ಹವಾಮಾನ ವೈಪರಿತ್ಯದಿಂದ ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಮೋಚಾ ಸೈಕ್ಲೋನ್ ಭೀತಿ ಆವರಿಸಿದೆ. ಇದೀಗ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನವದೆಹಲಿ(ಮೇ.03): ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಮಳೆ ಸುರಿಯುತ್ತಿದೆ. ಕೆಲವೆಡೆ ಮಳೆ ಅಬ್ಬರದಿಂದ ಪ್ರವಾಹ ಸೃಷ್ಟಿಯಾಗಿದೆ. ಹವಾಮಾನ ವೈಪರಿತ್ಯಕ್ಕೆ ಹಲವು ಭಾಗಗಳು ನಲುಗಿದೆ. ಇದರ ನಡುವೆ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ನೀಡಿದೆ. ಮುಂದಿನ 48 ಗಂಟೆಗಳಲ್ಲಿ ಮೋಚಾ ಚಂಡಮಾರುತ ಅಪ್ಪಳಿಸಲಿದೆ ಎಂದಿದೆ. ಮೇ.6 ರಂದು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುತ್ತಿದೆ. ಮೇ.7 ರಂದು ಬಂಗಾಳ ಕೊಲ್ಲಿ ಹಾಗೂ ಇತರ ಭಾಗಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ. ಹೀಗಾಗಿ ಮುಂದಿನ 48 ಗಂಟೆಗಳಲ್ಲಿ ಭಾರತದ ಕೆಲ ಭಾಗದಲ್ಲಿ ಮೋಚಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದಿದೆ.
ಮೇ.8 ರಂದು ಆಗ್ನೇಯ ಬಂಗಾಳ ಕೊಲ್ಲಿ ವಾಯುಭಾರ ಕುಸಿತವಾಗಲಿದೆ. ಹೀಗಾಗಿ ಚಂಡಮಾರುತ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗುವ ಸಾಧ್ಯತೆ ಇದೆ. ಉತ್ತರ ಬಂಗಾಳ ಕೊಲ್ಲಿಯಿಂದ ಕೇಂದ್ರ ಬಂಗಾಳ ಕೊಲ್ಲಿ ಕಡೆ ಚಲಿಸುವ ವೇಳೆ ಚಂಡಮಾರುತ ತೀವ್ರಗೊಳ್ಳಲಿದೆ. ಸೈಕ್ಲೋನ್ ಮೋಚಾ ಭಾರತದ ಹಲವು ಕರಾವಳಿ ಭಾಗದಲ್ಲಿ ಪರಿಣಾಮಬೀರಲಿದೆ ಎಂದು ಐಎಂಡಿ ಎಚ್ಚರಿಸಿದೆ. ಇದೇ ವೇಳೆ ಮೀನುಗಾರರು, ಸಣ್ಣ ದೋಣಿ, ಹಡಗಿನ ಮೂಲಕ ಮೀನು ಹಿಡಿಯುವ ಕೆಲಸಾಗರರು ದಕ್ಷಿಣ ಬಂಗಾಳ ಕೊಲ್ಲಿ ಸಮುದ್ರ ತೀರಕ್ಕಿಳಿಯದಂತೆ ಎಚ್ಚರಿಸಿದೆ.
ಬೀದರ್‌ನಲ್ಲಿ ಭಾರಿ ಮಳೆ: ಹಳ್ಳ ದಾಟಲು ಹೋಗಿ ಮಕ್ಕಳು ಸೇರಿ ಕುಟುಂಬದ ಮೂವರು ನೀರುಪಾಲು
ಮೇ.7ರಿಂದ ಸೈಕ್ಲೋನ್ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಈಗಾಗಗಲೇ ಆಳ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿರುವವರು ಸುರಕ್ಷಿತವಾಗಿ ಹಿಂತಿರುಗುವಂತೆ ಸೂಚೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಬೆನ್ನಲ್ಲೇ ಒಡಿಶಾ ಅಲರ್ಟ್ ಆಗಿದೆ. ಒಡಿಶಾದ ಕರಾವಳಿ ತೀರದಲ್ಲಿನ 18 ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ನೇಮಿಸಿದೆ. ಈ ಮೂಲಕ ಪ್ರಾಣ ಹಾನಿ ತಪ್ಪಿಸಲು ಮಹತ್ವದ ಕ್ರಮ ಕೈಗೊಂಡಿದೆ.
ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಮೇ 3 ರಿಂದ 7 ರವರೆಗೆ ಮೋಡ ಕವಿದ ವಾತಾವರಣವಿದ್ದು, ಸಾಧಾರಣದಿಂದ ಭಾರಿ ಮಳೆ ಬರುವ ಸಂಭವವಿದೆ. ಈಗಾಗಲೇ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರು, ಮೈಸೂರು, ಕೊಡಗು ಸೇರಿದಂತೆ ಹಲವು ಭಾಗದಲ್ಲಿ ಭಾರಿ ಮಳೆಯಾಗಿದೆ.ಆದರೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಸೇರಿದಂತೆ ಹಲವುಭಾಗದಲ್ಲಿ ಇನ್ನೂ ಮಳೆಯಾಗಿಲ್ಲ.
ಬೀದರ್ ಮುಂದುವರಿದ ಭಾರಿ ಮಳೆ: ಸಿಡಿಲಿಗೆ 6 ಜಾನುವಾರು ಬಲಿ
ನಿಗದಿತ ದಿನಾಂಕಕ್ಕಿಂತ ಆರು ದಿನಗಳ ಮೊದಲೇ ಮುಂಗಾರು ಮಳೆ ಹಿಗ್ಗಿದ್ದು, ಇಡೀ ದೇಶವನ್ನೇ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ‘ಈ ಹಿಂದೆ ಅಂದಾಜಿಸಿದಂತೆ ಜು. 8ರ ಬದಲು ಆರು ದಿನಗಳ ಮೊದಲೇ ನೈಋುತ್ಯ ಮಾನ್ಸೂನ್ ಶನಿವಾರ ಇಡೀ ದೇಶವನ್ನೇ ವ್ಯಾಪಿಸಿದೆ’ ಎಂದು ಐಎಂಡಿ ತಿಳಿಸಿದೆ. ಈ ಹಿಂದೆಯೂ ಕೂಡಾ ಜೂ.1 ರಂದು ಕೇರಳವನ್ನು ನೈಋುತ್ಯ ಮಾನ್ಸೂನ್ ಪ್ರವೇಶಿಸಲಿದೆ ಎಂದು ಐಎಂಡಿ ಅಂದಾಜಿಸಿತ್ತು. ಆದರೆ ಅದಕ್ಕೂ 3 ದಿನ ಮೊದಲೇ ಮೇ. 29 ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶವಾಗಿತ್ತು. ನೈಋುತ್ಯ ಮಾನ್ಸೂನ್ ಪ್ರವೇಶದೊಂದಿಗೆ ಉಷ್ಣ ಅಲೆಯಲ್ಲಿ ತತ್ತರಿಸುತ್ತಿದ್ದ ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಮಳೆ ಆರಂಭವಾಗಿದೆ.
ಕೃಷಿಯಾಧಾರಿತ ದೇಶವಾದ ಭಾರತಕ್ಕೆ ನೈಋುತ್ಯ ಮುಂಗಾರು ಮಳೆಯು ಅತ್ಯಂತ ಪ್ರಮುಖವಾಗಿದೆ. ಈಗಾಗಲೇ ದೇಶವು ಶೇ. 8ರಷ್ಟುಮಳೆಯ ಕೊರತೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮಾನ್ಸೂನ್ ಮಳೆಯು ಇನ್ನಷ್ಟುಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಹಮಾಮಾನ ತಜ್ಞರು ಜುಲೈನಲ್ಲಿ ಉತ್ತಮ ಮಳೆಯಾಗಬಹುದು ಎಂದು ನಿರೀಕ್ಷಿಸಿದ್ದಾರೆ.
