರೋಪಿ!

ಭೋಕ್ತಾ ಅವರೊಂದಿಗೆ ತನಿಖೆಗಾಗಿ ಶಾಲೆಗೆ ತೆರಳಿದ ಗೋಪಿಕಂದರ್ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ (ಬಿಡಿಒ) ಸುರೇಂದ್ರ ಹೆಬ್ರಾಮ್‌ ಮಾತನಾಡಿ, ವಸತಿ ಶಾಲೆಯಲ್ಲಿ 200 ವಿದ್ಯಾರ್ಥಿಗಳಿದ್ದು, ಘಟನೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಶಿಕ್ಷಕ ಈ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು ಆದರೆ ನಂತರ ಅವರಿಗೆ ಯಾವುದೇ ಮಾಹಿತಿ ನೀಡದೇ ಈ ಸ್ಥಾನದಿಂದ ತೆಗೆದುಹಾಕಲಾಯಿತು. ಇದು ಶಿಕ್ಷಕರ ನಡುವಿನ ಪೈಪೋಟಿಗೆ ಕಾರಣದಿಂದ ನಡೆದಿರಬಹುದು. ಶಾಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, 9 ಮತ್ತು 10 ನೇ ತರಗತಿಯ ತರಗತಿಗಳನ್ನು ಎರಡು ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ ಮತ್ತು ವಿದ್ಯಾರ್ಥಿಗಳನ್ನು ಅವರ ಮನೆಗೆ ಕಳುಹಿಸಲಾಗಿದೆ, ”ಎಂದು ಅವರು ಹೇಳಿದರು.

ಫೋನ್‌ನಲ್ಲಿ ಮಾತನಾಡಿಲ್ಲವೆಂದು ಪಿಯುಸಿ ವಿದ್ಯಾರ್ಥಿನಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

ಪ್ರಾಯೋಗಿಕ ಪರೀಕ್ಷೆಯಲ್ಲಿ ಶಿಕ್ಷಕರು ಕಡಿಮೆ ಅಂಕಗಳನ್ನು ನೀಡಿದ್ದಾರೆ, ಅದಕ್ಕಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಜೆಎಸಿಯ ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅಂಕಗಳನ್ನು ಅಪ್‌ಲೋಡ್ ಮಾಡಲು ಗುಮಾಸ್ತರು ಹೊಣೆಗಾರರಾಗಿದ್ದರು. "ಆದಾಗ್ಯೂ, ಶಾಲಾ ಆಡಳಿತವು ಪ್ರಾಯೋಗಿಕ ಪರೀಕ್ಷೆಗಳ ಅಂಕಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ದಿನಾಂಕವನ್ನು ತೋರಿಸಲು ವಿಫಲವಾಗಿದೆ. ವಿದ್ಯಾರ್ಥಿಗಳು ಥಿಯರಿ ಪೇಪರ್ ಅಥವಾ ಪ್ರಾಯೋಗಿಕವಾಗಿ ಅನುತ್ತೀರ್ಣರಾಗಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿದ್ಯಾರ್ಥಿಗಳು ಕೇವಲ ವದಂತಿಯನ್ನು ಆಧರಿಸಿ ಹೀಗೆ ಮಾಡಿರಬಹುದು ಎನ್ನಲಾಗಿದೆ.

Follow Us:
Download App:
  • android
  • ios