Asianet Suvarna News Asianet Suvarna News

ಕಿರಿದಾದ ಕಾಲುವೆ ರೀತಿಯ ವಿಶಿಷ್ಟ ರಚನೆ ವಿಡಿಯೋ ಹಂಚಿಕೊಂಡ IFS ಅಧಿಕಾರಿ: ಇದೇನಿದು ಎಂದು ತಲೆಕೆಡಿಸಿಕೊಂಡ ನೆಟ್ಟಿಗರು..!

ಮರದಿಂದ ಮಾಡಿದ ಕಿರಿದಾದ ಕಾಲುವೆಯಂತಹ ರಚನೆಯನ್ನು ತೋರಿಸುವ ವಿಡಿಯೋವನ್ನು ಐಎಫ್‌ಎಸ್‌ ಅಧಿಕಾರಿ ಶನಿವಾರ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್‌ ಅಗಿದೆ. 

ifs officer shares video of unique structure built on hill stream can you guess what it is ash
Author
First Published Jul 10, 2023, 12:12 PM IST | Last Updated Jul 10, 2023, 12:12 PM IST

ನವದೆಹಲಿ (ಜುಲೈ 10, 2023): ವಿಭಿನ್ನ ಭೌಗೋಳಿಕ ಸ್ಥಳಗಳಿಗೆ ಆ ಸ್ಥಳದ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ತಮ್ಮದೇ ಆದ ವಿಶಿಷ್ಟ ಮೂಲಸೌಕರ್ಯ ಅಗತ್ಯವಿರುತ್ತದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ವೈಭವ್ ಸಿಂಗ್ ಅವರು ಮರದಿಂದ ಮಾಡಿದ ಕಿರಿದಾದ ಕಾಲುವೆಯಂತಹ ರಚನೆಯನ್ನು ತೋರಿಸುವ ವಿಡಿಯೋವನ್ನು ಶನಿವಾರ ಹಂಚಿಕೊಂಡಿದ್ದಾರೆ. 

ಧುಮ್ಮಿಕ್ಕುವ ನೀರಿನಿಂದ ತುಂಬಿದ ರಚನೆಯ ವಿಡಿಯೋ ಕ್ಲಿಪ್‌ ಅನ್ನು ಟ್ವೀಟ್‌ ಮಾಡಿರುವ ವೈಭವ್‌ ಸಿಂಗ್, “ಉತ್ತರಾಖಂಡ ಮತ್ತು ಹಿಮಾಚಲದ ಗಡಿಯಲ್ಲಿರುವ ಟನ್ಸ್ ವಿಭಾಗದ ಅರಣ್ಯದಲ್ಲಿ ಅಧಿಕೃತ ಪ್ರವಾಸದಲ್ಲಿದ್ದಾಗ, ಬೆಟ್ಟದ ಹೊಳೆಯ ಮೇಲೆ ನಿರ್ಮಿಸಲಾದ ಈ ಆಸಕ್ತಿದಾಯಕ ರಚನೆಯನ್ನು ನಾನು ನೋಡಿದೆ, ಅದು ಏನಾಗಿರಬಹುದು ಎಂದು ಯಾರಾದರೂ ಊಹಿಸುತ್ತೀರಾ?’’ ಎಂದು ಅವರು ಕೇಳಿದ್ದಾರೆ. 

ಇದನ್ನು ಓದಿ: ವೈದ್ಯರಿಗೆ ನಕಲಿ 500 ರೂ. ಫೀಸ್‌ ಕೊಟ್ಟು ಹೋದ ರೋಗಿ: ಮೋಸ ಹೋದ ಬಗ್ಗೆ ಡಾಕ್ಟರ್‌ ಹೇಳಿಕೊಂಡಿದ್ದು ಹೀಗೆ..

ಈ ವಿಡಿಯೋ 10 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದ್ದು, ಜನರು ಈ ರಚನೆ ಏನಾಗಿರಬಹುದು ಎಂದು ಊಹಿಸಿದ್ದಾರೆ. ಹಲವರು ವಿಭಿನ್ನ ರೀತಿಯಲ್ಲಿ ಈ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ. ವೈಭವ್‌ ಸಿಂಗ್ ಅವರ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ಟ್ವಿಟ್ಟರ್‌ ಬಳಕೆದಾರರು, “ಹತ್ತಿರದ ಹಿಟ್ಟಿನ ಗಿರಣಿ ನಡೆಸಲು ನೀರಿನ ಕಾಲುವೆ. ಈ ನೀರಿನ ಹಿಟ್ಟಿನ ಗಿರಣಿಗಳನ್ನು ಹಿಮಾಚಲ ಪ್ರದೇಶದಲ್ಲಿ ಘರತ್ ಎಂದು ಕರೆಯಲಾಗುತ್ತದೆ’’ ಎಂದು ತಿಳಿಸಿದ್ದಾರೆ.

ಹಾಗೆ, ಇನ್ನೊಬ್ಬರು "ಇವುಗಳು ಎತ್ತರದ ಪ್ರದೇಶದಿಂದ ರಸ್ತೆಗೆ ಮರದ ದಿಮ್ಮಿಗಳನ್ನು ಸಾಗಿಸಲು ಬಳಸಲ್ಪಡುತ್ತವೆ, ನೀರಿನ ಹರಿವು ಅದರ ಆಕಾರ ಮತ್ತು ಗಾತ್ರದ ಮೇಲೆ ಪರಿಣಾಮ ಬೀರದೆ ದೂರವನ್ನು ಪ್ರಯಾಣಿಸಲು ಮರದ ದಿಮ್ಮಿಗಳಿಗೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಅರಣ್ಯ ಇಲಾಖೆಯು ಗುತ್ತಿಗೆದಾರರ ಸಹಾಯದಿಂದ ಈ ಯೋಜನೆಗಳನ್ನು ನೋಡಿಕೊಳ್ಳುತ್ತಾರೆ’’ ಎಂದಿದ್ದಾರೆ.

ಇದನ್ನೂ ಓದಿ: ಡೆಲ್ಲಿ ಮೆಟ್ರೋ ಹಾಗೂ ಪ್ಲಾಟ್‌ಫಾರ್ಮ್‌ ಮೇಲೆ ಬಾಲಿವುಡ್‌ ಹಾಡಿಗೆ ಕುಣಿದ ಯುವತಿ: ದಯವಿಟ್ಟು ನಿಲ್ಲಿಸಿ ಎಂದ ನೆಟ್ಟಿಗರು!

ಅನೇಕ ಟ್ವಿಟ್ಟರ್ ಬಳಕೆದಾರರು ಈ ರಚನೆಯು ನೀರಾವರಿಗೆ ಸಹಾಯ ಮಾಡಲು ಬಳಸಲಾಗುವ ಕೆಲವು ರೀತಿಯ ಆಕ್ವಿಡಕ್ಟ್‌ ( ಜಲಚರಗಳಂತೆ) ಕಾಣುತ್ತದೆ ಎಂದು ಊಹಿಸಿದ್ದಾರೆ. "ಸರ್, ಇದು ಸ್ಪ್ರಿಂಗ್ ನೀರಿಗೆ ಒಂದು ಚಾನಲ್ ಆಗಿದೆ, ಬಹುಶಃ ಇದನ್ನು ನೀರಾವರಿ, ದೇಶೀಯ ಅಥವಾ ಕುಡಿಯುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ." ಎಂದೂ ಟ್ವೀಟ್‌ ಮಾಡಿದ್ದಾರೆ.

ಕೊನೆಗೆ ಭಾನುವಾರ ಈ ರಚನೆ ಬಗ್ಗೆ ಐಎಫ್‌ಎಸ್‌ ಅಧಿಕಾರಿಯೇ ಮಾಹಿತಿ ನೀಡಿದ್ದು,  "ಇದು ರಸ್ತೆಯ ಹೆಡ್‌ಗೆ ಸಾನ್ ಟಿಂಬರ್‌ ಸಾಗಣೆಗೆ ಬಳಸಲಾಗುವ ವೆಟ್‌ ಸ್ಲೈಡ್‌ ಆಗಿದೆ. ವೆಟ್‌ ಸ್ಲೈಡ್‌ ಪರ್ವತಗಳಲ್ಲಿ ಬಳಸುವ ಮರದ ಸಾಗಣೆಯ ಸಾಂಪ್ರದಾಯಿಕ ತಂತ್ರವಾಗಿದೆ. ಈ ನಿರ್ದಿಷ್ಟ ಸ್ಲೈಡ್ ಟನ್ಸ್ ಕಣಿವೆಯ ಕೋಟಿಗಾಡ್ ಸ್ಟ್ರೀಮ್‌ನಲ್ಲಿ ಹಿಮಾಚಲ ಪ್ರದೇಶ ಅರಣ್ಯ ನಿಗಮವು ನಿರ್ವಹಿಸುತ್ತಿದೆ’’ ಎಂದು ತಿಳಿಸಿದ್ದಾರೆ. ಅಲ್ಲದೆ, ಮರದ ದಿಮ್ಮಿಗಳನ್ನು ಹೇಗೆ ಸಾಗಿಸಲಾಗುತ್ತಿದೆ ಎಂಬುದನ್ನು ತೋರಿಸುವ ವಿಡಿಯೋವನ್ನೂ ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಅಬ್ಬಾ! ದೊಡ್ಡ ನರಿಯನ್ನೇ ಬೇಟೆಯಾಡಿ ಎತ್ತಿಕೊಂಡು ಹಾರಿಹೋದ ಹದ್ದು: ವಿಡಿಯೋ ವೈರಲ್

Latest Videos
Follow Us:
Download App:
  • android
  • ios