ಬಂಡೀಪುರ- ಊಟಿ ಹೆದ್ದಾರಿಯಲ್ಲಿ ಹುಲಿ ದಾಳಿ; ಮರಿಯಾನೆ ಸಾವಿನಿಂದ ರಸ್ತೆಯಿಂದ ಕದಲದ ತಾಯಿ ಆನೆ

ಹುಲಿ ದಾಳಿ ನಡೆಸಿದ ಪರಿಣಾಮ ಆನೆ ಮರಿ ನಡು ರಸ್ತೆಯಲ್ಲೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ನಡೆದಿದೆ. ಇದರಿಂದ ತನ್ನ ಮರಿಯನ್ನು ಕೆಳೆದುಕೊಂಡಿರುವ ತಾಯಿ ಆನೆ ಬಂಡೀಪುರ ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘೀಳಿಡುತ್ತಿದೆ. 

Bandipur Ooty highway tiger attack and killed Baby elephant then mother elephant roaring on road sat

ಚಾಮರಾಜನಗರ (ಏ.20): ಹುಲಿ ದಾಳಿ ನಡೆಸಿದ ಪರಿಣಾಮ ಆನೆ ಮರಿ ನಡು ರಸ್ತೆಯಲ್ಲೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ನಡೆದಿದೆ. ಇದರಿಂದ ತನ್ನ ಮರಿಯನ್ನು ಕೆಳೆದುಕೊಂಡಿರುವ ತಾಯಿ ಆನೆ ಬಂಡೀಪುರ ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘೀಳಿಡುತ್ತಿದೆ. 

ಬಂಡೀಪುರ-ಊಟಿ ರಾಷ್ಟ್ರೀಯ ಹೆದ್ದಾರಿ ಬದಿಯ ರಸ್ತೆ ಬದಿಯಲ್ಲಿ ಮರಿಯಾನೆ ಮೇಯುತ್ತಿದ್ದ ಸಂದರ್ಭ ಹುಲಿ ಏಕಾ ಏಕಿ ದಾಳಿ ನಡೆಸಿ ಕೊಂದು ಹಾಕಿದೆ. ಕೂಗಳತೆ ದೂರಲ್ಲಿದ್ದ ತಾಯಿಯಾನೆ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಹುಲಿ ಓಡಿ ಹೋಗಿತ್ತು ಎನ್ನಲಾಗುತ್ತಿದೆ.  ಇದರಿಂದ ತನ್ನ ಮರಿಯನ್ನು ಕೆಳೆದುಕೊಂಡಿರುವ ತಾಯಿ ಆನೆ ಬಂಡೀಪುರ ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘೀಳಿಡುತ್ತಿದೆ. ಇದರಿಂದ ವಾಹನ ಸವಾರರು ಸಂಚಾರ ಮಾಡಲು ಭಯಪಟ್ಟು ಹಿಂದೆಯೇ ನಿಂತುಕೊಂಡಿದ್ದಾರೆ. ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. 

ಚಿಕ್ಕಮಗಳೂರು: ಹುಲಿ ಹತ್ಯೆ ಆರೋಪ, ಇಬ್ಬರ ಬಂಧನ ಇನ್ನೋರ್ವ ಪರಾರಿ

ಮರಿಯಾನೆ ಮೃತ ದೇಹದ ಮುಂದೆ ನಿಂತು ತಾಯಿಯಾನೆ ರೋಧಿಸುತ್ತಿದೆ. ಇದರಿಂದ ಬಂಡೀಪುರ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳು ತಾಯಿಯಾನೆ ದಾಳಿ ಮಾಡಬಹುದು ಎಂಬ ಆಂತಕದಲ್ಲಿ ಸಂಚಾರ ಮಾಡದೆ ನಿಂತಲ್ಲೆ ನಿಂತಿವೆ. ಇದರಿಂದ ಟ್ರಾಫಿಕ್ ಜಾಮ್ ಆಗಿದ್ದು ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೃತ ಕಾಡಾನೆಯನ್ನು ರಸ್ತೆಯಿಂದ ತೆರವು ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಕಳೆದ ತಿಂಗಳು ಕಾಡಾನೆಗಳ ಸಾವು:  ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದ ಕೆಂಕೆರೆ ಕೆರೆ ಬಳಿ ಮಾ.23ರಂದು ಕಾಡಾನೆ ಸಾವನ್ನಪ್ಪಿದ ಘಟನೆ ನಡೆದಿತ್ತು. ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷೆ ನಡೆಸಿದ ಅರಣ್ಯಾಧಿಕಾರಿಗಳು ಮೃತಪಟ್ಟಿರುವುದು ಹೆಣ್ಣಾನೆ. ಸಾವಿನ ಹಿನ್ನೆಲೆ ತಿಳಿಯಲು ಮರಣೋತ್ತರ ಪರೀಕ್ಷೆ ಕಳಿಸಿದ್ದ ಅರಣ್ಯ ಅಧಿಕಾರಿಗಳು. ಇದೀಗ ಸ್ವಾಭಾವಿಕವಾಗಿ ಮೃತಪಟ್ಟಿರುವುದು ದೃಢವಾಗಿದೆ. ಈ ಘಟನೆಯ ಒಂದು ದಿನದ ಹಿಂದಷ್ಟೇ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ದೇಹಳ್ಳಿ ಸಮೀಪದ ಕಟ್ಟಿಗೆ ಇಡ್ಕೆಮನೆ ತೋಟಕ್ಕೆ ಬಂದಿದ್ದ ಕಾಡಾನೆಯೊಂದು ವಿದ್ಯುತ್ ಸ್ಪರ್ಶಕ್ಕೆ ಮೃತಪಟ್ಟಿತ್ತು. 

Latest Videos
Follow Us:
Download App:
  • android
  • ios