ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಹವಾಮಾನ ವೈಪರಿತ್ಯ ಕಾರಣದಿಂದ ಸತತ ಮಳೆ 5 ದಿನ ಮಳೆ ಸಂಭವ, ಉತ್ತರದಲ್ಲಿ ಆಲಿಕಲ್ಲು ಮಳೆ
ನವದೆಹಲಿ(ಏ.19): ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈಗಾಗಲೇ ಭಾರಿ ಮಳೆಯಾಗಿದೆ. ಇದೀಗ ಈ ಮಳೆ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ ಎಂದು ಹವಮಾನ ಇಲಾಖೆ ಸೂಚಿಸಿದೆ. ಕರ್ನಾಟಕ ಸರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಏಪ್ರಿಲ್ 21ರ ವರೆಗೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಆಲಿ ಕಲ್ಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನು ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಹೇಳಿದೆ.
ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ: ಬಿಬಿಎಂಪಿ ವಿರುದ್ಧ ಜನಾಕ್ರೋಶ!
ಪಂಜಾಬ್ ಹರಿಯಾಣ, ದೆಹಲಿ ಸೇರಿದಂತೆ ಈ ಭಾಗಗಳಲ್ಲಿ ಲಘು ಮಳೆ ಸಂಭವವಿದೆ ಎಂದು ಹೇಳಿದೆ. ಆದರೆ ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಅಸ್ಸಾಂ, ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಆರೇಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಬಂಗಾರಪೇಟೆಯಲ್ಲಿ ಈಗಾಗಲೇ ಆಲಿಕಲ್ಲು ಮಳೆ, ಕೃಷಿ ನಷ್ಟ
ಬಂಗಾರಪೇಟೆ ತಾಲೂಕಿನಲ್ಲಿ ಸೋಮವಾರ ಸಂಜೆ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ರೈತರು ಬೆಳೆದ ಮಾವು ಸೇರಿದಂತೆ ಹಲವಾರು ವಾಣಿಜ್ಯ ಬೆಳೆಗಳು ನಾಶವಾಗಿದ್ದು, ರೈತರಿಗೆ ಲಕ್ಷಾಂತರ ರೂ ನಷ್ಟಉಂಟಾಗಿದೆ. ತಾಲೂಕುನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲಿನ ನಡುವೆ ಸಂಜೆಯಾದರೆ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಮೊದಲ ದಿನ ಅಲಿಕಲ್ಲಿನಿಂದ ಸುರಿದ ಮಳೆಗೆ ಟೊಮೆಟೋ, ಎಲೆಕೋಸು, ಚೆಂಡೂವು, ಹಿಪ್ಪುನೇರಳೆ ಸೇರಿ ವಿವಿಧ ತರಕಾರಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಸೋಮವಾರ ಸಂಜೆ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ತಾಲ್ಲೂಕಿನಲ್ಲಿ 13.54 ಹೆಕ್ಟರ್ ಪ್ರದೇಶದಲ್ಲಿ ಬೆಳೆಗಳು ನಾಶವಾಗಿದೆ.
ಕರ್ನಾಟಕದ ಹಲವೆಡೆ ವರುಣನ ಅಬ್ಬರ: ನಾಲ್ಕು ಮಂದಿ ಬಲಿ
ಬೂದಿಕೋಟೆ, ಕಾಮಸಮುದ್ರ ಹೋಗಳಿಗಳಲ್ಲಿ ಆಲಿಕಲ್ಲು ಮಳೆ ಹೆಚ್ಚಾಗಿ ಬಿದ್ದಿದ್ದು, ಬೂದಿಕೋಟೆ ಗ್ರಾಮದ ರೈತ ಚಂದ್ರಕುಮಾರ್ 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮೆಟೋ ನಾಶವಾಗಿದೆ. ಈಗಷ್ಟೆತೋಟದಲ್ಲಿ ಮೊದಲ ಕೊಯ್ಲು ಆರಂಭವಾಗಿದ್ದು, ಆಲಿಕಲ್ಲು ಬಿದ್ದು, ಕಾಯಿಗಳು ಸಂಪೂರ್ಣವಾಗಿ ಹಾನಿಯಾಗಿವೆ. ಮಾಗೊಂದಿ ಗ್ರಾಮದ ಬಳಿ ಹೂವಿನ ತೋಟಕ್ಕೆ ಅಳವಡಿಸಿದ್ದ ಮೆಸ್ ಗಾಳಿಯ ರಭಸಕ್ಕೆ ನೆಲಕ್ಕೆ ಉರುಳಿದೆ. ಬೆಳೆ ನಾಶವಾದ ಸ್ಥಳಗಳಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ನಷ್ಟದ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅಬ್ಬರ ತುಸು ಇಳಿಕೆ
ಬೆಂಗಳೂರಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ನಗರದ ಕೆಲ ಭಾಗದಲ್ಲಿ ಮಳೆಯಾಗಿದೆ. ಆದರೆ ಸೋಮವಾರ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ವೇಗವಾಗಿ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ಭಾನುವಾರ ಯಲಹಂಕ, ಮಹಾದೇವಪುರ ಭಾಗಗಳನ್ನು ಹೊರತು ಪಡಿಸಿ ಉಳಿದೆಡೆ ತುಂತುರು ಮತ್ತು ಹಗುರ ಮಳೆಯಾಗಿದೆ. ರಾಜರಾಜೇಶ್ವರಿ ನಗರ, ಶೆಟ್ಟಿಹಳ್ಳಿ, ನಾಗಪುರ, ಸಂಪಂಗಿರಾಮನಗರ, ಈಜಿಪುರ, ನಂದಿನಿ ಬಡಾವಣೆ, ದಾಸರಹಳ್ಳಿ - ಪೀಣ್ಯ ಕೈಗಾರಿಕಾ ಪ್ರದೇಶ, ಕೊಟ್ಟಿಗೆಪಾಳ್ಯ, ಗಾಳಿ ಆಂಜನೇಯ ದೇವಾಲಯ, ಚಾಮರಾಜ ಪೇಟೆ, ಲಕ್ಕಸಂದ್ರ ಭಾಗದಲ್ಲಿ ಮಳೆಯಾಗಿದೆ.