ಬೆಂಗಳೂರು(ಸೆ.02): ಪ್ರಸ್ತುತ ದೇಶದಲ್ಲಿ ಕೊರೋನಾ ಸೋಂಕಿನ ಹರಡುವಿಕೆ ಈಗಿನ ಪ್ರಮಾಣದಲ್ಲೇ ಮುಂದುವರೆದರೆ ಜನವರಿ 1ರ ವೇಳೆಗೆ 1.30 ಕೋಟಿ ಜನರಲ್ಲಿ ಸೋಂಕು ಕಾಣಿಸಿಕೊಂಡು 1.8 ಲಕ್ಷ ಜನ ಮೃತರಾಗಬಹುದು. ಅನಿಯಂತ್ರಿತವಾಗಿ ಹಬ್ಬಿ ಪರಿಸ್ಥಿತಿ ಬಿಗಡಾಯಿಸಿದರೆ ಸೋಂಕಿನ ಪ್ರಕರಣ 3.20 ಕೋಟಿ ತಲುಪಿ 3.7 ಲಕ್ಷ ಜನ ಪ್ರಾಣ ಕಳೆದುಕೊಳ್ಳಬಹುದು. ಆದರೆ ಇನ್ನಷ್ಟುಹರಡದಂತೆ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಂಡರೆ ಸೋಂಕಿತರ ಸಂಖ್ಯೆ 90 ಲಕ್ಷ ತಲುಪಿ 1.4 ಲಕ್ಷ ಜನ ಸಾವಿಗೀಡಾಗಬಹುದು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತಜ್ಞರ ತಂಡ ವರದಿ ನೀಡಿದೆ.

ಕೊರೋನಾ ಎಫೆಕ್ಟ್: ಕಾರು ವಾಶಿಂಗ್‌, ಕ್ಲೀನಿಂಗ್‌ಗೆ ಇಳಿದ ಎಂಜಿನಿಯ​ರ್‍ಸ್!

ಜನರ ವರ್ತನೆ, ಸಾಮಾಜಿಕ ಅಂತರ, ಸ್ವಚ್ಛತಾ ಅಭ್ಯಾಸ, ಸರ್ಕಾರದ ಆದೇಶಗಳ ಪಾಲನೆ, ಸರ್ಕಾರದ ನೀತಿ ನಿಯಮಗಳನ್ನು ಗಮನದಲ್ಲಿರಿಸಿಕೊಂಡು ಈ ವರ್ಷದ ಅಕ್ಟೋಬರ್‌ ತಿಂಗಳಿಂದ ಮುಂದಿನ ವರ್ಷದ ಮಾಚ್‌ರ್‍ ತಿಂಗಳವರೆಗೆ ಕೊರೋನಾ ಸೋಂಕಿನ ಪ್ರಕರಣಗಳ ಎಷ್ಟಾಗಬಹುದೆಂದು ವರದಿಯಲ್ಲಿ ವಿವರಿಸಲಾಗಿದೆ.

ಐಐಎಸ್‌ಸಿಯ ಪ್ರೊ. ಶಶಿಕುಮಾರ್‌ ಜಿ, ಪ್ರೊ. ದೀಪಕ್‌ ಕುಮಾರ್‌ ಮತ್ತವರ ತಂಡ ಜುಲೈ ತಿಂಗಳಿನಲ್ಲಿ ವರದಿಯೊಂದನ್ನು ನೀಡಿ ಕೊರೋನಾ ಹಬ್ಬುವಿಕೆಯನ್ನು ನಿಯಂತ್ರಿಸಲು ವಿಫಲವಾದರೆ ಸೆಪ್ಪೆಂಬರ್‌ ಒಂದರ ಹೊತ್ತಿಗೆ ದೇಶದಲ್ಲಿ 35 ಲಕ್ಷ ಕೊರೋನಾ ಪ್ರಕರಣಗಳು ವರದಿಯಾಗಲಿದೆ ಎಂದು ನಿಖರವಾಗಿ ಅಂದಾಜಿಸಿತ್ತು. ಇದೀಗ ಮತ್ತೆ 2021ರ ಮಾಚ್‌ರ್‍ವರೆಗಿನ ಕೊರೋನಾ ಹಬ್ಬುವ ಸಾಧ್ಯತೆಗಳ ಬಗೆಗಿನ ವರದಿಯೊಂದನ್ನು ಇದೇ ತಂಡ ರೂಪಿಸಿದೆ.

ಕೊರೋನಾ ಭೀತಿ: ಪಬ್‌, ಬಾರ್‌ಗಳತ್ತ ಸುಳಿಯದ ಗ್ರಾಹಕರು!

ಮಾಚ್‌ರ್‍ 24ರ ವೇಳೆಗೆ:

2021 ಮಾಚ್‌ರ್‍ 24 ಹೊತ್ತಿಗೆ ಈಗಿರುವ ವೇಗದಲ್ಲೇ ಕೋವಿಡ್‌ ಹಬ್ಬಿದರೆ 1.40 ಕೋಟಿ ಜನರಿಗೆ ಸೋಂಕು ಅಂಟಲಿದ್ದು ಇದರಲ್ಲಿ 2 ಲಕ್ಷ ಜನ ಪ್ರಾಣ ಕಳೆದುಕೊಳ್ಳಲಿದ್ದಾರೆ. ಒಂದು ವೇಳೆ ಈ ಅವಧಿಯಲ್ಲಿ ಕೊರೋನಾ ಸೋಂಕು ಇನ್ನಷು ವ್ಯಾಪಕವಾಗಿ ಹಬ್ಬಿದರೆ 4.9 ಕೋಟಿ ಸೋಂಕಿತರಾಗಿರಲಿದ್ದು 5.8 ಲಕ್ಷ ಜನ ಸಾವನ್ನಪ್ಪಲಿದ್ದಾರೆ. ಆದರೆ ಕೊರೋನಾದ ಹಬ್ಬುವಿಕೆಯನ್ನು ನಿಯಂತ್ರಿಸಲು ಸಾಧ್ಯವಾದರೆ 90.1 ಲಕ್ಷ ಪ್ರಕರಣಗಳು ಮತ್ತು 1.43 ಲಕ್ಷ ಸಾವು ಸಂಭವಿಸುವ ಅಂದಾಜನ್ನು ಈ ತಂಡ ಮಾಡಿದೆ.

ಅಕ್ಟೋಬರ್‌ನಲ್ಲಿ 17.2 ಲಕ್ಷ ಸಕ್ರಿಯ ಪ್ರಕರಣ:

ಈಗ ಕೋವಿಡ್‌ ಹಬ್ಬುವಿಕೆ ಗಮನಿಸಿದರೆ ಅಕ್ಟೋಬರ್‌ ಮಧ್ಯದಲ್ಲಿ 17.2 ಲಕ್ಷ ಸಕ್ರಿಯ ಪ್ರಕರಣಗಳಿರುವ ಸಂಭವವಿದೆ. ಇದು ಗರಿಷ್ಠ ಪ್ರಮಾಣದ ಸಕ್ರಿಯ ಪ್ರಕರಣವಾಗಿರಲಿದೆ. ಆದರೆ ಮಾಚ್‌ರ್‍ ಅಂತ್ಯಕ್ಕೆ ಇದು 46,000 ಸಕ್ರಿಯ ಪ್ರಕರಣಕ್ಕೆ ಇಳಿಯಲಿದೆ. ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ ಡಿಸೆಂಬರ್‌ ಕೊನೆಯ ವಾರದಲ್ಲಿ 46.5 ಲಕ್ಷಗಳಷ್ಟುಸಕ್ರಿಯ ಪ್ರಕರಣಗಳಿರಲಿದ್ದು, ಮಾಚ್‌ರ್‍ ಕೊನೆಯ ಹೊತ್ತಿಗೆ 20.4 ಲಕ್ಷ ಪ್ರಕರಣಗಳಿರಲಿವೆ. ಒಂದು ವೇಳೆ ಕೊರೋನಾ ಹಬ್ಬುವಿಕೆಯನ್ನು ನಿಯಂತ್ರಿಸುವಲ್ಲಿ ದೇಶ ಸಫಲವಾದರೆ ಸೆಪ್ಟೆಂಬರ್‌ ಕೊನೆಯ ವಾರ ದೇಶದಲ್ಲಿ 13.1 ಲಕ್ಷ ಸಕ್ರಿಯ ಪ್ರಕರಣಗಳಿರಲಿದ್ದು ಮಾಚ್‌ರ್‍ ಕೊನೆಯ ವಾರದ ಹೊತ್ತಿಗೆ 5 ಸಾವಿರ ಸಕ್ರಿಯ ಪ್ರಕರಣಗಳಿರಲಿವೆ.

ಕೊರೋನಾತಂಕ ನಡುವೆ ಆನ್‌ಲೈನ್‌ಮೂಲಕ ಮನೆ ಬಾಗಿಲಿಗೆ ಮದ್ಯ!

‘ರಾಷ್ಟ್ರೀಯ ದತ್ತಾಂಶವನ್ನು ಪಡೆದುಕೊಂಡು ಈ ಲೆಕ್ಕಾಚಾರವನ್ನು ಹಾಕಿದ್ದೇವೆæ. ನಾವು ಈ ಲೆಕ್ಕಾಚಾರವನ್ನು ಹಾಕುವಾಗ ಜನರ ವರ್ತನೆ, ಸಾಮಾಜಿಕ ಅಂತರ, ಸ್ವಚ್ಛತಾ ಅಭ್ಯಾಸ, ಸರ್ಕಾರದ ಆದೇಶಗಳ ಪಾಲನೆ, ಸರ್ಕಾರದ ನೀತಿ ನಿಯಮಗಳನ್ನು ಗಮನದಲ್ಲಿರಿಸಿಕೊಂಡಿದ್ದೇವೆ. ಹಾಗೆಯೇ ಎಂದಿನಂತಿರುವ ದೈನಂದಿನ ಚಟುವಟಿಕೆ ಮತ್ತು ಲಾಕ್‌ ಡೌನ್‌ ನಲ್ಲಿನ ಮತ್ತಷ್ಟುವಿನಾಯಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇವೆ’ ಎಂದು ವಿಜ್ಞಾನಿಗಳ ತಂಡದ ಸದಸ್ಯರು ಹೇಳಿದ್ದಾರೆ.