Asianet Suvarna News Asianet Suvarna News

Bihar Budget 2022: ಸರ್ಕಾರಕ್ಕೆ ಶಾಕ್, ಏಕಾಏಕಿ ಕುಸಿದು ಬಿದ್ದ ಬಿಹಾರ ಡಿಸಿಎಂ!

* ಬಿಹಾರ ಬಜೆಟ್ ಮಂಡನೆಗೆ ಕ್ಷಣಗಣನೆ

* ಬಜೆಟ್ ಮಂಡನೆಗೂ ಮುನ್ನ ಸರ್ಕಾರಕ್ಕೆ ಶಾಕ್

* ವಿಧಾನಸಭೆ ಆವರಣದ ಹೊರಗೆ ಕುಸಿದು ಬಿದ್ದ ಡಿಸಿಎಂ ರೇಣುದೇವಿ

Bihar Budget 2022 Opposition uproar started Deputy CM Renu Devi fell from the stairs pod
Author
Bangalore, First Published Feb 28, 2022, 2:06 PM IST

ಪಾಟ್ನಾ(ಫೆ.28): ಸಿಎಂ ನಿತೀಶ್ ಕುಮಾರ್ ಸಂಪುಟದ ಹಣಕಾಸು ಸಚಿವ ತಾರ್ಕಿಶೋರ್ ಪ್ರಸಾದ್ ಅವರು ಸೋಮವಾರ ಮಧ್ಯಾಹ್ನ 2 ಗಂಟೆಗೆ ಬಿಹಾರ ವಿಧಾನಸಭೆಯಲ್ಲಿ 2022-23ನೇ ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ಶಾಕಿಂಗ್ ಸುದ್ದಿಯೊಂದು ವರದಿಯಾಗಿದೆ. ಬಿಹಾರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕಿ ರೇಣು ದೇವಿ ಅವರು ಇದ್ದಕ್ಕಿದ್ದಂತೆ ವಿಧಾನಸಭೆಯಲ್ಲಿ ಬಿದ್ದಿದ್ದಾರೆ. ಬಿದ್ದ ತಕ್ಷಣ ಅಲ್ಲಿದ್ದ ಎಲ್ಲ ಮುಖಂಡರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸಮತೋಲನ ಕಳೆದುಕೊಂಡ ಬಿಹಾರ ಡಿಸಿಎಂ

ಅಸಲಿಗೆ, ರಾಜ್ಯದ ಉಪ ಮುಖ್ಯಮಂತ್ರಿ ರೇಣುದೇವಿ ಅವರು ವಿಧಾನಸಭೆಯ ಮೆಟ್ಟಿಲು ಇಳಿಯುತ್ತಿದ್ದಾಗ ಏಕಾಏಕಿ ಬ್ಯಾಲೆನ್ಸ್ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಅದರ ನಂತರ ಅಲ್ಲಿದ್ದ ಅವರ ಪ್ರಸ್ತುತ ಸಿಬ್ಬಂದಿ ಉಪ ಮುಖ್ಯಮಂತ್ರಿಯನ್ನು ಎತ್ತಿಕೊಂಡರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.

Hijab Row: ಬುರ್ಖಾಧಾರಿ ಮಹಿಳೆಗೆ ಬ್ಯಾಂಕ್‌ ವಹಿವಾಟಿಗೆ ಅವಕಾಶ ನಿರಾಕರಣೆ

ತಾರ್ಕಿಶೋರ್ ಪ್ರಸಾದ್ ಬಿಹಾರದಲ್ಲಿ ಎರಡನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ

ಬಿಹಾರದ ನಿತೀಶ್ ಸರ್ಕಾರವು ಇಂದು 2022-23 ರ ಹಣಕಾಸು ವರ್ಷದ ಬಜೆಟ್ ಅನ್ನು (ಬಿಹಾರ ಬಜೆಟ್ 2022) ಮಂಡಿಸುತ್ತಿದೆ ಎಂಬುವುದು ಉಲ್ಲೇಖನೀಯ. ಬೆಳವಣಿಗೆಯನ್ನು ವೇಗಗೊಳಿಸಲು, ಸರ್ಕಾರದ ಬಜೆಟ್ ಮೂಲಸೌಕರ್ಯ, ಹೊಸ ಉದ್ಯೋಗಗಳು ಮತ್ತು ಕೈಗಾರಿಕೆಗಳ ಮೇಲೆ ಕೇಂದ್ರೀಕರಿಸಬಹುದು. ತಾರ್ಕಿಶೋರ್ ಪ್ರಸಾದ್ ಅವರು ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಎರಡನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿ ಬಜೆಟ್ ನಲ್ಲಿ 2.40 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಾಗುತ್ತಿದೆ.  ಅಧಿವೇಶನದ ಮೊದಲ ದಿನವೇ ಹಣಕಾಸು ಸಚಿವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆಯ ವರದಿಯನ್ನು ಮಂಡಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವ ತಾರ್ಕಿಶೋರ್ ಪ್ರಸಾದ್, ಕೊರೊನಾ ಸೋಂಕಿನ ಹೊರತಾಗಿಯೂ ರಾಜ್ಯವು ಉತ್ತಮ ಬೆಳವಣಿಗೆ ದರವನ್ನು ಸಾಧಿಸಿದೆ ಎಂದು ಹೇಳಿದ್ದಾರೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಬಿಹಾರ ಇತರ ರಾಜ್ಯಗಳಿಗಿಂತ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.
 

Follow Us:
Download App:
  • android
  • ios