ಕಾಡಿನಲ್ಲಿ ಆನೆಗಳು ವಿಶ್ರಾಂತಿ ಪಡೆಯುವ ವಿಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು. ಇದೀಗ ಅಣ್ಣಾಮಲೈ ಅಭಯಾರಣ್ಯದಲ್ಲಿ ವಿಶ್ರಾಂತಿ ವೇಳೆ ಮರಿ ಆನೆಗೆ ಕುಟುಂಬ Z ಪ್ಲಸ್ ಭದ್ರತೆ ನೀಡಿದ ವಿಡಿಯೋ ಭಾರಿ ವೈರಲ್ ಆಗಿದೆ. 

ಚೆನ್ನೈ(ಮೇ.16) ಒಗ್ಗಟ್ಟು, ಮರಿಗಳ ರಕ್ಷಣೆ, ಆರೈಕೆ, ಆಹಾರ ಹುಡುಕುವುದು ಸೇರಿದಂತೆ ಕುಟುಂಬ ಜೀವನದಲ್ಲಿ ಆನೆಗಳ ಜೀವನ ಪದ್ಧತಿ ಕುತೂಹಲಗಳ ಆಗರ. ಇತ್ತೀಚೆಗೆ ಕಾಡಿನಲ್ಲಿ ಆನೆಗಳು ವಿಶ್ರಾಂತಿ ಪಡೆಯುವ ವಿಡಿಯೋ ಒಂದು ಭಾರಿ ವೈರಲ್ ಆಗಿತ್ತು. ಇದೀಗ ತಮಿಳುನಾಡಿನ ಅಣ್ಣಾಮಲೈ ಅಭಯಾರಣ್ಯದಲ್ಲಿ ಆನೆಗಳ ಕುಟುಂಬ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿ ಒಂದು ವಿಶೇಷತೆ ಇದೆ. ವಿಶ್ರಾಂತಿ ವೇಳೆ ಮರಿ ಆನೆಗೆ Z ಪ್ಲಸ್ ಭದ್ರತೆ ನೀಡಿದೆ. ಸುತ್ತಲು ತಾಯಿ ಆನೆ ಹಾಗೂ ಆನೆ ಕುಟುಂಬ ಮಲಗಿದ್ದರೆ, ಮಧ್ಯದಲ್ಲಿ ಮರಿ ಆನೆ ಮಲಗಿದೆ. 

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋ ಹಂಚಿಕೊಂಡಿದ್ದಾರೆ. 15 ಸೆಕೆಂಡ್‌ಗಳ ಈ ವಿಡಿಯೋ ಹೃದಯಸ್ಪರ್ಶಿಯಾಗಿದೆ. ವೈಲ್ಡ್‌ಲೈಫ್ ಫೋಟೋಗ್ರಾಫರ್ ಧನು ಪರನ್ ಈ ವಿಡಿಯೋ ತೆಗೆದಿದ್ದಾರೆ. ಅದ್ಭುತ ಹಾಗೂ ಪ್ರಾಣಿಗಳ ಜೀವನ ಪದ್ಧತಿಯ ಈ ವಿಡಿಯೋ ಇದೀಗ ದೇಶಾದ್ಯಂತ ವೈರಲ್ ಆಗಿದೆ. ಆನೆಗಳ ಮರಿ ಆನೆಗೆ ನೀಡಿರುವ ಗರಿಷ್ಠ ಭದ್ರತೆ ಹಾಗೂ ಮಲಗಿದ್ದರೂ ಎಚ್ಚರದಲ್ಲಿರುವ ಆನೆಗಳ ಆರೈಕೆ ಇದೀಗ ಭಾರಿ ಚರ್ಚೆಯಾಗುತ್ತಿದೆ.

ಬಂಡೀಪುರ- ಊಟಿ ಹೆದ್ದಾರಿಯಲ್ಲಿ ಹುಲಿ ದಾಳಿ; ಮರಿಯಾನೆ ಸಾವಿನಿಂದ ರಸ್ತೆಯಿಂದ ಕದಲದ ತಾಯಿ ಆನೆ

ಈ ವಿಡಿಯೋದಲ್ಲಿ ಮೂರು ಆನೆಗಳು ನಡುವಿನಲ್ಲಿ ಮರಿಯಾನೆ ಮಲಗಿದೆ. ಮತ್ತೊಂದು ಆನೆ ನಿಂತು ಗಮನಿಸುತ್ತಿದೆ. ಎಲ್ಲರೂ ನಿದ್ರಿಸಿದರೂ ಒಂದು ಆನೆ ಮಾತ್ರ ನಿಂತುಕೊಂಡೆ ಎಲ್ಲರನ್ನು ಕಾಯುತ್ತಿದೆ. ಕಾರಣ ಅಣ್ಣಾಮಲೈ ಅಭಯಾರಣ್ಯ ಪ್ರಮುಖವಾಗಿ ಹುಲಿ ಸಂರಕ್ಷಿತ ಅರಣ್ಯವಾಗಿದೆ. ಮರಿ ಆನೆಗಳ ಮೇಲೆ ಹುಲಿ ದಾಳಿ ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಮಧ್ಯದಲ್ಲಿ ಮರಿ ಆನೆಯನ್ನು ಮಲಗಿಸಿರುವ ಆನೆ ಕುಟುಂಬ ಸುತ್ತಲೂ ಮಲಗಿದೆ.

Scroll to load tweet…

ಇಷ್ಟೇ ಅಲ್ಲ,ಒಂದು ಆನೆ ನಿದ್ದೆಯಲ್ಲಿ ಕಾಲನ್ನು ಎತ್ತಿ ಪಕ್ಕದಲ್ಲಿ ಮಲಗಿರುವ ಆನೆಯನ್ನು ಪರಿಶೀಲಿಸುತ್ತಿದೆ. ಬಳಿ ಮತ್ತೆ ಆರಾಮಾಗಿ ನಿದ್ರಿಸುತ್ತಿದೆ. ಈ ಫೋಟೋಗ್ರಾಫರ್ ಧನು ಪರನ್ ತೆಗೆದಿರುವ ಈ ವಿಡಿಯೋವನ್ನು ಸುಪ್ರಿಯಾ ಸಾಹು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬಗಳ ರೀತಿಯಲ್ಲೇ ಮರಿ ಆನೆಯನ್ನು ಸುರಕ್ಷಿತವಾಗಿ ಮಲಗಿಸಿದೆ. ಜೊತೆಗೆ ಮಲಗಿದ್ದ ಸ್ಥಳದಿಂದಲೇ ಇತರರನ್ನುಕಾಲಿನ ಮೂಲಕ ಪರಿಶೀಲಿಸುತ್ತಿದೆ. ಆನೆ ಕುಟುಂಬ ಮರಿಯಾನೆಗೆ ಝೆಡ್ ಪ್ಲಸ್ ಭದ್ರತೆ ನೀಡಿದೆ ಎಂದು ಸುಪ್ರಿಯಾ ಬರೆದುಕೊಂಡಿದ್ದಾರೆ.

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಹಗಲಲ್ಲೇ ಕಾಡಾನೆ ಸಂಚಾರ, ಕೂದಲೆಳೆ ಅಂತರದಲ್ಲಿ ಬೈಕ್‌ ಸವಾರ ಪಾರು..!

ಈ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಅದ್ಭುತ ಕುಟುಂಬ, ಕಾಡಿನ ವಿಸ್ಮಯಗಳ ಕುರಿತು ಅಧಿಕಾರಿಗಳು ಹಂಚಿಕೊಂಡಿರುವ ಈ ವಿಡಿಯೋ ಅಪ್ತವಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಈ ಚಿತ್ರವನ್ನು ಡೆಸ್ಕ್‌ಟಾಪ್, ಫೋನ್ ವಾಲ್ ಪೇಪರ್ ಮಾಡುತ್ತೇನೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.