ಮುಂಬೈ(ಫೆ.16): ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಆದರೆ ಆರಂಭದಲ್ಲಿದ್ದ ಭಯ, ಆತಂಕ ಈಗ ಯಾರಲ್ಲೂ ಕಾಣುತ್ತಿಲ್ಲ. ಇಷ್ಟೇ ಅಲ್ಲ ಭಾರತದಲ್ಲಿ ಲಸಿಕೆ ವಿತರಣೆ ಕೂಡ ಆರಂಭಗೊಂಡಿದೆ. ಹೀಗಾಗಿ ಯಾರೂ ಕೂಡ ಕೊರೋನಾ ಮಾರ್ಗಸೂಚಿ ಪಾಲಿಸುತ್ತಿಲ್ಲ. ಇದರಿಂದ ಮುಂಬೈ, ಕೇರಳ ಸೇರಿದಂತೆ ಕೆಲ ನಗರ ಹಾಗೂ ರಾಜ್ಯಗಳಲ್ಲಿ ಕೊರೋನಾ ಮತ್ತೆ ವ್ಯಾಪಕವಾಗಿ ಹರಡುತ್ತಿದೆ.

ಮತ್ತೆ ವಕ್ಕರಿಸಿದ ಮಹಾಮಾರಿ : ಅಪಾರ್ಟ್‌ಮೆಂಟ್‌ ಪಾರ್ಟಿಯಿಂದ ಬಂದ ಕೊರೋನಾ

ಮಹಾರಾಷ್ಟ್ರ ಹಾಗೂ ಮುಂಬೈನಲ್ಲಿ ಕೊರೋನಾ ಮತ್ತೆ ಹರಡುತ್ತಿದೆ. ಜನರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಶುಚಿತ್ವಕ್ಕೆ ಗಮನ ನೀಡುತ್ತಿಲ್ಲ. ಇದರಿಂದ ಕೊರೋನಾ ನಿಯಂತ್ರಣಕ್ಕೆ ಸಿಗದೇ ಹೆಚ್ಚಾಗುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್ ಕುರಿತು ಚಿಂತನೆ ನಡೆಸಿದ್ದೇವೆ. ಆದರೆ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮುಂಬೈ ಮೇಯರ್ ಪೆಡ್ನೇಕರ್ ಹೇಳಿದ್ದಾರೆ.

ಮಾರ್ಚ್‌ನಿಂದ 2ನೇ ಹಂತದ ಕೊರೋನಾ ಲಸಿಕೆ ವಿತರಣೆ; 50 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್!

ಲಾಕ್‌ಡೌನ್ ಜಾರಿಯಾಗುವುದು ಜನರ ಕೈಯಲ್ಲಿದೆ. ಮಾರ್ಗಸೂಚಿ ಪಾಲಿಸಿ ಸಹಕರಿಸಿದರೆ ಲಾಕ್‌ಡೌನ್ ಜಾರಿ ಮಾಡುವ ಅವಶ್ಯತೆ ಬರುವುದಿಲ್ಲ. ಆದರೆ ಇದೇ ರೀತಿ ಮುಂದುವರಿದರೆ ಲಾಕ್‌ಡೌನ್ ಜಾರಿ ಮಾಡಲಾಗುವುದು ಎಂದು ಕಿಶೋರಿ ಹೇಳಿದ್ದಾರೆ. ಸದ್ಯ ಅಂತಿಮ ನಿರ್ಧಾರ ಕೈಗೊಂಡಿಲ್ಲ, ಆದರೆ ಮೈಮರತರೆ ಅಪಾಯ ಕಠಿಣ ನಿರ್ಧಾರಕ್ಕಿಂತ ಬೇರೆ ಮಾರ್ಗವಿಲ್ಲ ಎಂದಿದ್ದಾರೆ.

ಕೆಲ ವಲಯ, ಪ್ರದೇಶಗಳಲ್ಲಿ ಲಾಕ್‌ಡೌನ್ ಮಾಡುವ ಕುರಿತು ಅಂತಿಮ ನಿರ್ಧಾರ ಘೋಷಸಲಿದ್ದೇವೆ. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮೇಯರ್ ಹೇಳಿದ್ದಾರೆ. ಮತ್ತೆ ಲಾಕ್‌ಡೌನ್ ಎಂದು ಮುಂಬೈ ನಗರಿ ಜನ ಆತಂಕಗೊಂಡಿದ್ದಾರೆ. ಇದೇ ಆತಂಕ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಕುರಿತು ಇದ್ದಿದ್ದರೆ, ಈ ಪರಿಸ್ಥಿತಿ ಇರುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.