*ಮಳೆ ನಿಂತರು ಮಳೆಯ ಎಫೆಕ್ಟ್ ನಿಲ್ಲದೆ ಸಾರ್ವಜನಿಕರ ಪರದಾಟ *ನಿನ್ನೆ ಸುರಿದ ಮಳೆಗೆ ಮನೆಯ‌ ಮೋಟರ್ ಹಾಗೂ ಸಂಪುಗಳಲ್ಲಿ ನಿಂತ ಕೊಳಚೆ ನೀರು *ಕಾಮಾಗಾರಿಗಾಗಿ ಒಡೆದಿದ್ದ ರಾಜಕಾಲುವೆ ತಡೆಗೋಡೆಯಿಂದ ಹೊರ ಬಂದ ನೀರು 

ಬೆಂಗಳೂರು (ಏ. 17): ರಾಜಧಾನಿ ಬೆಂಗಳೂರಿನಲ್ಲಿ (Bengaluru)ಶನಿವಾರ ರಾತ್ರಿ ಸತತ ಎರಡು ಗಂಟೆ ಸುರಿದ ಮುಂಗಾರು ಪೂರ್ವ ಭಾರೀ ಮಳೆಯಿಂದಾಗಿ ನಗರದ ವಿವಿಧ ವಿವಿಧ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನಜೀನವ ಅಸ್ತವ್ಯಸ್ತಗೊಂಡಿದೆ. ರವಿವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಸಾರ್ವಜನಿಕರ ಪರದಾಟ ಮುಂದುವರೆದಿದೆ. ನಿನ್ನೆ ಸುರಿದ ಮಳೆಗೆ ಮನೆಯ‌ ಮೋಟರ್ ಹಾಗೂ ಸಂಪುಗಳಲ್ಲಿ ನಿಂತ ಕೊಳಚೆ ನೀರು ಸೇರಿಕೊಂಡಿದೆ. ಇನ್ನು ಕಾಮಾಗಾರಿಗಾಗಿ ಒಡೆದಿದ್ದ ರಾಜಕಾಲುವೆ ತಡೆಗೋಡೆಯಿಂದ ನೀರು ಹೊರ ಬಂದ್ದಿದ್ದು 20ಕ್ಕೂ ಹೆಚ್ಚು ಮನೆಗಳಿಗೆ ಏಕಾಏಕೆ ನೀರು ನುಗ್ಗಿದೆ. "ರಾತ್ರಿ ಇಡೀ ಮಳೆ ನೀರು ತೆಗೆದು ಹೊರ ಹಾಕೋದ್ರಲೆ ಕಳೆದಿದ್ದೇವೆ" ಎಂದು ಸ್ಥಳಿಯರ ತಿಳಿಸಿದ್ದಾರೆ

ರಾಜಕಾಲುವೆಯಲ್ಲಿ ಹೂಳು ಎತ್ತದೇ ಇರುವುದರಿಂದ ಬ್ಲಾಕ್ ಫ್ಲೋ ಆಗಿ ಮನೆಗಳಿಗೆ ನೀರು ನುಗ್ಗಿದೆ. ಪ್ರತಿ ಮಳೆಗೂ ಹೀಗೆ ಆಗುತ್ತಿದೆ ಯಾರಿಗೆ ಎಷ್ಟು ದೂರು ಕೊಟ್ಟರು ಪರಿಹಾರ ಸಿಕ್ಕಿಲ್ಲ ಎಂದು ಸ್ಥಳಿಯರ ಅಳಲು ತೋಡಿಕೊಂಡಿದ್ದಾರೆ. ಇನ್ನು ರಾಜಕಾಲುವೆ ತಡೆಗೂಡೆ ಒಡೆದಿರೋದೆ ನೀರು ನುಗ್ಗಲು ಕಾರಣ ಎಂದು ಸ್ಥಳಿಯರ ಆಕ್ರೋಶ ಹೊರ ಹಾಕಿದ್ದಾರೆ. ನಮಗೆ ಯಾವುದೆ ಮಳೆ ಪರಿಹಾರ ಬೇಡಾ ರಾಜಕಾಲುವೆ ತಡೆಗೋಡೆ ಕಟ್ಟಿ ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಅನ್ನದಾತರು, ಜನರಿಗೆ ಸಂತಸದ ಸುದ್ದಿ: ಸತತ 4ನೇ ವರ್ಷವೂ ಉತ್ತಮ ಮುಂಗಾರು: ಐಎಂಡಿ!

ಸತತ ಮಳೆ: ಇನ್ನು ನಗರದಲ್ಲಿ ಸುರಿದ ಮಳೆಗೆ ನಗರದ ವಿವಿಧ ರಸ್ತೆಗಳಲ್ಲಿ 50ಕ್ಕೂ ಹೆಚ್ಚು ಮರ ಹಾಗೂ ಕೊಂಬೆಗಳು ಧರೆಗುರುಳಿವೆ. ಮಾಗಡಿ ರಸ್ತೆಯ ಕೆಪಿ ಅಗ್ರಹಾರ, ಕತ್ರಿಗುಪ್ಪೆ, ಕಾಮಾಕ್ಯ ಲೇಔಟ್‌ಗಳಲ್ಲಿ ಸಾರ್ವಜನಿಕರ ಪರದಾಟ ಮುಂದುವರೆದಿದೆ. ಕಳೆದ ನಾಲ್ಕು ದಿನದ ಹಿಂದೆ ಸುರಿದ ಮಳೆಗೆ ಮನೆಗಳು ಜಲಾವೃತಗೊಂಡಿದ್ದವು. ಆದರೆ ಈ ಸಮಸ್ಯೆಗಳಿಂದ ಮುಕ್ತಿ ಸಿಗುವಷ್ಟರಲ್ಲಿ ನಿನ್ನೆ ಮತ್ತೆ ಧಾರಾಕಾರ ಮಳೆ ಸುರಿದಿದೆ. ಹೀಗಾಗಿ ಸ್ಥಳೀಯ ನಿವಾಸಿಗಳು ಮತ್ತೆ ಸಮಸ್ಯೆಗೆ ಸಿಲುಕಿದ್ದಾರೆ. 

ಶನಿವಾರ ಸುರಿ ಮಳೆಗೆ ಕೆ.ಪಿ.ಅಗ್ರಹಾರ, ಮಹಾಲಕ್ಷ್ಮಿ ಲೇಔಟ್‌, ಗೋವಿಂದರಾಜನಗರ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿಪುರ, ಮನುವನ, ಆರ್‌ಪಿಸಿ ಲೇಔಟ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ರಾತ್ರಿ ಇಡೀ ಜಾಗರಣೆ ಮಾಡುವಂತಾಯಿತು. ಪ್ರತೀ ವರ್ಷ ಮಳೆ ಬಿದ್ದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಸರ್ಕಾರ, ಬಿಬಿಎಂಪಿ ಅಧಿಕಾರಿಗಳು ಮಾತ್ರ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ನಮ್ಮ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Bengaluru: ಮಳೆಯ ನಡುವೆಯೂ ಅದ್ಧೂರಿ ಹೂವಿನ ಕರಗ

ಪರಿಹಾರ ಕೊಡುವುದಾಗಿ ಹೇಳಿದ್ದ ಅಧಿಕಾರಿಗಳು ಪರಿಹಾರನು ಕೊಟ್ಟಿಲ್ಲ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಪರಿಹಾರವಾಗಿ ಸ್ಥಳೀಯ ನಿವಾಸಿಗಳ ಅಕೌಂಟ್‌ಗೆ ಅಧಿಕಾರಿಗಳು ಕೇವಲ 1 ರೂ ಹಾಕಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಕೆಲವರ ಅಕೌಂಟ್‌ಗೆ 10ಸಾವಿರ ಪರಿಹಾರ ಹಾಕಿದ್ರೆ ಇನ್ನುಳಿದ 50ಕ್ಕು ಹೆಚ್ಚು ನಿವಾಸಿಗಳಿಗೆ 1 ರೂ ಹಾಕಿರೋದು ಆಕ್ರೋಶಕ್ಕೆ ಕಾರಣವಾಗಿದೆ. 

5 ಮರ-ಕೊಂಬೆ ಮರ ಧರೆಗೆ: ಮಹದೇವಪುರದ ಸರ್ಜಾಪುರದ ಮುಖ್ಯರಸ್ತೆ, ಲಗ್ಗೆರೆಯ ಸಾಯಿಬಾಬಾ ದೇವಸ್ಥಾನದ ಬಳಿ, ತ್ಯಾಗರಾಜನಗರ ಇಎಸ್‌ಐ ಆಸ್ಪತ್ರೆ, ನಾಗದೇವನಹಳ್ಳಿಯ ಕಲ್ಯಾಣ ಮಂಟಪ ಬಳಿ, ಕೆಂಗೇರಿಯ ನ್ಯಾಷನಲ್‌ ಪಬ್ಲಿಕ್‌ ಶಾಲೆ ಹತ್ತಿರ, ಹನುಮಂತನಗರ, ರಾಜರಾಜೇಶ್ವರಿ ನಗರ, ರಾಜಾಜಿನಗರ, ಮಹಾಲಕ್ಷ್ಮೇನಗರ, ಗೋವಿಂದರಾಜನಗರ ಸೇರಿದಂತೆ ವಿವಿಧೆಡೆ 20ಕ್ಕೂ ಹೆಚ್ಚು ಮರ ಹಾಗೂ 35ಕ್ಕೂ ಹೆಚ್ಚು ರೆಂಬೆ, ಕೊಂಬೆಗಳು ಧರೆಗುರುಳಿವೆ.