ಬೀದರ್ ಮುಂದುವರಿದ ಭಾರಿ ಮಳೆ: ಸಿಡಿಲಿಗೆ 6 ಜಾನುವಾರು ಬಲಿ
ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಅಪಾರ ಬೆಳೆ ಹಾನಿಯಾಗಿದ್ದು ನಾಲ್ಕು ಎಮ್ಮೆ, 5 ಎತ್ತುಗಳು ಸಾವೀಗಿಡಾಗಿವೆ. ಶುಕ್ರವಾರ ಬೆಳಗ್ಗೆಯಿಂದ ಸಣ್ಣ ಪ್ರಮಾಣದಲ್ಲಿ ಜಿನುಗುತ್ತಿದ್ದ ಮಳೆ ರಾತ್ರಿ 8ರ ನಂತರ ಔರಾದ್ನಲ್ಲಿ ಭೋರ್ಗರೆದರೆ ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ ಹಾಗೂ ಬೀದರ್ನಲ್ಲಿ ಗುಡುಗು ಮಿಂಚಿನ ಸದ್ದು ತಡರಾತ್ರಿ ಭಾರಿ ಮಳೆಯಾಗುವ ಸಾಧ್ಯತೆಗಳನ್ನು ಮುಂದಿಟ್ಟಿದೆ.
ಬೀದರ್ (ಏ.29): ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಅಪಾರ ಬೆಳೆ ಹಾನಿಯಾಗಿದ್ದು ನಾಲ್ಕು ಎಮ್ಮೆ, 5 ಎತ್ತುಗಳು ಸಾವೀಗಿಡಾಗಿವೆ.
ಶುಕ್ರವಾರ ಬೆಳಗ್ಗೆಯಿಂದ ಸಣ್ಣ ಪ್ರಮಾಣದಲ್ಲಿ ಜಿನುಗುತ್ತಿದ್ದ ಮಳೆ ರಾತ್ರಿ 8ರ ನಂತರ ಔರಾದ್ನಲ್ಲಿ ಭೋರ್ಗರೆದರೆ ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ ಹಾಗೂ ಬೀದರ್ನಲ್ಲಿ ಗುಡುಗು ಮಿಂಚಿನ ಸದ್ದು ತಡರಾತ್ರಿ ಭಾರಿ ಮಳೆಯಾಗುವ ಸಾಧ್ಯತೆಗಳನ್ನು ಮುಂದಿಟ್ಟಿದೆ.
ರಾಯಚೂರು ಜಿಲ್ಲಾದ್ಯಂತ ಗುಡುಗು-ಮಿಂಚಿನ ಭಾರೀ ಮಳೆ
ಆಲಿಕಲ್ಲು ಸಹಿತ ಮಳೆ ರೈತರಿಗೆ ಕಣ್ಣೀರು ತರಿಸುವಂತೆ ಮಾಡಿವೆ. ಹೊಲಗದ್ದೆ ತೋಟಗಳಲ್ಲಿ ಬೆಳೆಗಳು ಮಳೆಯಿಂದಾಗಿ ನೆಲಕಚ್ಚಿವೆ. ಕಳೆದ ಒಂದೆರಡು ತಿಂಗಳುಗಳ ಹಿಂದಷ್ಟೇ ಭಾರಿ ಆಲಿಕಲ್ಲು ಮಳೆಯಿಂದ ಅಪಾರ ಹಾನಿ ಅನುಭವಿಸಿದ್ದ ರೈತನಿಗೆ ಮತ್ತೊಂದು ಬರೆ ಬಿದ್ದಂತಾಗಿದೆ. ಆ ಹಾನಿಯ ಪರಿಹಾರದ ಕುರಿತು ಸರ್ಕಾರದ ಮಟ್ಟದಲ್ಲಿ ಇನ್ನೂ ಪರಿಹಾರ ಬಿಡುಗಡೆಯ ಕ್ರಮಗಳಾಗಿಲ್ಲ ಅದಾಗಲೇ ಮತ್ತೊಂದು ಹಾನಿ ರೈತನನ್ನು ಕಂಗೆಡೆಸಿದೆ.
ಜಿಲ್ಲೆಯಲ್ಲಿ 52.16ಮಿಮೀ ಮಳೆಯಾಗಿದ್ದು ಕಮಠಾಣಾ ಹೋಬಳಿಯಲ್ಲಿ ದಾಖಲೆಯ 123.2ಮಿಮೀ ಮಳೆಯಾಗಿದೆ. ಔರಾದ್ ತಾಲೂಕಿನಲ್ಲಿ 35.37ಮಿಮೀ, ಬೀದರ್ ತಾಲೂಕಿನಲ್ಲಿ 58.02ಮಿಮೀ, ಭಾಲ್ಕಿ 72.97ಮಿಮೀ, ಬಸವಕಲ್ಯಾಣ 13.92ಮಿಮೀ, ಹುಮನಾಬಾದ್ 48.4ಮಿಮೀ, ಕಮಲನಗರ 59.1ಮಿಮೀ ಹಾಗೂ ಹುಲಸೂರು ತಾಲೂಕಿನಲ್ಲಿ 72.2ಮಿಮೀ ಮಳೆಯಾಗಿದೆ.
ಮಳೆಯಿಂದಾಗಿ ಬೆಳೆ ಹಾನಿಯ ಸರ್ವೆಗೆ ಅಧಿಕಾರಿಗಳಿಗೆ ಸೂಚಿಸಿದ್ದು ಶೀಘ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.
ಹುಲಸೂರ: ಸಿಡಿಲಿಗೆ 6 ಜಾನುವಾರುಗಳು ಬಲಿ
ಬಸವಕಲ್ಯಾಣ: ಗುರುವಾರ ಮಧ್ಯಾಹ್ನ ಗುಡುಗು ಮಿಂಚಿನಿಂದ ಬಿದ್ದ ಮಳೆಯ ಮಧ್ಯದಲ್ಲಿ ಸಿಡಿಲು ಬಡಿತದಿಂದ ಹುಲಸೂರ ತಾಲೂಕಿನಲ್ಲಿ ಸುಮಾರು 6 ಜಾನುವಾರುಗಳು ಸಾವನಪ್ಪಿವೆ.
ಶುಕ್ರವಾರ ಬೆಳಿಗ್ಗೆ ವರೆಗೆ ಬಿದ್ದ ಆಲಿಕಲ್ಲು ಮಳೆ ಬಿರುಗಾಳಿಯಿಂದ ಅನೇಕ ಮರಗಳು ನೆಲಕ್ಕುರುಳಿವೆ ಭಾರಿ ಮಳೆಯಿಂದ ಶಂಕರ ಮಾಧರಾವ ಬಡ ರೈತನ 1 ಎಕರೆ ಉಳ್ಳಾಗಡ್ಡೆ ನೀರಿನಲ್ಲಿ ಮುಳುಗಿದರೆ ಹುಲಸೂರಿನ ಬಾಬುರಾವ ಖುರೇಷಿ ಎಮ್ಮೆ, ಮೀರಖಲ ಗ್ರಾಮದ ನವನಾಥ ಶಿಂದೆ ಅವರ ಹಸು, ಮೇಹಕರ ಗ್ರಾಮದಲ್ಲಿ 1 ಮೇಕೆ, ಹಲಸಿತುಗಾಂವನಲ್ಲಿ 2 ಎತ್ತು, ಅಳವಾಯಿ ಗ್ರಾಮದಲ್ಲಿ 1 ಎಮ್ಮೆ ಬಲಿಯಾಗಿದ್ದು ರೈತರು ಸಂಕಟಕ್ಕೆ ಸಿಲುಕಿದ್ದಾರೆ.
ರಾಜ್ಯದಲ್ಲಿ ಮಳೆ: ಚಿಕ್ಕಮಗಳೂರಲ್ಲಿ ಉಷ್ಣಾಂಶ ದಿಢೀರ್ 10 ಡಿಗ್ರಿ ಕುಸಿತ..!
ತಾಲೂಕು ಆಡಳಿತ ಸಂಕಷ್ಟಕ್ಕಿಡಾದ ರೈತರ ಮನೆಗೆ ಭೇಟಿ ನೀಡಿ ಆದ ಹಾನಿಯನ್ನು ಅಂದಾಜಿಸಬೇಕಾಗಿದೆ ಇದೇ ರೀತಿ ಜಿಲ್ಲೆಯಾದ್ಯಂತ ಮಳೆಯಾದರೆ, ಹುಲಸೂರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ ರೈತರ ಹೊಲಗಳಿಗೆ ಆದ ಹಾನಿ ಸಹ ಸಮೀಕ್ಷೆ ಮಾಡಿ ವರದಿ ನೀಡಬೇಕಾಗಿದೆ ಎಂದು ಜನರ ಅನಿಸಿಕೆಯಾಗಿದೆ.