ಫೆ.12 ರಂದು ಆತ್ಮಹತ್ಯೆ ಮಾಡಿಕೊಂಡ ಐಐಟಿ ಬಾಂಬೆಯ ವಿದ್ಯಾರ್ಥಿ ದರ್ಶನ್ ಸೋಲಂಕಿ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಮುಂಬೈ: ಫೆ.12 ರಂದು ಆತ್ಮಹತ್ಯೆ ಮಾಡಿಕೊಂಡ ಐಐಟಿ ಬಾಂಬೆಯ ವಿದ್ಯಾರ್ಥಿ ದರ್ಶನ್ ಸೋಲಂಕಿ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ದರ್ಶನ್ ಸೋಲಂಕಿ ಸಾಯುವ ಮುನ್ನ ಬರೆದಿದ್ದ ಡೆತ್‌ನೋಟ್ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಹೆಸರಿದ್ದ ಕೆಲ ವಿದ್ಯಾರ್ಥಿಗಳಿಗೆ ನಾರ್ಕೋ ಟೆಸ್ಟ್ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಹಲವು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಡೆತ್‌ನೋಟ್‌ನಲ್ಲಿರುವ ಉಲ್ಲೇಖಿಸಲ್ಪಟ್ಟ ವಿದ್ಯಾರ್ಥಿ ಸತ್ಯ ಬಾಯ್ಬಿಡುತ್ತಿಲ್ಲ ಎಂದು ಪೊಲೀಸರಿಗೆ ಅನಿಸಿದ್ದು, ಆತ ಸತ್ಯ ಹೇಳದೇ ಹೋದರೆ ನಾವು ವೈಜ್ಞಾನಿಕವಾಗಿ ಪರೀಕ್ಷೆಯ ನೆರವನ್ನು ಪಡೆಯುತ್ತೇವೆ. ನಾರ್ಕೋ ಅನಾಲಿಸಿಸ್ ಹಾಗೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸುತ್ತೇವೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
ಮಾರ್ಚ್ 3 ರಂದು ಮುಂಬೈ (Mumbai Police) ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ವಿಶೇಷ ತನಿಖಾ ತಂಡಕ್ಕೆ ಡೆತ್‌ನೋಟ್ (Death note) ಸಿಕ್ಕಿತ್ತು. ಅದರಲ್ಲಿ ದರ್ಶನ್ ಸೋಲಂಕಿ (Darshan solanki) ವಿದ್ಯಾರ್ಥಿಯೋರ್ವನ ಹೆಸರು ಬರೆದು ಆತ ನನ್ನನ್ನು ಕೊಲ್ಲಲು ಹೊರಟಿದ್ದ ಎಂದು ಬರೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಮಾರ್ಚ್ 30 ರಂದು ದರ್ಶನ್ ಸೋಲಂಕಿ ಕುಟುಂಬಸ್ಥರು, ಜಾತಿಗೆ ಸಂಬಂಧಿಸಿದ ತಾರತಮ್ಯಕ್ಕೆ ತಮ್ಮ ಮಗ ಬಲಿಯಾಗಿದ್ದಾನೆ ಎಂದು ದೂರಿದ್ದರು. ಇದಾದ ನಂತರ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮೀಷನರ್ ಲಕ್ಷ್ಮಿ ಗೌತಮ್ (Lakshmi gowtham) ಹಾಗೂ ಉಪ ಕಮೀಷನರ್ ಕೃಷ್ಣಕಾಂತ್ ಉಪಾಧ್ಯಾಯ ಅವರು ತನಿಖೆಯನ್ನು ಚುರುಕುಗೊಳಿಸಿದ್ದರು.
Bengaluru Crime: ಸೋದರ ಮಾವನಿಂದಲೇ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ ಕೊಲೆ
ಅಧಿಕಾರಿಯ ಪ್ರಕಾರ, ಸೋಲಂಕಿ ಸಹಪಾಠಿ ತನ್ನ ಹೇಳಿಕೆಯಲ್ಲಿ ಹೀಗೆ ಹೇಳಿದ್ದಾನೆ 'ನನ್ನ ಬ್ಯಾಗ್‌ನಲ್ಲಿ ಕಟ್ಟರ್ ಅನ್ನು ನೋಡಿದ ನಂತರ ಅವನು (ಸೋಲಂಕಿ) ನನ್ನನ್ನು ಹೆದರಿಸಿದನು ಮತ್ತು ನಾನು ಅವನನ್ನು ಕೊಲ್ಲಲು ಹೋಗುತ್ತೇನೆ ಎಂದು ಆತಂಕಗೊಂಡಿದ್ದ. ಅಲ್ಲದೇ ಅವನು ನನ್ನ ಕೆಲವು ಸಹಪಾಠಿಗಳಿಗೆ ನಾನು ಅವನಿಗೆ ತೊಂದರೆ ಮಾಡಲಿದ್ದೇನೆ ಎಂದು ಹೇಳಿದ್ದ. ಅಲ್ಲದೇ ಅದಕ್ಕಾಗಿ ನಾನು ಸೋಲಂಕಿಯ ಊರು ಅಹಮದಾಬಾದ್‌ಗೆ ಹೋಗುತ್ತೇನೆ ಎಂದು ಹೇಳಿದ್ದ. ಅಲ್ಲದೇ ಸೋಲಂಕಿ ಸಹಪಾಠಿಗೆ ಹೆದರುತ್ತಿದ್ದರು ಎಂದು ಇತರ ಹಲವಾರು ವಿದ್ಯಾರ್ಥಿಗಳು ಹೇಳಿದ್ದಾರೆ. ಒಂದು ದಿನ, ಸೋಲಂಕಿಯ ಸಹಪಾಠಿ (ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾದ ವ್ಯಕ್ತಿ) ನಮಾಜ್‌ಗೆ ಹೋದಾಗ, ಅವನು ತನಗೆ ಹೇಗೆ ಹೆದರಿಸಿದ್ದ ಎಂದು ಮಾತನಾಡುತ್ತಿದ್ದ ಇದಾದ ನಂತರ, ಸೋಲಂಕಿ ಸಹಪಾಠಿಗೆ ಕ್ಷಮೆಯಾಚಿಸುತ್ತಿರುವುದು ಕಂಡುಬಂದಿತು, ಆದರೆ ವಿದ್ಯಾರ್ಥಿಗಳಿಗೆ ಅದು ಏಕೆ ಎಂದು ತಿಳಿದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೋಲಂಕಿ ಏಳನೇ ಮಹಡಿಯಿಂದ ಜಿಗಿದಿರುವುದನ್ನು ನೋಡಿದ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ವಿದ್ಯಾರ್ಥಿಯ ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿಕೊಂಡಿದೆ. ಮೂಲಗಳ ಪ್ರಕಾರ, ಫೆಬ್ರವರಿ 12 ರಂದು ಸೋಲಂಕಿ ಜಿಗಿಯಲು ಪ್ರಯತ್ನಿಸಿದಾಗ ಈ ವಿದ್ಯಾರ್ಥಿ 8ನೇ ಮಹಡಿಯ ಬಾಲ್ಕನಿಯಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದನು. ವಿದ್ಯಾರ್ಥಿಯು ತನ್ನ ಹೆಸರನ್ನು ಎರಡು ಬಾರಿ ಕಿರುಚಿದನು. ಈ ವೇಳೆ ವಿದ್ಯಾರ್ಥಿ ಸೋಲಂಕಿಯ ಹೆಸರನ್ನು ಎರಡು ಬಾರಿ ಕಿರುಚಿ ಕರೆದಿದ್ದಾನೆ. ಅಲ್ಲದೇ ಆ ವಿದ್ಯಾರ್ಥಿ ಸೋಲಂಕಿಯನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಮೊದಲು ಆತ ಕಟ್ಟಡದಿಂದ ಜಿಗಿದಾಗಿತ್ತು. ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಸೋಲಂಕಿಯ ಮೊಬೈಲ್‌ನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾದ ವಿದ್ಯಾರ್ಥಿಯ ಫೋನ್ ಅನ್ನು ಕೂಡ ವಶಕ್ಕೆ ಪಡೆದಿದ್ದಾರೆ.
ಅಮೆರಿಕದಲ್ಲಿ ಮತ್ತೊಂದು ದುರ್ಘಟನೆ, ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ!