ಜನ ಮಾಂಸ ತಿನ್ನೋದೇ ಭೂಕುಸಿತ, ಮೇಘಸ್ಪೋಟಕ್ಕೆ ಕಾರಣ ಎಂದ ಐಐಟಿ ಮಂಡಿ ನಿರ್ದೇಶಕ!
Himachal Landslides, Cloudburts: ಹಿಮಾಚಲ ಪ್ರದೇಶದಲ್ಲಿ ಜನರು ಮಾಂಸಾಹಾರ ತಿನ್ನೋದು ಜಾಸ್ತಿಯಾಗಿದೆ ಅದೇ ಕಾರಣಕ್ಕಾಗಿ ಇಲ್ಲಿ ಮೇಘಸ್ಪೋಟ ಹಾಗೂ ಭೂಕುಸಿತಗಳು ನಿರಂತರವಾಗಿ ಆಗುತ್ತಿದೆ ಎಂದು ಐಐಟಿ ಮಂಡಿಯ ನಿರ್ದೇಶಕ ಲಕ್ಷ್ಮೀಧರ್ ಬೆಹರಾ ವಿಲಕ್ಷಣ ತರ್ಕವನ್ನು ಮುಂದಿಟ್ಟಿದ್ದಾರೆ.

ನವದೆಹಲಿ (ಸೆ.8): ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಮೇಘಸ್ಫೋಟಕ ಹಾಗೂ ಭೂಕುಸಿತಗಳ ಪರಿಣಾಮದಿಂದಾಗಿ ಸಾಕಷ್ಟು ಸಾವು ನೋವುಗಳು ಹಾಗೂ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಈ ರಾಜ್ಯದಲ್ಲಿ ಪ್ರತಿವರ್ಷ ಎನ್ನುವಂತೆ ಮೇಘಸ್ಫೋಟ ಹಾಗೂ ಭೂಕುಸಿತಗಳು ಆಗುತ್ತಿವೆ. ಇದಕ್ಕೆ ಕಾರಣವೇನು ಎನ್ನುವುದರ ಬಗ್ಗೆ ವಿಜ್ಞಾನಿಗಳು ಹಾಗೂ ಭೂಗರ್ಭಶಾಸ್ತ್ರಜ್ಞರು ಸಂಶೋಧನೆ ನಡೆಸುತ್ತಿದ್ದಾರೆ. ಇದರ ನಡುವೆ ಮಂಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶ ಲಕ್ಷ್ಮೀಧರ್ ಬೆಹರಾ ತಮ್ಮ ಹೇಳಿಕೆಯೊಂದ ಹೊಸ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಪ್ರಾಣಿ ಹಿಂಸೆ ಮಾಡುವುದರಿಂದಲೇ ನೈಸರ್ಗಿಕ ವಿಕೋಪಗಳಾದ ಮೇಘಸ್ಪೋಟ ಹಾಗೂ ಭೂಕುಸಿತಗಳು ಸಂಭವಿಸುತ್ತಿದೆ ಎಂದು ಹೇಳಿರುವ ಅವರು, ವಿದ್ಯಾರ್ಥಿಗಳು ಮಾಂಸಿ ತಿನ್ನೋದನ್ನು ಬಿಡುತ್ತೇವೆ ಎನ್ನುವ ಪ್ರತಿಜ್ಞೆಯನ್ನು ಮಾಡಬೇಕು. ಇದರಿಂದಾಗಗಿಯೇ ಇಂಥ ಅನಾಹುತಗಳು ಆಗುತ್ತಿವೆ ಎಂದು ವಿಲಕ್ಷಣ ತರ್ಕವನ್ನ ಮುಂದಿಟಿದ್ದಾರೆ. ಇವರ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ ವಿರೋಧದ ಚರ್ಚೆಗಳು ಆಗುತ್ತಿವೆ.
"ನಾವು ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸದಿದ್ದರೆ ಹಿಮಾಚಲ ಪ್ರದೇಶವು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಲ್ಲಿ ಮುಗ್ಧ ಪ್ರಾಣಿಗಳನ್ನು ಕಡಿಯಲಾಗುತ್ತಿದೆ, ಮತ್ತು ಇದು ಪರಿಸರ ಅವನತಿಯೊಂದಿಗೆ ಸಹಜೀವನದ ಸಂಬಂಧವನ್ನು ಹೊಂದಿದೆ, ಇದು ಈಗ ಸ್ಪಷ್ಟವಾಗಿ ಕಾಣಿಸದಿದ್ದರೂ ಪ್ರಸ್ತುತವಾಗಿದೆ" ಎಂದು ಬೆಹೆರಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರುವ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿದ್ಯಾರ್ಥಿಗಳು ಮಾಂಸಾಹಾರ ಸೇವನೆಯಿಂದ ದೂರವಿರಬೇಕು ಎಂದು ಕರೆ ನೀಡಿದ ಅವರು, ಇದು ಉತ್ತಮ ಮನುಷ್ಯರಾಗುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ನಂತರದ ವಿವಾದಕ್ಕೆ ಬೆಹೆರಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವರ ಹೇಳಿಕೆಗಳು ಆನ್‌ಲೈನ್ ಬಳಕೆದಾರರಿಂದ ಟೀಕೆಗೆ ಒಳಗಾಗಿದ್ದವು. ವಾಣಿಜ್ಯೋದ್ಯಮಿ ಮತ್ತು ಐಐಟಿ ದೆಹಲಿಯ ಹಳೆಯ ವಿದ್ಯಾರ್ಥಿ ಸಂದೀಪ್ ಮನುಧಾನೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಧಃಪತನ ಎನ್ನುವುದು ಈಗ ಸಂಪೂರ್ಣವಾಗಿದೆ. ಈ ಮೂಢನಂಬಿಕೆಯ ಮೂರ್ಖರು 70 ವರ್ಷಗಳ ಕಾಲ ನಿರ್ಮಾಣ ಮಾಡಿದ್ದನ್ನು ನಾಶಪಡಿಸಿದ್ದಾರೆ ಎಂದು ಹೇಳಿದ್ದಾರೆ. ಬಯೋಫಿಸಿಕ್ಸ್ ಪ್ರೊಫೆಸರ್ ಗೌತಮ್ ಮೆನನ್ ಈ ಬಗ್ಗೆ ಮಾತನಾಡಿದ್ದು "ಪ್ರಸ್ತುತ ದಿನಮಾನದಲ್ಲಿ, ಐಐಟಿ ಮಂಡಿಯ ನಿರ್ದೇಶಕರಂತಹ ವೀಕ್ಷಣೆಗಳು ಇಲ್ಲಿ ಕಾಣಿಸಿಕೊಂಡಿರುವುದು ಒಂದು ವೈಶಿಷ್ಟ್ಯವಾಗಿದೆ, ದೋಷವಲ್ಲ. ಇದು ಸರಳವಾಗಿ ದುಃಖಕರವಾಗಿದೆ ಎಂದಿದ್ದಾರೆ.
Amarnath : ಮೇಘಸ್ಫೋಟಕ್ಕೆ ಈವರೆಗೂ 16 ಭಕ್ತರ ಸಾವು, ಸೇನಾ ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯ
ಹಾಗಿದ್ದರೂ, ಬೆಹೆರಾ ತಮ್ಮ ಹೇಳಿಕೆಗಳ ಮೂಲಕ ವಿವಾದವನ್ನು ಹುಟ್ಟುಹಾಕುತ್ತಿರುವುದು ಇದೇ ಮೊದಲ ನಿದರ್ಶನವಲ್ಲ. ಕಳೆದ ವರ್ಷ, ಅವರು "ಪವಿತ್ರ ಮಂತ್ರಗಳನ್ನು" ಪಠಿಸುವ ಮೂಲಕ "ದುಷ್ಟಶಕ್ತಿಗಳಿಂದ" ತನ್ನ ಸ್ನೇಹಿತನ ಅಪಾರ್ಟ್ಮೆಂಟ್ ಮತ್ತು ಕುಟುಂಬವನ್ನು ತೊಡೆದುಹಾಕಲು ಭೂತೋಚ್ಚಾಟನೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಹೇಳುವ ಮೂಲಕ ಸುದ್ದಿಯಾಗಿದ್ದರು.
NewsHour ಅಮರನಾಥ ಮೇಘಸ್ಫೋಟ 15 ಬಲಿ, ಪ್ರವಾಹದಲ್ಲಿ ಕೊಚ್ಚಿ ಹೊದ 40 ಭಕ್ತರು!