Asianet Suvarna News Asianet Suvarna News

ಅಮೆರಿಕದಲ್ಲಿ ಮತ್ತೊಂದು ದುರ್ಘಟನೆ, ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ!

ಭಾರತೀಯ ಮೂಲದ ಕುಟುಂಬವನ್ನು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ ಘಟನೆ ಬೆನ್ನಲ್ಲೇ ಇದೀಗ 20 ರ ಹರೆಯದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕದಲ್ಲಿ ಹತ್ಯೆ ಮಾಡಲಾಗಿದೆ.

Indian Origin student killed in America his roommate taken into custody 2nd incidents after kidnap and murder case ckm
Author
First Published Oct 6, 2022, 6:59 PM IST

ವಾಶಿಂಗ್ಟನ್(ಅ.06): ಭಾರತೀಯ ಮೂಲದ 8 ತಿಂಗಳ ಮಗು ಸೇರಿ ನಾಲ್ವರನ್ನು ಅಪಹರಣ ಮಾಡಿ ಹತ್ಯೆ ಮಾಡಿದ ಘಟನೆ ಬೆನ್ನಲ್ಲೇ ಅಮೆರಿಕದ ವಾಶಿಂಗ್ಟನ್‌ನಲ್ಲಿ ಮತ್ತೊಂದು ಘಟನೆ ನಡದಿದೆ. 20ರ ಹರೆಯದ ಭಾರತೀಯ ಮೂಲದ ವಿದ್ಯಾರ್ಥಿ ವರುಣ್ ಮನೀಶ್ ಚೆಡ್ಡಾನನ್ನು ಹತ್ಯೆ ಮಾಡಲಾಗಿದೆ. ಹಾಸ್ಟೆಲ್‌ನಲ್ಲಿರುವಾಗ ವರುಣ್ ಚೀರಾಟ ಸದ್ದು ಕೇಳಿಸಿದೆ. ಇತರ ವಿದ್ಯಾರ್ಥಿಗಳು ಸದ್ದು ಕೇಳಿಸಿ ಬಂದಿದ್ದಾರೆ. ಈ ವೇಳೆ ವರುಣ್ ಮನೀಶ್ ಮೃತಪಟ್ಟಿದ್ದಾನೆ. ಈ ಘಟನೆ ಸಂಬಂಧ ವರುಣ್ ಮನೀಶ್ ಹಾಸ್ಟೆಲ್ ರೂಮೇಟ್ ಇಬ್ಬರನ್ನು ಅಮೆರಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಮೆರಿಕಾದ ಇಂಡಿಯಾಪಾಲಿಸ್‌ನ ಪರ್ಡ್ಯೂ ವಿಶ್ವಿವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ವರುಣ್‌ನನ್ನು ಹತ್ಯೆ ಮಾಡಲಾಗಿದೆ. 

ವರುಣ್ ಮನೀಶ್ ಹಾಸ್ಟೆಲ್‌ನಲ್ಲಿ ಮೃತ ದೇಹ ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಬೇರೊಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಕೊರಿಯಾ ಮೂಲದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಇದು ಗಂಭೀರ ಪ್ರಕರಣವಾಗಿ ಪರಿಗಣಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಅಮೆರಿಕಾದಲ್ಲಿ ಕಿಡ್ನ್ಯಾಪ್ ಆಗಿದ್ದ ಭಾರತೀಯರ ಶವಪತ್ತೆ: ಜನಾಂಗೀಯ ದ್ವೇಷಕ್ಕೆ ಬಲಿ?

ಜೆಇಇ ಪರೀಕ್ಷೆ ವಂಚನೆ: ವೆಬ್‌ ಹ್ಯಾಕ್‌ ಮಾಡಿದ್ದ ರಷ್ಯಾ ಪ್ರಜೆ ಸಿಬಿಐ ವಶಕ್ಕೆ
ಐಐಟಿಯಂಥ ಉನ್ನತ ತಂತ್ರಜ್ಞಾನ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ, ವೆಬ್‌ಸೈಟ್‌ ಅನ್ನೇ ಹ್ಯಾಕ್‌ ಮಾಡಿ ವಂಚನೆ ನಡೆಸಿದ್ದ ರಷ್ಯಾ ಮೂಲದ ಮಿಖಾಯಿಲ್‌ ಶಾರ್ಗಿನ್‌ ಎಂಬಾತನನ್ನು ಸಿಬಿಐ ಸೋಮವಾರ ಬಂಧಿಸಿದೆ. ಈತ ಕಜಕಿಸ್ತಾನದಿಂದ ವಿಮಾನದಲ್ಲಿ ಬಂದಿಳಿಯುತ್ತದೇ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ.

ಕಳೆದ ವರ್ಷದ ಜೆಇಇ ಮೇನ್‌ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದು ಪತ್ತೆಯಾಗಿ ಅಫಿನಿಟಿ ಎಜುಕೇಷನ್‌ ಪ್ರೈ. ಎಂಬ ಸಂಸ್ಥೆಯ ಮೂವರು ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಇವರು ಮಿಖಾಯಿಲ್‌ ಸೇರಿದಂತೆ ಇನ್ನಿತರೆ ಕೆಲ ಮಧ್ಯವರ್ತಿಗಳ ಜೊತೆ ಸೇರಿ ಪರೀಕ್ಷೆ ನಡೆಸುವ ವೆಬ್‌ಸೈಟ್‌ ಅನ್ನೇ ಹ್ಯಾಕ್‌ ಮಾಡಿ, ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಸುತ್ತಿದ್ದರು. ಇದಕ್ಕಾಗಿ 10-15 ಲಕ್ಷ ರು. ಹಣ ಪಡೆಯಲಾಗುತ್ತಿತ್ತು. ಈ ಮೂಲಕ ವಿದ್ಯಾರ್ಥಿಗಳಿಗೆ ಖ್ಯಾತನಾಮ ಸಂಸ್ಥೆಗಳಲ್ಲಿ ಪ್ರವೇಶ ಸಿಗುವಂತೆ ಮಾಡಲಾಗುತ್ತಿತ್ತು. ಜೆಇಇ ಮಾತ್ರವಲ್ಲದೇ ಇತರೆ ಹಲವು ಪ್ರವೇಶ ಪರೀಕ್ಷೆಗಳಲ್ಲೂ ಇದೇ ರೀತಿಯ ವಂಚನೆ ನಡೆಸಿರುವುದು ತನಿಖೆ ವೇಳೆ ಕಂಡುಬಂದಿದೆ.

Follow Us:
Download App:
  • android
  • ios