ಲಸಿಕೆ ವಿತರಣೆ: ದ. ಭಾರತಕ್ಕೇ ಕರ್ನಾಟಕ ನಂ.1!
* ಲಸಿಕೆ ವಿತರಣೆ, ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ
* ರಾಜ್ಯದಲ್ಲಿ ಈವರೆಗೆ 1.32 ಕೋಟಿ ಲಸಿಕೆ ನೀಡಿಕೆ
* ಕೇರಳ, ಆಂಧ್ರ, ತಮಿಳ್ನಾಡಿಗಿಂತ ನಾವು ಮುಂದೆ ರಾಷ್ಟ್ರೀಯ ಪಟ್ಟಿಯಲ್ಲಿ ಕರ್ನಾಟಕಕ್ಕೆ 6ನೇ ಸ್ಥಾನ
ಬೆಂಗಳೂರು(ಮೇ.31): ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಡೋಸ್ ಕೊರೋನಾ ಲಸಿಕೆ ನೀಡಿದ ರಾಜ್ಯಗಳ ಪಟ್ಟಿ ಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ಅಲ್ಲದೆ, 1.32 ಕೋಟಿ ಲಸಿಕೆ ನೀಡುವ ಮೂಲಕ ದೇಶದಲ್ಲೇ 6ನೇ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯವಾಗಿ ಹೊರಹೊಮ್ಮಿದೆ. ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದ ಇತರೆ ರಾಜ್ಯಗಳ ಲಸಿಕೆ ವಿತರಣೆ 1 ಕೋಟಿಯನ್ನೂ ಮೀರಿಲ್ಲ.
ರಾಜ್ಯದಲ್ಲಿ ಕೊರೋನಾ ಲಸಿಕೆ ಅಭಿ ಯಾನಕ್ಕೆ ಲಸಿಕೆ ಕೊರತೆಯಿಂದ ಹಿನ್ನಡೆ ಉಂಟಾಗಿದೆ ಎಂಬ ಟೀಕೆಗಳಿವೆ. ಆದರೆ, ದಕ್ಷಿಣದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚು ಜನಕ್ಕೆ ಲಸಿಕೆ ನೀಡಲಾಗಿದೆ. ಮೇ 29ರ ವೇಳೆಗೆ ರಾಜ್ಯದಲ್ಲಿ ಒಟ್ಟು 1.32 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!
45 ವರ್ಷ ಮೇಲ್ಪಟ್ಟ 20.36 ಲಕ್ಷ ಮಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಂಕಿ- ಅಂಶಗಳು ತಿಳಿಸಿವೆ. ವೈದ್ಯಕೀಯ ಸಿಬ್ಬಂದಿಯ ಪೈಕಿ 4.70 ಲಕ್ಷ ಮಂದಿಗೆ ಎರಡೂ ಡೋಸ್ ನೀಡಲಾಗಿದೆ. ಮುಂಚೂಣಿ ಕಾರ್ಯಕರ್ತರ ಪೈಕಿ 2.09 ಲಕ್ಷ ಮಂದಿಗೆ ಎರಡೂ ಲಸಿಕೆ ನೀಡಲಾಗಿದೆ.
18 ರಿಂದ 44 ವರ್ಷದ 8.58 ಲಕ್ಷ ಮಂದಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ 20.36 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಈವರೆಗೆ 1.05 ಕೋಟಿ ಜನರಿಗೆ ಮೊದಲ ಲಸಿಕೆ ಹಾಗೂ 27.16 ಲಕ್ಷ ಮಂದಿಗೆ ಎರಡೂ ಲಸಿಕೆ ನೀಡಲಾಗಿದೆ.
ದೇಶದ ಟಾಪ್ 10 ರಾಜ್ಯಗಳು
ಸ್ಥಾನ | ರಾಜ್ಯ | ಲಸಿಕೆ |
1 | ಮಹಾರಾಷ್ಟ್ರ | 1.9 ಕೋಟಿ |
2 | ಉತ್ತರ ಪ್ರದೇಶ | 1.77 ಕೋಟಿ |
3 | ರಾಜಸ್ಥಾನ | 1.66 ಕೋಟಿ |
4 | ಗುಜರಾತ್ | 1.65 ಕೋಟಿ |
5 | ಪಶ್ಚಿಮ ಬಂಗಾಳ | 1.40 ಕೋಟಿ |
6 | ಕರ್ನಾಟಕ | 1.32 ಕೋಟಿ |
7 | ಮಧ್ಯಪ್ರದೇಶ | 1.06 ಕೋಟಿ |
8 | ಆಂಧ್ರಪ್ರದೇಶ | 94.86 ಲಕ್ಷ |
9 | ಕೇರಳ | 90.56 ಲಕ್ಷ |
10 | ತಮಿಳುನಾಡು | 88 ಲಕ್ಷ |
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona