Asianet Suvarna News Asianet Suvarna News

72 ವರ್ಷದ ವೃದ್ಧನಿಗೆ ಕಚ್ಚಿದ ರಾಟ್‌ವಿಲ್ಲರ್: 13 ವರ್ಷದ ನಂತರ ನಾಯಿ ಮಾಲೀಕನಿಗೆ ಜೈಲು

 72 ವರ್ಷದ ವೃದ್ಧನ ಮೇಲೆ ರಾಟ್‌ ವಿಲ್ಲರ್ ತಳಿಯ ಶ್ವಾನ ದಾಳಿ ಮಾಡಿ ಅವರನ್ನು ಕಚ್ಚಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನದ ಮಾಲೀಕ ಉದ್ಯಮಿಯೂ ಆಗಿರುವ 44 ವರ್ಷದ ಸೈರಸ್ ಪಾರ್ಸಿ ಹೊರಮುಸ್ಜಿ ಎಂಬುವವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.  

In 2010 Rottweiler bites 72 year old man now Mumbai magistrate court sentenced dog owner 3 months jail akb
Author
First Published Feb 6, 2023, 1:37 PM IST

ಮುಂಬೈ:  72 ವರ್ಷದ ವೃದ್ಧನ ಮೇಲೆ ರಾಟ್‌ ವಿಲ್ಲರ್ ತಳಿಯ ಶ್ವಾನ ದಾಳಿ ಮಾಡಿ ಅವರನ್ನು ಕಚ್ಚಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನದ ಮಾಲೀಕ ಉದ್ಯಮಿಯೂ ಆಗಿರುವ 44 ವರ್ಷದ ಸೈರಸ್ ಪಾರ್ಸಿ ಹೊರಮುಸ್ಜಿ ಎಂಬುವವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.  2010ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ತೀರ್ಪು ನೀಡಿದೆ.  ಸಂತಾಕ್ರೂಜ್‌ನಲ್ಲಿ ವಾಸವಿರುವ ಉದ್ಯಮಿ ಸೈರಸ್ ಪಾರ್ಸಿ ಹೊರಮುಸ್ಜಿ  ಎಂಬುವವರ ರಾಟ್‌ ವಿಲ್ಲರ್  ನಾಯಿ 72 ವರ್ಷದ ವೃದ್ಧ ಹಾಗೂ ಉದ್ಯಮಿಯ ಸಂಬಂಧಿಯೂ ಆಗಿರುವ ವ್ಯಕ್ತಿಗೆ ಮೂರು ಬಾರಿ ಕಚ್ಚಿದ್ದು, ಇದರ ಪರಿಣಾಮ ಅವರ ಕಾಲು ಹಾಗೂ ತೋಳುಗಳಲ್ಲಿ ಗಾಯವಾಗಿ ರಕ್ತಸ್ರಾವ ಶುರುವಾಗಿತ್ತು. ಈ ಪ್ರಕರಣದಲ್ಲಿ ಉದ್ಯಮಿ  ಸೈರಸ್ ಪಾರ್ಸಿ ಹೊರಮುಸ್ಜಿ ತಪ್ಪಿತಸ್ಥ ಎಂದು ಕಂಡುಕೊಂಡ ಕೋರ್ಟ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 

ಈ ಉದ್ಯಮಿ ಹಾಗೂ ಈತನ ಸಂಬಂಧಿ ಬಹಳ ದೀರ್ಘ ಕಾಲದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರಸ್ತೆಗೆ ಬಂದು ವಾಗ್ವಾದ ಮಾಡಲು ಶುರು ಮಾಡಿದ್ದರು. ಈ ವೇಳೆ ಉದ್ಯಮಿಯ ಶ್ವಾನ (Dog) ವೃದ್ಧ ಸಂಬಂಧಿಯ ಮೇಲೆ ದಾಳಿ ಮಾಡಿತ್ತು.  ತನ್ನ ಶ್ವಾನದ ಆಕ್ರಮಣಕಾರಿ ಪೃವೃತ್ತಿಯ ಬಗ್ಗೆ  ಉದ್ಯಮಿಗೆ ತಿಳಿದಿದ್ದು, ಕೂಡ ಆತ ನಿರ್ಲಕ್ಷ್ಯ ವಹಿಸಿದ್ದ.  ಶ್ವಾನದಿಂದ ಇತರರನ್ನು ರಕ್ಷಿಸುವುದು ಶ್ವಾನದ ಮಾಲೀಕನ (Dog owner) ಕರ್ತವ್ಯ ಎಂದು ಹೇಳಿದ ಕೋರ್ಟ್,  ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ವ್ಯಕ್ತಿಗೆ 44 ವರ್ಷದ ಉದ್ಯಮಿ  ಸೈರಸ್ ಪಾರ್ಸಿ ಹೊರಮುಸ್ಜಿ ಎಂಬಾತನಿಗೆ 3 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. 

ಶಿವಮೊಗ್ಗದಲ್ಲಿ ನಾಯಿ ದಾಳಿಗೆ ನಾಲ್ಕು ವರ್ಷದ ಬಾಲಕ ಸಾವು

ಘಟನೆಯ ಹಿನ್ನೆಲೆ

2010ರ ಮೇ.30 ರಂದು ಇಬ್ಬರು ವ್ಯಕ್ತಿಗಳು, ಸೈರಸ್ ಪಾರ್ಸಿ ಹೊರಮುಸ್ಜಿ  ಅವರ ಕಾರಿನ ಮುಂದೆ  ನಿಂತಿದ್ದರು. ಈ ಕಾರಿನಲ್ಲಿ ರಾಟ್ ವಿಲ್ಲರ್ ಹಾಗೂ ಲ್ಯಾಬ್ರಡರ್ ಶ್ವಾನಗಳು ಕಾರಿನಲ್ಲಿದ್ದು, ಬೊಗಳಲು ಶುರು ಮಾಡಿದ್ದವು. ಈ ವೇಳೆ ಸೈರಸ್ ಪಾರ್ಸಿ ಹೊರಮುಸ್ಜಿ (Cyrus Parsi Horamusji)ಕಾರಿನ ಬಾಗಿಲನ್ನು ತೆರೆದು ಶ್ವಾನ ಹೊರಗೆ ಹೋಗಲು ಬಿಟ್ಟಿದ್ದರು. ಈ ವೇಳೆ ಹೊರಬಂದ ರಾಟ್ ವಿಲ್ಲರ್ ಶ್ವಾನ 70 ವರ್ಷದ ಕೆರ್ಸಿ ಇರಾನಿ ಅವರ ಮೇಲೆ ದಾಳಿ ಮಾಡಿ ಮೂರು ಕಡೆ ಕಚ್ಚಿ ಗಾಯಗೊಳಿಸಿತ್ತು. 

ನಾಯಿ ದಾಳಿಗೊಳಗಾದವರ ವಯಸ್ಸು 72 ವರ್ಷ ಅಂತಹ ಇಳಿ ವಯಸ್ಸಿನಲ್ಲಿ ಆಕ್ರಮಣಕಾರಿ ಹಾಗೂ ಬಲಿಷ್ಠವಾದ ನಾಯಿಯೊಂದು ಅವರ ಮೇಲೆ ದಾಳಿ ಮಾಡಿ ಮೂರು ಕಡೆ ಗಾಯಗೊಳಿಸಿದೆ. ಬುದ್ದಿ ಇರುವ ಬೆಳೆದು ನಿಂತ ವ್ಯಕ್ತಿಯೊಬ್ಬ ಇಂತಹ ಆಕ್ರಮಣಕಾರಿ ನಾಯಿಯನ್ನು ಸಾರ್ವಜನಿಕ ಸ್ಥಳಕ್ಕೆ ತೆಗೆದುಕೊಂಡು ಹೋಗುವಾಗ ಅದು ಬೇರೆಯವರ ಮೇಲೆ ದಾಳಿ ಮಾಡದಂತೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು.  ಒಂದು ವೇಳೆ ಅಗತ್ಯ ಕ್ರಮ ಕೈಗೊಂಡಿಲ್ಲದಲ್ಲಿ ಇದು ಸಮಾಜಕ್ಕೆ ಮಾರಕ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಆತನಿಗೆ ಶಿಕ್ಷೆಯಾಗಬೇಕು ಎಂದು ಕೋರ್ಟ್ ಹೇಳಿದೆ. 

ನಾಯಿ ದಾಳಿಯ ಮತ್ತೊಂದು ಭಯಾನಕ ವಿಡಿಯೋ ವೈರಲ್: ಹಸುವನ್ನು ಕಚ್ಚಿ ಎಳೆದಾಡಿದ ಪಿಟ್ಬುಲ್ ಶ್ವಾನ

Follow Us:
Download App:
  • android
  • ios