Asianet Suvarna News Asianet Suvarna News

ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯ ಉಪನ್ಯಾಸ ನೀಡುತ್ತಿದ್ದ ವೇಳೆ ಕುಸಿದು ಬಿದ್ದ ಪ್ರೊಫೆಸರ್ ನಿಧನ!

ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯದ ಕುರಿತು ಉಪನ್ಯಾಸ ನಡೆಯುತ್ತಿತ್ತು. ಪ್ರೊಫೆಸರ್ ಮಹತ್ವದ ಆರೋಗ್ಯ ಸಲಹೆಯನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದರು. ಆದರೆ ಈ ಉಪನ್ಯಾಸ ನಡೆಯುತ್ತಿದ್ದಂತೆ ಪ್ರೊಫೆಸರ್ ಕುಸಿದು ಬಿದ್ದ ನಿಧನರಾಗಿದ್ದಾರೆ. ಪ್ರೊಫೆಸರ್ ಕೊನೆಯದಾಗಿ ಆಡಿದ ಮಾತು, ವಿದ್ಯಾರ್ಥಿಗಳೇ ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಿ.
 

IIT Kanpur Professor collapse and dies while addressing Students on Good Health ckm
Author
First Published Dec 23, 2023, 9:37 PM IST

ಕಾನ್ಪುರ(ಡಿ.23) ಐಐಟಿ ಕಾನ್ಪುರ ವಿಶ್ವವಿದ್ಯಾಲಯದಲ್ಲಿ ಶಾಕಿಂಗ್ ಘಟನೆ ನಡೆದಿದೆ. ಪ್ರೊಫೆಸರ್ ಸಮೀರ್ ಕಂದೇಕರ್ ವಿದ್ಯಾರ್ಥಿಗಳನ್ನುದ್ದೇಶಿ ಉತ್ತಮ ಆರೋಗ್ಯದ ಕುರಿತು ಉಪನ್ಯಾಸ ನೀಡುತ್ತಿದ್ದರು. ಉಪನ್ಯಾಸದ ನಡುವೆ ವಿದ್ಯಾರ್ಥಿಗಳಿಗೆ ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಿ ಎಂದು ಹೇಳುತ್ತಾ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಿಬ್ಬಂದಿಗಳು ನೆರವಿಗೆ ಧಾವಿಸಿದ್ದಾರೆ. ಅಷ್ಟರಲ್ಲೇ ಪ್ರೊಫೆಸರ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಈ ಘಟನೆ ನೆರೆದಿದ್ದ ವಿದ್ಯಾರ್ಥಿಗಳ, ಹಳೇ ವಿದ್ಯಾರ್ಥಿಗಳು ಸೇರಿದಂತೆ ಇಡೀ ಕಾಲೇಜಿಗೆ ಆಘಾತ ತಂದಿದೆ.

ಐಐಟಿ ಕಾನ್ಪುರದ ಆಡಿಟೋರಿಯಂನಲ್ಲಿ ಹಳೇ ವಿದ್ಯಾರ್ಥಿಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯದ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು. ಪ್ರೊಫೆಸರ್ ಸಮೀರ್ ಕಂದೇಕಾರ್ ಉತ್ತಮ ಆರೋಗ್ಯದ ಕುರಿತು ಮಹತ್ವದ ಉಪನ್ಯಾಸ ನೀಡುತ್ತಿದ್ದರು. ಉಪನ್ಯಾಸದಲ್ಲಿ ವಿದ್ಯಾರ್ಥಿಗಳನ್ನು ಎಷ್ಟು ಹೊತ್ತು ಬೇಕಾದರು ಹಿಡಿದಿಡಬಲ್ಲ ಸಾಮರ್ಥ್ಯ ಹೊಂದಿದ್ದ ಪ್ರೊಫೆಸರ್ ಸಮೀರ್, ಹಳೇ ವಿದ್ಯಾರ್ಥಿಗಳು, ಹಾಲಿ ವಿದ್ಯಾರ್ಥಿಗಳಿಗೆ ಆರೋಗ್ಯದ ಕುರಿತು ಹಲವು ಸಲಹೆ ನೀಡಿದ್ದಾರೆ.

ಶಾಲೆಗೆ ತೆರಳಲು ಬಸ್‌ಗೆ ಕಾದಿದ್ದ ವೇಳೆ ಹೃದಯಾಘಾತ; 7ನೇ ತರಗತಿ ವಿದ್ಯಾರ್ಥಿನಿ ಸಾವು!

ಉಪನ್ಯಾಸ ನೀಡುತ್ತಿದ್ದಂತೆ ಅತೀವ ಬೆವರಿದ ಪ್ರೊಫೆಸರ್ ದಿಢೀರ್ ಡಯಾಸ್ ಮೇಲೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಿಬ್ಬಂದಿಗಳು, ವಿದ್ಯಾರ್ಥಿಗಳ ಆಗಮಿಸಿ ಪ್ರೊಫೆಸರನ್ನು ಮೇಲಕ್ಕೆ ಎತ್ತಿ ಕುರ್ಚಿಯಲ್ಲಿ ಕುಳ್ಳಿರಿಸಿದ್ದಾರೆ. ಆದರೆ  ಸಮೀರ್ ಸ್ಪಂದನೆ ಇಲ್ಲವಾಗಿತ್ತು. ಹೀಗಾಗಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರೊಳಗೆ ಸಮೀರ್ ನಿಧನರಾಗಿದ್ದಾರೆ. ಪರಿಶೀಲನೆ ನಡೆಸಿದ ವೈದ್ಯರು ನಿಧನ ಖಚಿತಪಡಿಸಿದ್ದಾರೆ.

ಪ್ರೊಫೆಸರ್ ಸಮೀರ್ ಕೊನೆಯದಾಗಿ ಆಡಿದ ಮಾತು ವಿದ್ಯಾರ್ಥಿಗಳೇ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಈ ಮಾತು ಹೇಳತ್ತಲೇ ಸಮೀರ್ ಕುಸಿದು ಬಿದ್ದಿದ್ದಾರೆ. ಪ್ರೊಫೆಸರ್ ನಿಧನ ವಿದ್ಯಾರ್ಥಿಗಳಿಗೆ ಆಘಾತ ತಂದಿದೆ. ವಿದ್ಯಾರ್ಥಿಗಳ ನೆಚ್ಚಿನ ಪ್ರೊಫೆಸರ ಆಗಿದ್ದ ಸಮೀರ್ ಇನ್ನಿಲ್ಲ ಅನ್ನೋ ಸುದ್ದಿ ಹಳೇ ವಿದ್ಯಾರ್ಥಿಗಳಿಗೆ ತಲುಪಿದೆ. ವಿದ್ಯಾರ್ಥಿಗಳು, ಕಾಲೇಜು ಆಡಳಿತ ಮಂಡಳಿ, ಸಹ ಉಪನ್ಯಾಸಕರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

 

32ರ ಹರೆಯದ ಲಿಂಗಸೂರು ಶಾಸಕ ಮಾನಪ್ಪ ವಜ್ಜಲ್ ಪುತ್ರ ಹೃದಯಾಘಾತದಿಂದ ನಿಧನ!

2019ರಿಂದ ಪ್ರೊಫೆಸರ್ ಸಮೀರ್ ಆರೋಗ್ಯ ಸಂಬಂಧಿಸಿದ ಸಮಸ್ಯೆ ಎದುರಿಸಿದ್ದಾರೆ.  ಕೊಲೆಸ್ಟ್ರಾಲ್ ಆರೋಗ್ಯ ಸಮಸ್ಯೆ ಎದುರಿಸಿದ ಪ್ರೊಫೆಸರ್ ಸಮೀರ್, 2019ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ದಿಢೀರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


 

Follow Us:
Download App:
  • android
  • ios