Asianet Suvarna News Asianet Suvarna News

ಹುಷಾರು..ಆಂಧ್ರಪ್ರದೇಶದಲ್ಲಿ ಕೋಳಿಗಳಿಗೆ ನೀಡ್ತಿದ್ದಾರೆ ವಯಾಗ್ರಾ!

ಆಂಧ್ರ ಪ್ರದೇಶದಲ್ಲಿ ಫೈಟರ್‌ ಕೋಳಿಗಳಿಗೆ ವಯಾಗ್ರಾ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸಂಕ್ರಾಂತಿ ಸಮಯದಲ್ಲಿ ಆಂಧ್ರ ಪ್ರದೇಶದಲ್ಲಿ ಕೋಳಿ ಅಂಕ ವ್ಯಾಪಕವಾಗಿ ನಡೆಯುತ್ತದೆ. ಅದಕ್ಕೆ ಕೋಳಿಗಳನ್ನು ಸಿದ್ಧ ಮಾಡುವ ನಿಟ್ಟಿನಲ್ಲಿ ವಯಾಗ್ರಾ ಡ್ರಗ್ಸ್‌ಗಳನ್ನು ನೀಡಲಾಗ್ತಿದೆ.
 

In Andhra Pradesh Breeders Are Giving Viagra To Their Fighter Cocks san
Author
First Published Jan 8, 2024, 6:21 PM IST

ಹೈದರಾಬಾದ್‌ (ಜ.8):  ಆಂಧ್ರಪ್ರದೇಶದ ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿ ಆಚರಣೆಯ ಪ್ರಮುಖ ಭಾಗವೆಂದರೆ ಕೋಳಿ ಅಂಕ ಅಥವಾ ಕೋಳಿ ಕಾದಾಟ. ಆಂಧ್ರ ಪ್ರದೇಶ ರಾಜ್ಯದ ಒಳನಾಡಿನಲ್ಲಿ ಈಗಾಗಲೇ ಸಾವಿರಾರು ಅಕ್ರಮ ಕೋಳುಅಂಕ ಅಖಾಡಗಳು ಹುಟ್ಟಿಕೊಂಡಿವೆ, ಅಲ್ಲಿ ತರಬೇತಿ ಪಡೆದ ಹುಂಜಗಳು ಸಾಯುವವರೆಗೂ ಹೋರಾಟ ನಡೆಸುತ್ತವೆ. ಆಂಧ್ರಪ್ರದೇಶದಲ್ಲಿ ಕೋಳಿಗಳಿಗೆ 'ರಾಣಿಖೇತ್‌' ಎನ್ನುವ ವೈರಲ್‌ ಕಾಯಿಲೆ ವ್ಯಾಪಕವಾಗಿದೆ. ಹಾಗಾಗಿ ಕೋಳಿ ಅಂಕದ ಚಾಂಪಿಯನ್‌ಗಳಿಗೆ ಈ ಬಾರಿ ತಮ್ಮ ಮೇಲಿನ ನಿರೀಕ್ಷೆಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ಈ ವೈರಲ್‌ ಕಾಯಿಲೆಯಿಂದಾಗಿ, ಕೋಳಿ ಅಂಕದ ಕೋಳಿ ಮಾಲೀಕರಿಗೆ ಆತಂಕ ತಂದಿದ್ದು, ಸಂಕ್ರಾಂತಿಯ ಕೋಳಿ ಅಂಕದ ಫೈಟ್‌ಗೆ ತಮ್ಮ ಕೋಳಿಗಳನ್ನು ಫಿಟ್‌ ಆಗಿ ಇರಿಸಲು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಈ ವರ್ಷದ ಸಂಕ್ರಾಂತಿ ಜನವರಿ 14, 5 ಹಾಗೂ 16 ರಂದು ನಿಗದಿಯಾಗಿದೆ. ಕೋಳಿ ಫೈಟ್‌ಗೆ ಇನ್ನೇನು ಕೆಲವೇ ದಿನಗಳಿರುವ ಕಾರಣ, ಕೋಳಿಗಳ ಮಾಲೀಕರು ತಮ್ಮ ಫೈಟರ್‌ಗಳನ್ನು ಫಿಟ್‌ ಆಗಿ ಇರಿಸಿಕೊಳ್ಳಲು ನಾಲ್ಕನೇ 1 ಭಾಗದಷ್ಟು ವಯಾಗ್ರಾ ಮಾತೆ, ಶಿಲಾಜಿತ್‌ ಹಾಗೂ ವಿಟಮಿನ್ಸ್‌ಗಳನ್ನು ನೀಡಲು ಆರಂಭಿಸಿದ್ದಾರೆ. ಫೈಟ್‌ ಆರಂಭವಾಗುವ ಕೆಲವೇ ಹೊತ್ತಿನ ಮುನ್ನ ಕೋಳಿಗಳ ಸಾಮರ್ಥ್ಯ ವೃದ್ಧಿ ಮಾಡುವ ನಿಟ್ಟಿನಲ್ಲ ಈ ಡ್ರಗ್ಸ್‌ಗಳನ್ನು ನೀಡಲಾಗುತ್ತಿದೆ.

ಈ ಡ್ರಗ್‌ಗಳು ಅಲ್ಪಾವಧಿಗೆ ಕೋಳಿಗಳ ಸಾಮರ್ಥ್ಯವನ್ನು ವೃದ್ಧಿ ಮಾಡುವುದು ಖಚಿತವಾದರೂ, ದೀರ್ಘಾವಧಿಯಲ್ಲಿ ಈ ಫಲಿತಾಂಶ ಹಾನಿಕಾರಕವಾಗಿದೆ.  ಅನೇಕ ತಳಿಗಾರರು ತಮ್ಮ ಕೋಳಿಗಳಿಗೆ ಕಾಮೋತ್ತೇಜಕ ಮಾತ್ರೆಗಳನ್ನು ಸಹ ತಿನ್ನಿಸುತ್ತಿದ್ದಾರೆ. ಈ ಮಾತ್ರೆಗಳು ಕೇವಲ ಮಾನವ ಬಳಕೆ ಮಾತ್ರವೇ ಯೋಗ್ಯವಾಗಿದೆ.

ಇದೇ ಮೊದಲ ಬಾರಿಗೆ ಪಕ್ಷಿಗಳಿಗೆ ಇಂತಹ ಹಾರ್ಮೋನ್-ಉತ್ತೇಜಕ ಔಷಧಿಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಈ ಔಷಧಿಗಳು ಫೈಟರ್‌ ಹುಂಜಗಳ ಹೋರಾಟದ ಉತ್ಸಾಹವನ್ನು ಹೆಚ್ಚಿಸುತ್ತದೆಯೇ ಅಥವಾ ಇಲ್ಲವೇ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.

ಕೋಳಿ ತೂಕದಲ್ಲಿ ಮೋಸ; ಚಿಕನ್ ಕಂಪನಿ ಕೆಲಸಗಾರನ ಮರಕ್ಕೆ ಕಟ್ಟಿಹಾಕಿದ ಮಾಲೀಕ! 

ಕೋಳಿಗಳಿಗೆ ವಯಾಗ್ರಾ ನೀಡುತ್ತಿರುವುದೇಕೆ?:  ಕೋಳಿ ಅಂಕ ನೋಡಲು ಬರುವವರು ಗೆಲ್ಲುವ ಹುಂಜಕ್ಕೆ ಬಾಜಿ ಕಟ್ಟುತ್ತಾರೆ. ಅಚ್ಚರಿ ಎಂದರೆ ನೂರಾರು ಕೋಟಿ ಬೆಟ್ಟಿಂಗ್ ದಂಧೆ ಇದರಲ್ಲಿ ನಡೆಯುತ್ತದೆ. ರಾಣಿಖೇತ್‌ನ ಕಾರಣದಿಂದಾಗಿ ಇಲ್ಲಿಯವರೆಗೂ ಉತ್ತಮ ಗುಣಮಟ್ಟದ ಫೈಟರ್‌ ಹುಂಜಗಳನ್ನು ಹುಡುಕಲು ಸಾಧ್ಯವಾಗಿಲ್ಲ ಎಂದು ಕೋಳಿ ಸಾಕಾಣೆ ಮಾಡುವವರು ಹೇಳಿದ್ದಾರೆ. ಕೋಳಿ ಅಂಕ ಸ್ಪರ್ಧೆಯಲ್ಲಿ ಕೋಳಿಯ ತೂಕ ಹಾಗೂ ಜಾಣತನ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ರಿಂಗ್‌ನಲ್ಲಿ ಕೋಳಿಗಳು ದೀರ್ಘಕಾಲದವರೆಗೂ ಕಾದಾಟವಾಡಬೇಕು ಎನ್ನುವ ನಿಟ್ಟಿನಲ್ಲಿ ಅವುಗಳಿಗೆ ವಯಾಗ್ರ ಮಾತ್ರೆಯನ್ನು ನೀಡುತ್ತಿದ್ದಾರೆ.

ಕೋಳಿ ಅಂಗಡಿಯಾದ ಪಾಕಿಸ್ತಾನದ ಪ್ರಸಿದ್ಧ ರಾಮ-ಸೀತೆ ದೇವಸ್ಥಾನ!

ಕೋಳಿಗೆ ಡ್ರಗ್ಸ್‌ ನೀಡುವುದು ಹಾನಿಕರ: ಹಾರ್ಮೋನ್-ಉತ್ತೇಜಿಸುವ ಔಷಧಿಗಳು ಕೋಳಿಗಳನ್ನು ದುರ್ಬಲಗೊಳಿಸಬಹುದು ಮತ್ತು ಅಂತಹ ಕೋಳಿಗಳನ್ನು ಮನುಷ್ಯರು ಸೇವಿಸಿದಾಗ ಹಾನಿಕಾರಕವಾಗಬಹುದಾದ ರೂಪಾಂತರಗಳಿಗೆ ಕಾರಣವಾಗಬಹುದು ಎಂದು ಪಶುವೈದ್ಯ ತಜ್ಞರು ಎಚ್ಚರಿಸಿದ್ದಾರೆ.
 

Follow Us:
Download App:
  • android
  • ios