ಗಣೇಶ ಹಬ್ಬಕ್ಕೆ ಡಿಜೆ ಲೇಸರ್ ಬಳಕೆ ಹಾನಿಕಾರವಾಗಿದ್ದರೆ ಈದ್‌ಗೂ ಹಾನಿ, ಅರ್ಜಿ ತಿರಸ್ಕರಿಸಿದ ಹೈಕೋರ್ಟ್!

ಗಣೇಶ ಹಬ್ಬದ ವೇಳೆ ಡಿಜೆ ಸೌಂಡ್, ಲೈಸರ್ ಲೈಟ್ಸ್ ಬಳಕೆ ಹಾನಿಕಾರಕವಾಗಿದ್ದರೆ, ಇದು ಈದ್ ಹಬ್ಬಕ್ಕೂ ಅನ್ವಯವಾಗಲಿದೆ ಎಂದು ಬಾಂಬೆ ಹೈಕೋರ್ಟ್ ಅರ್ಜಿ ತಿರಸ್ಕರಿಸಿದೆ. ಏನಿದು ಪ್ರಕರಣ? 

If DJ harmful for ganesh chaturthi then its eid too bombay high court rejects pil ckm

ಮುಂಬೈ(ಸೆ.19) ಹಬ್ಬಗಳ ಸಂದರ್ಭದಲ್ಲಿ ಬಳಸುವ ಡಿಜೆ ಸೌಂಡ್, ಲೇಸರ್ ಲೈಂಟಿಗ್ಸ್‌ಗೆ ನಿಷೇಧ ಹೇರಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೇ ಹೈಕೋರ್ಟ್ ತಿರಸ್ಕರಿಸಿದೆ. ಇದೇ ವೇಳೆ ಗಣೇಶ ಹಬ್ಬಕ್ಕ ಈ ಡಿಜೆ, ಲೇಸರ್ ಬಳಕೆ ಹಾನಿಯಾಗಿದ್ದರೆ, ಈದ್ ಮಿಲಾದ್‌ಗೂ ಹಾನಿಕಾರವಾಗಿದೆ. ಇಂತಹ ಅರ್ಜಿ ಸಲ್ಲಿಸುವ ಮೊದಲು ಈ ಕುರಿತು ಅಧ್ಯಯ ಮಾಡಿ ಅರ್ಜಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿರುದ್ಧ ಗರಂ ಆಗಿದೆ.

ಚೀಫ್ ಜಸ್ಟೀಸ್ ಡಿಕೆ ಉಪಾಧ್ಯಾಯ, ಜಸ್ಟೀಸ್ ಅಮಿತ್ ಬೋಕರ್ ಅವರಿದ್ದ ಪೀಠ ಈ  ಪಿಐಎಲ್ ವಿಚಾರಣೆ ನಡೆಸಿತು. ಅರ್ಜಿದಾರರು ಪ್ರಮುಖವಾಗಿ ಈದ್ ಮಿಲಾದ್ ಮೆರವಣಿಗೆ ವೇಳೆ ಬಳಸುವ ಡಿಜೆ ಸೌಂಡ್, ಲೇಸರ್ ಲೈಟಿಂಗ್ಸ್‌ನಿಂದ  ಮನುಷ್ಯನ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಇಸ್ಲಾಂನ ಖುರಾನ್ ಹಾಗೂ ಹದೀಸ್‌ಗಳಲ್ಲಿ ಈ ರೀತಿ ಡಿಜೆ, ಲೇಸರ್ ಬಳಕೆಯ ಉಲ್ಲೇಖಗಳಿಲ್ಲ. ಹೀಗಾಗಿ ಈ ಹಾನಿಕಾರಗಳ ಬಳಕೆಗೆ ನಿರ್ಬಂಧ ಹೇರಲು ಕೋರ್ಟ್ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು.

ಫಸ್ಟ್ ಡೇಟ್‌ನಲ್ಲೇ ಅಪರಿಚಿತನ ಜೊತೆ ಹುಡುಗಿ ರೂಂಗೆ ತೆರಳಲ್ಲ, ಬಲಾತ್ಕಾರ ಆರೋಪ ಖುಲಾಸೆಗೊಳಿಸಿದ ಕೋರ್ಟ್!

ಅರ್ಜಿ ವಿಚಾರಣೆ ಹೈಕೋರ್ಟ್ ದ್ವಿಸದಸ್ಯ ಪೀಠ, ಗಣೇಶ ಹಬ್ಬಕ್ಕೆ ಡಿಜೆ ಸೌಂಡ್, ಲೇಸರ್ ಲೈಂಟಿಂಗ್ ಬಳಕೆ ಹಾನಿಕಾರವಾಗಿದ್ದರೆ, ಈದ್ ಮಿಲಾದ್ ಮೆರವಣಿಗೆಗೂ ಹಾನಿಕಾರವಾಗಿದೆ ಎಂದಿದೆ. ವಿಚಾರಣೆ ವೇಳೆ ಪಿಐಎಲ್ ಅರ್ಜಿದಾರರ ಪರ ವಕೀಲ ಒವೈಸ್ ಪೆಚ್‌ಕಾರ್, ಗಣೇಶ ಹಬ್ಬದ ವೇಳೆ ಬಳಸು ವಿಪರೀತ ಶಬ್ದ ಬಳಕೆಗೆ ಈಗಾಗಲೇ ನಿರ್ಬಂಧ ಹೇರಿರುವ ಆದೇಶವನ್ನು ಉಲ್ಲೇಖಿಸಿದ್ದಾರೆ.ಈ ಕುರಿತು ಪೀಠ ಮಹತ್ವದ ವಿಚಾರ ಮುಂದಿಟ್ಟಿದೆ. 

ಲೇಸರ್ ಲೈಟಿಂಗ್ಸ್ ಆರೋಗ್ಯಕ್ಕೆ ಹಾನಿಕಾರಕ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದೀರಿ. ಇದಕ್ಕೆ ಆಧಾರಗಳೇನು? ಯಾವುದಾದರೂ ಉದಾಹರಣಗಳಿವೆಯಾ? ಈ ಅರ್ಜಿ ಸಲ್ಲಿಕೆ ಮೊದಲು ಈ ಕುರಿತು ಅಧ್ಯಯನ ನಡೆಸಬೇಕು. ಬಳಿಕ ಈ ಲೈಟಿಂಗ್ಸ್ ಈ ರಿತಿಯ ಪರಿಣಾಮ ಬೀರಲಿದೆ ಅನ್ನೋ ಮಾಹಿತಿಯನ್ನು ಆದಾರ ಸಹಿತ ನೀಡಬೇಕು. ಕೋರ್ಟ್‌ನಲ್ಲಿರುವರು ಎಲ್ಲದರಲ್ಲೂ ಜ್ಞಾನಿಗಳಲ್ಲ. ಆದರೆ ಯಾವುದೇ ಅಧ್ಯಯನಗಳಿಲ್ಲದೆ ಸುಮ್ಮನೆ ಅರ್ಜಿ ಸಲ್ಲಿಸುವ ಪರಿಪಾಠ ಹೆಚ್ಚಾಗುತ್ತಿದೆ ಎಂದು ಬಾಂಬೆ ಹೈಕೋರ್ಟ್ ಗರಂ ಆಗಿದೆ. ಅರ್ಜಿ ತಿರಸ್ಕರಿಸಿದ ಹೈಕೋರ್ಟ್, ಈ ರೀತಿಯ ಅರ್ಜಿಗಳನ್ನು ಆಧಾರವಾಗಿಟ್ಟುಕೊಂಡು ಸಾರ್ವಜನಿಕ ಹಬ್ಬಗಳಿಗೆ ನಿರ್ದೇನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ದೃಷ್ಟಿದೋಷ ಕೋಟಾ ಕೋರಿದ್ದ ವಿದ್ಯಾರ್ಥಿನಿಗೆ ಹೈಕೋರ್ಟ್ ಶಾಕ್..!

Latest Videos
Follow Us:
Download App:
  • android
  • ios