Asianet Suvarna News Asianet Suvarna News

ಲಸಿಕೆ, ಅಂಗಾಂಗ ಸುರಕ್ಷಿತ ಸಾಗಾಣೆಗೆ ಆ್ಯಂಬಿಟ್ಯಾಗ್: IIT ರೋಪರ್ ಸಾಧನೆ!

  • ಭಾರತದಂತ ಅತೀ ದೊಡ್ಡ ರಾಷ್ಟ್ರದಲ್ಲಿ ವೈದ್ಯಕೀಯ ತುರ್ತು ಅಗತ್ಯ ಪೂರೈಕೆ ಸವಾಲು
  • ಲಸಿಕೆ, ಅಂಗಾಂಗ, ರಕ್ತನಿಧಿ ಸುರಕ್ಷಿತ ಸಾಗಾಣೆಗೆ ಆ್ಯಂಟಿಟ್ಯಾಗ್ ಅಭಿವೃದ್ಧಿ
  • ತುರ್ತು ಅಗತ್ಯಕ್ಕಾಗಿ ಆ್ಯಂಬಿಟ್ಯಾಗ್ ಅಭಿವೃದ್ಧಿ ಪಡಿಸಿದ IIT ರೋಪರ್
IIT Ropar developed first of its kind IoT device for ambient temperature for Vaccine transport ckm
Author
Bengaluru, First Published Jun 1, 2021, 4:13 PM IST

ನವದೆಹಲಿ(ಜೂ.01): ಭಾರತದಲ್ಲಿ ವೈದ್ಯಕೀಯ ಸಲಕರಣೆ ಸಾಗಾಣೆ, ತುರ್ತು ಅಗತ್ಯ ಪೂರೈಕೆ ಅತೀ ದೊಡ್ಡ ಸವಾಲು. ಸಾರಿಗೆ ಮೂಲಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪೂರೈಕೆ ಮಾಡಲು ಅತೀ ಹೆಚ್ಚು ಸಮಯವೂ ತೆಗೆದುಕೊಳ್ಳುತ್ತದೆ. ಹೀಗಾಗಿ ಲಸಿಕೆ, ಅಂಗಾಂಗ, ರಕ್ತ ಸಾಗಾಣಿಕೆ ವಿಳಂಬವಾದಲ್ಲಿ ಹಾಳಾಗಲಿದೆ. ಹೀಗಾಗಿ ಈ ವಸ್ತುಗಳ ಸುರಕ್ಷಿತ ಸಾಗಾಣೆಗೆ IIT ರೋಪರ್ ಆ್ಯಂಬಿಟ್ಯಾಗ್ ಅನ್ನೋ ಹೊಸ ಸಾಧನ ಅಭಿವೃದ್ಧಿ ಪಡಿಸಿದೆ.

ತೀವ್ರ ಸಂಕಷ್ಟದಲ್ಲಿ ಭಾರತದ ಲಸಿಕೆ ಅವಲಂಬಿಸಿದ 91 ರಾಷ್ಟ್ರ; ವಿಶ್ವ ಆರೋಗ್ಯ ಸಂಸ್ಥೆ!.

ಐಐಟಿ-ರೋಪರ್ ಟೆಕ್ನಾಲಜಿ ಇನ್ನೋವೇಶನ್ ಹಬ್ - ಅಗ್ರಿಕಲ್ಚರ್ ಮತ್ತು ವಾಟರ್ ಟೆಕ್ನಾಲಜಿ ಡೆವಲಪ್‌ಮೆಂಟ್ ಹಬ್ (AWaDH)ಹಾಗೂ ಸಂಸ್ಥೆಯ ನಾಲ್ಕು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ಸಾಧನವು ಪ್ರಸ್ತುತ ಸಂದರ್ಭದಲ್ಲಿ ಅತೀ ಅವಶ್ಯಕ ಹಾಗೂ ಪೂರೈಕೆಯಲ್ಲಿ ಯಾವುದೇ ಹಾನಿ ಸಂಭವಿಸದಂತೆ ನೋಡಿಕೊಳ್ಳಲಿದೆ.

ಅಂಬಿಟ್ಯಾಗ್ ಸಾಧನದಿಂದ  ಲಸಿಕೆಗಳು, ಔಷಧಿಗಳು, ರಕ್ತದ ಮಾದರಿಗಳು, ಆಹಾರ ಮತ್ತು ಡೈರಿ ಉತ್ಪನ್ನಗಳು, ಮಾಂಸ ಉತ್ಪನ್ನಗಳು ಮತ್ತು ಪ್ರಾಣಿಗಳ ವೀರ್ಯ ಸಾಗಣೆಯ ಸಮಯದಲ್ಲಿ ತಾಪಮಾನದಿಂದ ಈ ವಸ್ತುಗಳ ಹಾಳಾಗಲಿದೆ. ಹೀಗಾಗಿ ಈ ತಾಪಮಾನದ ಮೇಲ್ವಿಚಾರಣೆ  ಆ್ಯಂಬಿಟ್ಯಾಗ್ ನೋಡಿಕೊಳ್ಳಲಿದೆ.

ಲಸಿಕೆ ವಿತರಣೆ: ದ. ಭಾರತಕ್ಕೇ ಕರ್ನಾಟಕ ನಂ.1!

ಇದುವರೆಗೆ ಈ ರೀತಿಯ ಸಾಧನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ IIT ರೋಪರ್ ನೂತನ ಸಾಧನ ಇದೀಗ ಭಾರತದ ತುರ್ತು ಸಂದರ್ಭಕ್ಕೆ ಅತೀ ಅವಶ್ಯಕವಾಗಿದೆ. ಸಾಗಣಿಕೆ ವೇಳೆ ನಿಗದಿತ ಮಿತಿಯನ್ನು ತಾಪಮಾನ ಮೀರಿದರೆ ಈ ಆ್ಯಂಬಿಟ್ಯಾಗ್ ಎಚ್ಚರಿಕೆ ನೀಡಲಿದೆ

Follow Us:
Download App:
  • android
  • ios