ಬೊಮ್ಮನಹಳ್ಳಿ (ಫೆ.16) : ಬಿಳೇಕಹಳ್ಳಿ ಅಪಾರ್ಟ್ಮೆಂಟ್ ನಲ್ಲಿ  103 ಜನರಿಗೆ ಕೋವಿಡ್ ಮಹಾಮಾರಿ ವಕ್ಕರಿಸಿದೆ.  ಫೆ. 6 ರಂದು ನಡೆದ ಪಾರ್ಟಿ ಪರಿಣಾಮವಾಗಿ ಅಪಾರ್ಟ್ಮೆಂಟ್ ಗೆ ಆತಂಕ ಎದುರಾಗಿದೆ. 

ಬೊಮ್ಮನಹಳ್ಳಿ‌ ಬಿಬಿಎಂಪಿ ವ್ಯಾಪ್ತಿಯ ಬಿಳೇಕಳ್ಳಿಯ SNN ಲೇಕ್ ವ್ಯೂ ಅಪಾರ್ಟ್ ಮೆಂಟ್ನಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಫೆ.15 ರಂದು  36 ಜನರಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಆದರೆ ಇಂದು 70 ಜನರಿಗೆ  ಅಸಿಂಪ್ಟಾಮ್ಯಾಟಿಕ್ ಆಗಿದೆ.

ಮಾರ್ಚ್‌ನಿಂದ 2ನೇ ಹಂತದ ಕೊರೋನಾ ಲಸಿಕೆ ವಿತರಣೆ; 50 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್! ..

ಜ್ವರ ,ಕೆಮ್ಮು ಲಕ್ಷಣಗಳು ಕಂಡು ಬಂದಿದ್ದರಿಂದ ಪರೀಕ್ಷೆಗೆ ಒಳಪಡಿಸಲಾಗಿತ್ತು ಈ ವೇಳೆ 70 ಜನರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. 453 ಪ್ಲ್ಯಾಟ್ ಗಳಿರುವ ಅಪಾರ್ಟ್ಮೆಂಟ್ ನ್ಲಿ 25 ರಿಂದ 35 ವರ್ಷದೊಳಗಿನವರಿಗೆ ಕೊರೊನಾ ಮಹಾಮಾರಿ ವಕ್ಕರಿಸಿದೆ.  ಕೊರೋನಾ ಟೆಸ್ಟ್ ಮಾಡಲಾಗುತ್ತಿರುವ ಹಿನ್ನಲೆಯಲ್ಲಿ ಅಪಾರ್ಟ್ಮೆಂಟ್ ಒಳಗೆ ಯಾರಿಗೂ ಪ್ರವೇಶ ನೀಡುತ್ತಿಲ್ಲ. ಅಪಾರ್ಟ್ಮೆಂಟ್ ನಿಂದ ಯಾರನ್ನೂ ಹೊರಕ್ಕೆ ಬಿಡುತ್ತಿಲ್ಲ. 

"

ಬಿಬಿಎಂಪಿ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿದ್ದು ,  ಅಪಾರ್ಟ್ಮೆಂಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡಲಾಗಿದೆ.