ಮರದಡಿಯಲ್ಲಿ ಮನುಷ್ಯನ ಕಾಲಿನ ಕೊಳೆತ ಬೆರಳುಗಳ ರೀತಿಯಲ್ಲಿ ಕಾಣಿಸುತ್ತಿರುವ ಫೋಟೋ ಒಂದು ಕಳೆದ ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನಿಜ. ಆದರೆ ಇದರ ಹಿಂದಿನ ಪ್ರಕೃತಿಯ ವಿಸ್ಮಯವವನ್ನು ಅರಣ್ಯಾಧಿಕಾರಿ ಬಿಚ್ಚಿಟ್ಟಿದ್ದಾರೆ. ಹಾಗಾದರೆ ಇದು ಮನುಷ್ಯನ ಕಾಲಿನ ಬೆರಳುಗಳೇ?  

ನವದೆಹಲಿ(ಏ.07) ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಒಂದು ಭಾರಿ ವೈರಲ್ ಆಗುತ್ತಿದೆ. ಬಿದ್ದಿರುವ ಮರದಡಿಯಲ್ಲಿ ಮನುಷ್ಯನ ಕೊಳೆತ ಕಾಲುಗಳ ಬೆರಳುಗಳ ಫೋಟೋ ಭಾರಿ ಸಂಚಲನ ಸೃಷ್ಟಿಸಿದೆ. ಈ ಫೋಟೋವನ್ನು ಅರಣ್ಯಾಧಿಕಾರಿ ಸಾಮ್ರಾಟ್ ಗೌಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ಏನೆಂದು ಬಲ್ಲಿರಾ ಎಂದು ಪ್ರಶ್ನಿಸಿದಾರೆ. ಇದಕ್ಕೆ ಹಲವು ಉತ್ತರಗಳು ಬಂದಿದೆ. ಮನುಷ್ಯನ ಕೊಳೆತ ಬೆರಳು, ಭೂತ, ಪಿಶಾಚಿ ಎಂದೆಲ್ಲಾ ಉತ್ತರಿಸಿದ್ದಾರೆ. ಆದರೆ ಇದು ಕೊಳತೆ ಮನುಷ್ಯನ ಬೆರಳುಗಳಲ್ಲ. ಇದು ಪ್ರಕೃತಿಯಲ್ಲಿ ಸಹಜವಾಗಿ ಬೆಳೆಯುವ ಶೀಲಿಂಧ್ರ(ಫಂಗಸ್) ಆಗಿದೆ. ಕ್ಸೈಲಾರಿಯಾ ಪಾಲಿಮೋರ್ಫಾ ಅನ್ನೋ ಫಂಗಸ್. ಇದು ಮನುಷ್ಯನ ಕೊಳತೆ ಬೆರಳುಗಳಂತೆ ಕಾಣುತ್ತದೆ ಎಂದುು ಮಾಹಿತಿ ನೀಡಿದ್ದಾರೆ.

ಕ್ಸೈಲಾರಿಯಾ ಪಾಲಿಮೋರ್ಫಾ(Xylaria polymorpha) ಫಂಗಸ್ ದಟ್ಟ ಕಾಡುಗಳಲ್ಲಿ ಬೆಳೆಯುತ್ತದೆ. ಪ್ರಮುಖವಾಗಿ ಒಣಗಿದ ಮರಳಗಳು ಬಿದ್ದ ಬಳಿಕ, ಮರಳಗಳ ಪೊಟರೆ, ದೊಡ್ಡ ಮರಗಳ ರೆಂಬೆ ಕೊಂಬೆಗಳು, ತರಗೆಲೆಗಳು, ಮರಗಳಿಂದ ಬಿದ್ದ ತೊಗಟೆಗಳಲ್ಲೂ ಈ ಫಂಗಸ್ ಬೆಳೆಯುತ್ತದೆ. ಕಾಲಿನ ಬೆರಳು, ಕೈ ಬೆರಳುಗಳ ರೀತಿಯಲ್ಲಿ ಕಾಣಿಸುತ್ತದೆ.ಈ ಶೀಲಿಂಧ್ರದಲ್ಲಿ ಹಲವು ವಿಧಗಳಿವೆ. ಹಲವು ಬಣ್ಮಗಳಿವೆ. ಕಪ್ಪು, ಬಿಳಿ, ಬೂದು ಬಣ್ಣ, ಕಡು ನೀಲಿ ಸೇರಿದಂತೆ ಹಲವು ಬಣ್ಣಗಳಲ್ಲಿ ಈ ಫಂಗಸ್ ಬೆಳೆಯುತ್ತದೆ. ಈ ಪೈಕೆ ಕೆಲ ಶಿಲೀಂದ್ರಗಳು ಸೂರ್ಯನ ಬೆಳಕು ಹಾಗೂ ಚಂದ್ರನ ಬೆಳಕಿಗೆ ಸ್ಪಷ್ಟವಾಗಿ ಹಾಗೂ ಪ್ರಖರವಾಗಿ ಗೋಚರಿಸುತ್ತದೆ. ಇದು ಹಲವರಲ್ಲಿ ಭಯದ ವಾತಾರಣವನ್ನೂ ಸೃಷ್ಟಿಸುತ್ತದೆ.

ಮಾರ್ನಿಂಗ್ ವಾಕ್ ಹೋದೋನಿಗೆ ಶಾಕ್‌: ಧುತ್ತನೇ ಎದುರಾದ National Animal:ವೀಡಿಯೋ

ಈ ಫೋಟೋವನ್ನು ಅರಣ್ಯಾಧಿಕಾರಿ ಸಾಮ್ರಾಟ್ ಗೌಡ ಹಂಚಿಕೊಂಡು ಮಹತ್ವದ ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇದು ಭೂತದ ಬೆರಳು, ಈ ಪ್ರದೇಶ ಸುತ್ತುವರಿದೆ ಪರಿಶೀಲಿಸಿದರೆ ಯಾರ ಬೆರಳು ಅನ್ನೋದು ಸ್ಪಷ್ಟವಾಗಲಿದೆ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಸಲಹೆ ನೀಡಿದ್ದಾರೆ.

Scroll to load tweet…

ಇದು ಏನೇ ಆದರೂ ನಾನು ತೆಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನನ್ನು ಎದುರಿಗೆ ಪ್ರತ್ಯಕ್ಷವಾದರೆ ನಾನು ವಿರುದ್ಧ ದಿಕ್ಕಿನಲ್ಲಿ ಓಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದು ಚಿಂಪಾಜಿಯ ಬೆರಳು ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಚಿಂಪಾಜಿಯ ಬೆರಳುಗಳ ರೀತಿಯಲ್ಲಿದೆ. ಜೊತೆಗೆ ಬಣ್ಣವೂ ಅದೇ ಇದೆ. ಹೀಗಾಗಿ ಅಡಗಿ ಕುಳಿತಿರು ಚಿಂಪಾಜಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಕಾಡಿನಲ್ಲಿ ಈ ರೀತಿಯ ಹಲವು ವಿಸ್ಮಯಗಳಿವೆ. ಆದರೆ ಇದರ ಮಾಹಿತಿ ಕೆಲವರಿಗಷ್ಟೆ ತಿಳಿದಿದೆ. ಮತ್ತೊಂದು ದುರಂತ ಎಂದರೆ ಕಾಡೇ ನಶಿಸಿರುವಾಗ ಇದನ್ನು ತಿಳಿದಕೊಳ್ಳುವುದಾದರೂ ಹೇಗೆ ಎಂದು ಹಲವರು ತಮ್ಮ ಬೇಸರ ತೋಡಿಕೊಂಡಿದ್ದಾರೆ.

ವಿಶ್ರಾಂತಿಗೆ ಜಾರಿದ ಅಮ್ಮ ಮಕ್ಕಳು: IFS ಅಧಿಕಾರಿ ಶೇರ್ ಮಾಡಿದ ಹುಲಿಯನ ಫ್ಯಾಮಿಲಿ ವೀಡಿಯೋ